»   » ಸೋನಂ ಕಪೂರ್ ಕಲ್ಯಾಣಕ್ಕೆ ಡೇಟ್ ಫಿಕ್ಸ್

ಸೋನಂ ಕಪೂರ್ ಕಲ್ಯಾಣಕ್ಕೆ ಡೇಟ್ ಫಿಕ್ಸ್

Posted By:
Subscribe to Filmibeat Kannada

ನಟಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಸ್ಟಾರ್ ಗಳು ಹಾಗೂ ಸಿನಿಮಾ ಸ್ಟಾರ್ ಗಳು ವಿದೇಶಕ್ಕೆ ಹೋಗಿ ಅಲ್ಲಿ ಮದುವೆ ಮಾಡಿಕೊಳ್ಳುವ ಪದ್ಧತಿ ಶುರುವಾಗುತ್ತಿದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ ಬಳಿಕ ಸೋನಂ ಕಪೂರ್ ಕೂಡ ವಿದೇಶದಲ್ಲಿ ಮದುವೆ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಶ್ರೀದೇವಿ ವಿಧಿವಶವಾದ ನಂತರ ಸೋನಂ ಮದುವೆ ಮುಂದಕ್ಕೆ ಹಾಕಿಕೊಂಡಿದ್ದಾರೆ. ಮುಂದಿನ ವರ್ಷ ಸೋನಂ ಮದುವೆ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದವು ಆದರೆ ಮೂಲಗಳ ಪ್ರಕಾರ ಸೋನಂ ಮದುವೆಗಾಗಿ ಭರ್ಜರಿ ತಯಾರಿ ನಡೆಯುತ್ತಿದೆಯಂತೆ. ಮಗಳ ಮದುವೆಗಾಗಿ ನಟ ಅನಿಲ್ ಕಪೂರ್ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ.

ಅಮೇರಿಕಾ ಅಧ್ಯಕ್ಷ ಟ್ರಂಪ್ ವಿರುದ್ಧ ಟ್ವೀಟ್ ಪ್ರಹಾರ ಮಾಡಿದ ಸೋನಂ ಕಪೂರ್

ಸೋನಂ ಹಾಗೂ ಆನಂದ್ ಮದುವೆಗೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಯಾವುದು? ಮದುವೆಯಲ್ಲಿ ಯಾರೆಲ್ಲಾ ಭಾಗಿ ಆಗಿರುತ್ತಾರೆ? ಮದುವೆ ದಿನಾಂಕ ಯಾವಾಗ ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಸೋನಂ ಮದುವೆ ಡೇಟ್ ಫಿಕ್ಸ್

ನಟಿ ಸೋನಂ ಕಪೂರ್ ಹಾಗೂ ಬಹುದಿನದ ಗೆಳೆಯ ಆನಂದ್ ಮದುವೆ ಮೇ ತಿಂಗಳಲ್ಲಿ ನಡೆಯಲಿದೆ. ಇಬ್ಬರು ಮನೆಯವರು ಕುಳಿತು ಮಾತನಾಡಿ ದಿನಾಂಕ ನಿಗದಿ ಮಾಡಿದ್ದು ಮೇ 11-12 ರಂದು ಸೋನಂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸ್ವಿಜರ್ಲ್ಯಾಂಡ್ ನ ಜಿನಿವಾದಲ್ಲಿ ಕಲ್ಯಾಣ

ಸೋನಂ ಮತ್ತು ಆನಂದ್ ಕಲ್ಯಾಣ ಸ್ವಿಜರ್ಲ್ಯಾಂಡ್ ನ ಜಿನಿವಾದಲ್ಲಿ ನಡೆಯಲಿದೆಯಂತೆ. ಖುದ್ದು ಸೋನಂ ಅವರೇ ಮದುವೆ ಜಾಗವನ್ನ ಆಯ್ಕೆ ಮಾಡಿದ್ದು. ಸೋನಂ ಸ್ವಿಸ್ ವಾಚ್ ಕಂಪನಿಯ ಬ್ರಾಂಡ್ ಅಬಾಸಿಡರ್ ಆಗಿದ್ದಾರೆ, ಸ್ವಿಸ್ ವಾಚ್ ಗಳು ಸ್ವಿಜರ್ಲ್ಯಾಂಡ್ ನ ಜಿನಿವಾದಲ್ಲಿ ಉತ್ಪಾದನೆ ಆಗುತ್ತದೆ. ಈಗಾಗಲೇ ಜಿನಿವಾಗೆ ಭೇಟಿ ಕೊಟ್ಟಿರುವ ಸೋನಂ ಅಲ್ಲಿ ಸ್ಥಳಗಳನ್ನ ನೋಡಿ ಇಂಪ್ರೆಸ್ ಆಗಿದ್ದರಂತೆ ಅದೇ ಕಾರಣಕ್ಕೆ ಮದುವೆಯನ್ನು ಅಲ್ಲಿಯೇ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಮದುವೆ ತಯಾರಿಯಲ್ಲಿ ಕುಟುಂಬಸ್ಥರು

ಮದುವೆ ದಿನಾಂಕ ನಿಗದಿ ಮಾಡಿದ ತಕ್ಷಣವೇ ಸೋನಂ ಕುಟುಂಬಸ್ಥರು ಈಗಾಗಲೇ ಮದುವೆಗಾಗಿ ಅತಿಥಿಗಳನ್ನ ಆಹ್ವಾನ ಮಾಡುವುದರಲ್ಲಿ ಬ್ಯುಸಿ ಆಗಿದ್ದು ಫ್ಲೈಟ್ ಟಿಕೆಟ್ ಗಳನ್ನೂ ಬುಕ್ ಮಾಡಿಸಲಾಗಿದ್ಯಂತೆ.

ಬೆಸ್ಟ್ ಡಿಸೈನ್ಸರ್ಸ್ ನಿಂದ ವಸ್ತ್ರ ವಿನ್ಯಾಸ

ಎಲ್ಲರಿಗೂ ತಿಳಿದಿರುವಂತೆ ಸೋನಂ ಡ್ರಸ್ಸಿಂಗ್ ಸೆನ್ಸ್ ತಂಬಾ ಚೆನ್ನಾಗಿದ್ದು ಮದುವೆಗೆ ಈಗಾಗಲೇ ವಸ್ತ್ರ ವಿನ್ಯಾಸ ಮಾಡುವವರನ್ನೂ ಫೈನಲ್ ಮಾಡಿ ಆಗಿದೆ. ಅಬು ಜಾನಿ ಮತ್ತು ಸಂದೀಪ್ ಕೋಸ್ಲಾ ಮೇ 11 ರ ಡ್ರಸ್ ಗಳನ್ನ ಡಿಸೈನ್ ಮಾಡಿದರೆ, ಮೇ 12 ರಂದು ತಮಾರಾ ರಾಲ್ಫ್ ಮತ್ತು ಮೈಕೆಲ್ ರುಸ್ಸೋ ಡಿಸೈನ್ ಮಾಡಿದ ಬಟ್ಟೆಯನ್ನ ಸೋನಂ ಹಾಗೂ ಆನಂದ್ ಧರಿಸಲಿದ್ದಾರೆ.

ಹಿಂದೂ ಸಂಪ್ರದಾಯದಂತೆ ಮದುವೆ

ಆನಂದ್ ಅಹುಜಾ ಹಾಗೂ ಸೋನಂ ಕಪೂರ್ ವಿವಾಹ ಹಿಂದೂ ಸಂಪ್ರದಾಯದಂತೆ ನಡೆಯಲಿದ್ದು ಮದುವೆ ಹಿಂದಿನ ದಿನ ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮಗಳು ಸ್ವಿಜರ್ಲ್ಯಾಂಡ್ ನಲ್ಲೇ ಜರುಗಲಿವೆ.

ಸಿಂಪಲ್ ಆಗಿ ನಿಶ್ಚಿತಾರ್ಥ

ಮದುವೆ ಸಮಾರಂಭಕ್ಕೆ ಇನ್ನು ಒಂದು ತಿಂಗಳು ಬಾಕಿ ಇದ್ದು ಅದಕ್ಕೂ ಮುಂದೆ ನಿಶ್ಚಿತಾರ್ಥ ಮಾಡಲು ಎರಡು ಮನೆಯವರು ನಿರ್ಧಾರ ಮಾಡಿದ್ದಾರೆ. ಎರಡು ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಸೋನಂ ಮನೆಯಲ್ಲೇ ನಿಶ್ಚಿತಾರ್ಥ ಸಮಾರಂಭ ಮಾಡಿಕೊಳ್ಳಲಿದ್ದಾರೆ. ಆದರೆ ಎಂಗೆಂಜ್ ಮೆಂಟ್ ದಿನಾಂಕ ಮಾತ್ರ ಎಲ್ಲಿಯೂ ರಿವಿಲ್ ಮಾಡಿಲ್ಲ.

ಶ್ರೀದೇವಿ ಪುತ್ರಿಯ ಸಿನಿಮಾದಲ್ಲಿ ಹೊಸ ನಿಯಮ ಜಾರಿಯಾಗಿದೆ

English summary
Bollywood actress Sonam Kapoor and Anand Ahuja are all set to take the plunge. According to a report the couple will get married over a two-day ceremony on May 11 and 12 in Geneva, Switzerland.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X