For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿ ಮುಖದಲ್ಲಿ ಕೊನೆಗೂ ಮೂಡಿದ ನಗು

  |

  ಕಳೆದ ವರ್ಷದ ಜೂನ್ ವರೆಗೆ ಹೆಚ್ಚಿನ ಜನಕ್ಕೆ ಗೊತ್ತೇ ಇರದಿದ್ದ ನಟಿ ರಿಯಾ ಚಕ್ರವರ್ತಿ ಹೆಸರು ಆ ನಂತರ ಇಡೀ ವರ್ಷ ಚಾಲ್ತಿಯಲ್ಲಿತ್ತು, ಕಾರಣ ಸುಶಾಂತ್ ಸಿಂಗ್ ಸಾವು.

  ಸುಶಾಂತ್ ಸಿಂಗ್ ಸಾವಿನ ನಂತರ ರಿಯಾ ಚಕ್ರವರ್ತಿ ಅನುಭವಿಸಿದ ಮಾನಸಿಕ, ದೈಹಿಕ ಯಾತನೆ ಎಂಥವರಿಗೂ ಅರ್ಥವಾಗುವಂತಹದ್ದು. ಅದರಲ್ಲಿಯೂ ಕೆಲ ಮಾಧ್ಯಮಗಳು ರಿಯಾ ರನ್ನು ಮಾತಿನಲ್ಲಿ ಕುಕ್ಕಿದರು ಹದ್ದುಗಳಂತೆ.

  ಮೊದಲಿಗೆ ಪ್ರಿಯಕರನ ಸಾವು, ಮಾಧ್ಯಮಗಳ , ಸಾಮಾಜಿಕ ಜಾಲತಾಣ ಟ್ರೋಲ್‌ಗಳ ಪಾಲಿಗೆ ವಿಲನ್, ಕೆಲ ರಾಜಕಾರಣಿಗಳ ಪಾಲಿಗೆ ಆಟದ ಬೊಂಬೆಯಾಗಿ, ನಂತರ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಒಂದು ತಿಂಗಳ ಸೆರೆವಾಸ ಅನುಭವಿಸಬೇಕಾಯಿತು. 'ಮಗಳು ಆತ್ಮಹತ್ಯೆಯ ಮಾತನ್ನಾಡುತ್ತಿದ್ದಾಳೆ' ಎಂದಿದ್ದರು ರಿಯಾರ ತಾಯಿ.

  ಆದರೆ ಇಷ್ಟೆಲ್ಲಾ ಆದ ಬಳಿಕ ರಿಯಾ ತುಸು ಸಾವರಿಸಿಕೊಂಡಂತಿದ್ದಾರೆ. ರಿಯಾರ ಮುಖದಲ್ಲಿ ಮತ್ತೆ ಸಣ್ಣ ನಗು ಅರಳಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಿಯಾರ ಎರಡು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ರಿಯಾ ಮುಖದಲ್ಲಿ ನಗು

  ರಿಯಾ ಮುಖದಲ್ಲಿ ನಗು

  ಬಹಳ ದಿನಗಳ ಬಿಳಿಕ ರಿಯಾ ರ ಗೆಳೆಯ, ಕುಟುಂಬಕ್ಕೂ ಆಪ್ತವಾಗಿರುವ ಎಂಟಿವಿ ರೋಡೀಸ್ ಖ್ಯಾತಿಯ ರಾಜೀವ್ ಲಕ್ಷ್ಮಣನ್ ಅನ್ನು ಭೇಟಿಯಾಗಿದ್ದಾರೆ ರಿಯಾ. ಈ ಸಂದರ್ಭದ ಚಿತ್ರಗಳನ್ನುನ ರಾಜೀವ್ ಲಕ್ಷ್ಮಣನ್ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ರಿಯಾ ಮುಖದಲ್ಲಿ ಹಳೆಯ ನಗು ಗಮನ ಸೆಳೆಯುತ್ತಿದೆ.

  ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿ

  ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿ

  ರಾಜೀವ್ ಲಕ್ಷ್ಮಣ್ ನ ಮಗನ ಮೊದಲನೇ ವರ್ಷದ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ರಿಯಾ, ಜೊತೆಗೆ ರಾಜೀವ್, ರಘು ರಾಮ್ ಹಾಗೂ ಕುಟುಂಬದೊಂದಿಗೆ ಕೆಲ ಕಾಲ ಕಳೆದಿದ್ದಾರೆ.

  'ಚೆಹ್ರೆ' ಸಿನಿಮಾ ಬಿಡುಗಡೆಗೆ ತಯಾರು

  'ಚೆಹ್ರೆ' ಸಿನಿಮಾ ಬಿಡುಗಡೆಗೆ ತಯಾರು

  'ಚೆಹ್ರೆ' ಎಂಬ ಸಿನಿಮಾದಲ್ಲಿ ಕಳೆದ ವರ್ಷ ಲಾಕ್‌ಡೌನ್‌ಗೆ ಮುನ್ನವೇ ನಟಿಸಿದ್ದಾರೆ ರಿಯಾ ಚಕ್ರವರ್ತಿ. ಈ ಸಿನಿಮಾದ ಬಿಡುಗಡೆ ಬಾಕಿ ಇದೆ. ಇದೇ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ ಸಹ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ಕೆಲವೇ ದಿನಗಳಲ್ಲಿ ಆಗಲಿದೆ ಎಂದಿದ್ದಾರೆ ನಿರ್ದೇಶಕ ರೂಮಿ. ರಿಯಾ ಚಕ್ರವರ್ತಿಗೆ ಇನ್ನೂ ಹಲವು ಸಿನಿಮಾಗಳು ಒದಗಿ ಬರುತ್ತಿವೆ. ಯಾವುದನ್ನೂ ಅಂತಿಮ ಮಾಡಿಲ್ಲ ರಿಯಾ.

  ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ರಿಯಾ

  ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ರಿಯಾ

  ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ರಿಯಾ ಚಕ್ರವರ್ತಿ ಒಂದು ತಿಂಗಳ ಜೈಲುವಾಸದ ಬಳಿಕ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಸಹ ಇದೇ ಪ್ರಕರಣದಲ್ಲಿ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.

  English summary
  Rhea Chakraborty participated in her friend Rajiv Lakshman's son birthday. photos viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X