For Quick Alerts
  ALLOW NOTIFICATIONS  
  For Daily Alerts

  ಬಿಕಿನಿ ಫೋಟೋ ಕೇಳಿದ ಅಭಿಮಾನಿಗೆ ಸೋನಾಕ್ಷಿ ಕೊಟ್ಟ ಉತ್ತರ ನೋಡಿ

  |

  'ದಬಾಂಗ್' ಸುಂದರಿ ಸೋನಾಕ್ಷಿ ಸಿನ್ಹಾ ತಮ್ಮ ಇನ್ಸ್ಟಾಗ್ರಾಂನಲ್ಲಿ 'Ask Me Anything' ಎಂಬ ಹೆಸರಿನಲ್ಲಿ ಅಭಿಮಾನಿಗಳ ಜೊತೆ ಸಂವಾದ ಮಾಡಿದ್ದರು. ಅದರಲ್ಲಿ ಅಭಿಮಾನಿಯೊಬ್ಬ 'ಮೇಡಂ ನಿಮ್ಮ ಬಿಕಿನಿ ಫೋಟೋ ಹಾಕಿ' ಎಂದು ಕೇಳಿದ. ಆ ಅಭಿಮಾನಿಗೆ ಸೋನಾಕ್ಷಿ ಸಿನ್ಹಾ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

  ಇವತ್ತು ನನಗೆ ರಜೆ, ಬನ್ನಿ ಮಾತಾಡೋಣ ಎಂದು ಸಂವಾದಕ್ಕೆ ಚಾಲನೆ ಕೊಟ್ಟಿದ್ದರು ಸೋನಾಕ್ಷಿ ಸಿನ್ಹಾ. ಈ ವೇಳೆ ನೆಟ್ಟಿಗನೊಬ್ಬ ಬಿಕಿನಿ ಫೋಟೋ ಪೋಸ್ಟ್ ಮಾಡಿ ಎಂದು ಕೇಳಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ 'ಸನ್ ಆಫ್ ಸರ್ದಾರ್' ನಟಿ ಚಿರತೆ ಶೈಲಿಯ ಬಿಕಿನಿಯ (ಟು ಪೀಸ್) ಚಿತ್ರ ಹಂಚಿಕೊಂಡು ಸಖತ್ ಆಗಿ ಉತ್ತರ ಕೊಟ್ಟಿದ್ದಾರೆ.

  ಮತ್ತೊಬ್ಬ ಅಭಿಮಾನಿ ''ನಿಮ್ಮ ಪಾದಗಳ ಫೋಟೋ ಹಾಕಿ'' ಎಂದು ಕೇಳಿದ್ದಾನೆ. ಅದಕ್ಕೆ ಸೋನಾಕ್ಷಿ, ''ಆಗಲ್ಲ'' ಎಂದು ಹೇಳಿದ್ದಾರೆ. ದೇಹದ ತೂಕ ಕಡಿಮೆಗೊಳಿಸಿಕೊಳ್ಳುವುದರ ಬಗ್ಗೆಯೂ ಅಭಿಮಾನಿಯೊಬ್ಬ ಕೇಳಿದ್ದಾನೆ. ''ನನ್ನ ತೂಕ ಇಳಿಸಿಕೊಳ್ಳಲು ನಾನು ಯಾವ ರೀತಿ ಆಹಾರ ತಿನ್ನಬೇಕು'' ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸಿರುವ ನಟಿ, ''ಗಾಳಿ ಸೇವನೆ ಮಾಡಿ'' ಎಂದಿದ್ದಾರೆ.

  ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆಯೂ ಸೋನಾಕ್ಷಿ ಸಿನ್ಹಾ ಪದೇ ಪದೇ ಟ್ರೋಲ್‌ಗೆ ಗುರಿಯಾಗುತ್ತಿದ್ದರು. ಅದರಲ್ಲೂ ಟ್ವಿಟ್ಟರ್‌ನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ದಬಾಂಗ್ ಹುಡುಗಿ ಟಾರ್ಗೆಟ್ ಆಗ್ತಿದ್ದರು. ಇದರಿಂದ ತೀವ್ರವಾಗಿ ಬೇಸತ್ತ ನಟಿ ಟ್ವಿಟ್ಟರ್‌ನಿಂದ ದೂರ ಉಳಿದರು. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾತನಾಡಿರುವ ನಟಿ, ''ಟ್ರೋಲ್‌ಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ಸದ್ಯ ನಾನು ಟ್ವಿಟ್ಟರ್‌ನಿಂದ ದೂರ ಉಳಿದಿದ್ದೇನೆ. ಇದರಿಂದ ಕೆಲವರೋ ಏನೂ ಗೆದ್ದರು ಎಂದು ಸಂಭ್ರಮಿಸಿದ್ದಾರೆ. ಬಹಳ ಸಂತೋಷವಾಗಿದ್ದಾರೆ'' ಎಂದು ಹೇಳಿದರು.

  ಸಿನಿಮಾ ವಿಚಾರಕ್ಕೆ ಬಂದ್ರೆ ಅಜಯ್ ದೇವಗನ್ ಜೊತೆ ನಟಿಸಿದ್ದ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಸಿನಿಮಾ ಇತ್ತೀಚಿಗಷ್ಟೆ ತೆರೆಕಂಡಿದೆ. ಸಂಜಯ್ ದತ್, ಶಾರದ ಕೇಲ್ಕರ್, ಅಮ್ಮಿ ವಿರ್ಕ್, ಪ್ರಣಿತಾ ಸುಭಾಷ್ ಈ ಚಿತ್ರದಲ್ಲಿ ನಟಿಸಿದ್ದರು. 1971ರ ಇಂಡೋ-ಪಾಕ್ ಯುದ್ಧದಲ್ಲಿ ಭುಜ್ ವಿಮಾನ ನಿಲ್ದಾಣ ಪಾಕಿಸ್ತಾನದಿಂದ ರಕ್ಷಿಸುವ ಕಥಾಹಂದರ ಹೊಂದಿತ್ತು. ಇನ್ನು ಶ್ರೀ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಬುಲ್ ಬುಲ್ ತರಂಗಾ' ಚಿತ್ರದಲ್ಲಿ ಸೋನಾಕ್ಷಿ ನಟಿಸುತ್ತಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ರಿತೇಶ್ ದೇಶ್‌ಮುಖ್ ಮತ್ತು ಸಾಕೀಬ್ ಸಲೀಮ್ ನಟನೆಯ ಹಾರರ್ ಕಾಮಿಡಿ ಸಿನಿಮಾ 'ಕಾಕುಡ'ದಲ್ಲೂ ಸೋನಾಕ್ಷಿ ಅಭಿನಯಿಸಿದ್ದಾರೆ. 2010ರಲ್ಲಿ ದಬಾಂಗ್ ಚಿತ್ರದ ಮೂಲಕ ಸೋನಾಕ್ಷಿ ಸಿನ್ಹಾ ಚಿತ್ರರಂಗ ಪ್ರವೇಶಿಸಿದ್ದರು.

  Sonakshi Sinha Gives Epic Reply To Fan Asking For Bikini Photo

  ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಈ ಕುರಿತು ಪಿಂಕ್ ವಿಲ್ಲಾ ವೆಬ್ ಸೈಟ್ ವರದಿ ಮಾಡಿತ್ತು. 4 ಬಿಎಚ್‌ಕೆ ಫ್ಲ್ಯಾಟ್‌ ಮೇಲೆ ನಟಿ ಸೋನಾಕ್ಷಿ ಬಂಡವಾಳ ಹೂಡಿದ್ದಾರೆ. ಮುಂಬೈನ ಬಾಂದ್ರಾ ನಗರದ ಪ್ರಮುಖ ಅಪಾರ್ಟ್‌ಮೆಂಟ್‌ನಲ್ಲಿ ಈ ಮನೆ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.

  ಬಾಬಿ ಮತ್ತು ಚಿರು ಕಾಂಬಿನೇಷನ್ ಚಿತ್ರದಲ್ಲಿ ನಾಯಕಿ ಪಾತ್ರಕ್ಕಾಗಿ ಬಾಲಿವುಡ್ ಚೆಲುವೆ ಸೋನಾಕ್ಷಿ ಸಿನ್ಹಾ ಅವರನ್ನು ಕರೆತರುವ ಯೋಜನೆಯಾಗಿದೆಯಂತೆ. ಈ ಸಂಬಂಧ ಸೋನಾಕ್ಷಿ ಜೊತೆ ಮಾತುಕತೆ ಮಾಡಿದ್ದು, ತೆಲುಗು ಡೆಬ್ಯೂಗಾಗಿ ಭಾರಿ ಮೊತ್ತವನ್ನು ಸಂಭಾವನೆಯಾಗಿ ಕೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ತೆಲುಗು ವೆಬ್‌ಸೈಟ್ ವರದಿ ಮಾಡಿದ್ದು, ಮೆಗಾಸ್ಟಾರ್‌ ಎದುರು ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದಿದೆ.

  English summary
  Bollywood Actress Sonakshi sinha gives epic reply to fan asking for bikini photo. What's an answered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X