For Quick Alerts
  ALLOW NOTIFICATIONS  
  For Daily Alerts

  ಸೊನಾಲಿ ಪೋಗಟ್ ಕೊಲೆ ಪ್ರಕರಣ: ಆಸ್ತಿ ದಾಖಲೆ ಜೊತೆ ಕಾರುಗಳೂ ನಾಪತ್ತೆ!

  |

  ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ಹರಿಯಾಣ ಬಿಜೆಪಿ ನಾಯಕಿಯೂ ಆಗಿದ್ದ ಸೊನಾಲಿ ಪೋಗಟ್ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಾ ಸಾಗುತ್ತಿದೆ.

  ಆರಂಭದಲ್ಲಿ ಸೊನಾಲಿ ಪೋಗಟ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಅನುಮಾನಗಳೆದ್ದು ತನಿಖೆ ನಡೆಸಿದಾಗ ಸೊನಾಲಿ ಕೊಲೆಯಾಗಿರಬಹುದೆಂಬ ಶಂಕೆ ಉದ್ಭವಿಸಿ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  ಸೊನಾಲಿ ಪೋಗಟ್ ಕೊಲೆ: ದಿನಕ್ಕೊಂದು ತಿರುವು, ಯಾರ ಪಾಲಾಗಲಿದೆ ನೂರಾರು ಕೋಟಿ ಆಸ್ತಿ?ಸೊನಾಲಿ ಪೋಗಟ್ ಕೊಲೆ: ದಿನಕ್ಕೊಂದು ತಿರುವು, ಯಾರ ಪಾಲಾಗಲಿದೆ ನೂರಾರು ಕೋಟಿ ಆಸ್ತಿ?

  ಗೋವಾಕ್ಕೆ ಹೋಗಿದ್ದ ಸೊನಾಲಿ ಪೋಗಟ್ ಆಗಸ್ಟ್ 22 ರಂದು ಅಲ್ಲಿಯೇ ಮೃತಪಟ್ಟಿದ್ದರು. ತನಿಖೆ ಪ್ರಾರಂಭಿಸಿದ ಪೊಲೀಸರು ಸೊನಾಲಿ ಪೋಗಟ್‌ರ ಇಬ್ಬರು ಸಹಾಯಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೊನಾಲಿ ಪೋಗಟ್‌ ನಿಧನದ ದಿನ ಅವರಿಗೆ ಡ್ರಗ್ಸ್ ನೀಡಿರುವುದು ಈಗಾಗಲೇ ತನಿಖೆಯಿಂದ ಬೆಳಕಿಗೆ ಬಂದಿದೆ.

  ಹಲವು ದಾಖಲೆ ನಾಪತ್ತೆಯಾಗಿದ್ದವು

  ಹಲವು ದಾಖಲೆ ನಾಪತ್ತೆಯಾಗಿದ್ದವು

  ಈ ಕೊಲೆಯು ಆಸ್ತಿ ಆಸೆಯ ಕಾರಣಕ್ಕೆ ಆಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಅದಕ್ಕೆ ತಕ್ಕಂತೆ ಸೊನಾಲಿ ಪೋಗಟ್‌ರ ಹರಿಯಾಣಾದ ಫಾರ್ಮ್‌ ಹೌಸ್‌ನಲ್ಲಿದ್ದ ಕೆಲವು ದಾಖಲೆಗಳು ಕಣ್ಮರೆಯಾಗಿವೆ. ಫಾರ್ಮ್‌ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಲ್ಯಾಪ್‌ಟಾಪ್ ಸಮೇತ ಪರಾರಿಯಾಗಿದ್ದ, ಆತನನ್ನು ಪೊಲೀಸರು ಬಂಧಿಸಿದ್ದಾರೆ.

  ಹಲವು ಕಾರುಗಳನ್ನು ಹೊಂದಿದ್ದ ಸೊನಾಲಿ

  ಹಲವು ಕಾರುಗಳನ್ನು ಹೊಂದಿದ್ದ ಸೊನಾಲಿ

  ಇದೀಗ ತನಿಖೆಗೆ ಬಂದಿರುವ ಮತ್ತೊಂದು ಸಂಗತಿಯೆಂದರೆ ಸೊನಾಲಿ ಪೋಗಟ್‌ರ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮಾತ್ರವೇ ಅಲ್ಲದೆ ಅವರ ಐಶಾರಾಮಿ ಕಾರುಗಳು ಹಾಗೂ ಪೀಠೋಪಕರಣಗಳು ಇತರೆ ವಸ್ತುಗಳು ಸಹ ಕಾಣೆಯಾಗಿವೆ. ಸೊನಾಲಿ ಪೋಗಟ್‌ರ ಸಹೋದರ ವತನ್ ಢಾಕಾ ಹೇಳಿರುವಂತೆ, ಸೊನಾಲಿ ಪೋಗಟ್‌ ಬಳಿ ಟೊಯೊಟಾ ಪಾರ್ಚುನರ್, ಟಾಟಾ ಸಫಾರಿ, ಫೋರ್ಡ್ ಎಂಡೊವೇರ್, ಮಹೀಂದ್ರಾ ಸ್ಕಾರ್ಪಿಯೋ ಕಾರುಗಳಿದ್ದವು. ಇವುಗಳಲ್ಲಿ ಒಂದು ಕಾರು ಮಾತ್ರ ಗುರುಗಾವ್‌ನಲ್ಲಿ ಪತ್ತೆಯಾಗಿದೆ. ಇನ್ನುಳಿದ ಕಾರುಗಳು ಕಾಣೆಯಾಗಿವೆ.

  ಆ ಕಾರುಗಳು ಎಲ್ಲಿವೆ?

  ಆ ಕಾರುಗಳು ಎಲ್ಲಿವೆ?

  ''2014 ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಸೊನಾಲಿ ಪೋಗಟ್ ಫಾರ್ಚುನರ್ ಕಾರು ಖರೀದಿ ಮಾಡಿದ್ದರು. ಮೂರು ವರ್ಷ ಅದೇ ಕಾರು ಬಳಸಿದರು. ಬಳಿಕ ಫೋರ್ಡ್ ಎಂಡೊವೇರ್ ಖರೀದಿಸಿದರು. ಅದಾದ ಬಳಿಕ ಸ್ಕೋಡಾ ಕಾರು ಖರೀದಿಸಿದರು. ಅದಕ್ಕೆ ನಾವು ನಾಲ್ಕು ಲಕ್ಷ ಹಣ ನೀಡಿದ್ದೆವು. ಬಳಿಕ ಮಹೀಂದ್ರಾ ಸ್ಕಾರ್ಪಿಯೋ ಖರೀದಿಸಿದರು. ಇವುಗಳಲ್ಲಿ ಒಂದು ಕಾರಷ್ಟೆ ಈಗ ಇದೆ. ಇನ್ನುಳಿದ ಕಾರುಗಳು ಎಲ್ಲಿವೆ ಎಂಬುದು ಸಹ ಗೊತ್ತಿಲ್ಲ'' ಎಂದಿದ್ದಾರೆ.

  ಸೊನಾಲಿಯ ಕಾರು ಚಾಲಕ ಹೇಳಿದ್ದೇನು?

  ಸೊನಾಲಿಯ ಕಾರು ಚಾಲಕ ಹೇಳಿದ್ದೇನು?

  ಇದೇ ವಿಷಯವಾಗಿ ಮಾತನಾಡಿರುವ ಸೊನಾಲಿ ಪೋಗಟ್‌ರ ಕಾರು ಚಾಲಕ ಉಮೇದ್ ಸಿಂಗ್, ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಸೊನಾಲಿ ಎಂಟು ಲಕ್ಷಕ್ಕೆ ಮಾರಾಟ ಮಾಡಿ, ಅದೇ ಹಣದಲ್ಲಿ ಟಾಟಾ ಸಫಾರಿ ಖರೀದಿಸಿದ್ದರು. ಇನ್ನು ಬೆಂಜ್ ಕಾರೊಂದನ್ನು ಸಹ ಸೊನಾಲಿ ಖರೀದಿಸಿದ್ದರು. ಆದರೆ ಅದರ 10 ಲಕ್ಷ ಸಾಲದ ಹಣವನ್ನು ಬಾಕಿ ಇರಿಸಿಕೊಂಡಿದ್ದಾರೆ ಎಂದಿರುವ ಆತ, ಗೋವಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸೊನಾಲಿಯ ಆಪ್ತ ಸಹಾಯಕ ಸುಧೀರ್, ತನಗೆ 25 ಸಾವಿರ ರುಪಾಯಿ ಸಾಲ ಬಾಕಿ ನೀಡಬೇಕು ಎಂದಿದ್ದಾರೆ.

  English summary
  Late actress, politician Sonali Phogat's luxury cars were missing said her brother. She had many luxury cars but only one left.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X