»   » ದೀಪಿಕಾ ಆದ್ಮೇಲೆ ಸೋನಮ್ ಕಪೂರ್ ಬಗ್ಗೆ ಹೊಸ ಸುದ್ದಿ

ದೀಪಿಕಾ ಆದ್ಮೇಲೆ ಸೋನಮ್ ಕಪೂರ್ ಬಗ್ಗೆ ಹೊಸ ಸುದ್ದಿ

Posted By:
Subscribe to Filmibeat Kannada

ಅನುಷ್ಕಾ-ವಿರಾಟ್ ಕೊಹ್ಲಿ ಮದುವೆ ನಂತರ ದಿಪೀಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಗಿರಿಗಿಟ್ಲೆ ಹೊಡೆಯುತ್ತಿದೆ. ಅಷ್ಟರಲ್ಲಾಗಲೇ, ಮತ್ತೊಬ್ಬ ನಟಿಯ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

ಹೌದು, ಬಾಲಿವುಡ್ ನಟಿ ಸೋನಮ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ಆನಂದ್ ಆಹುಜಾ ಜೊತೆ ಎಂಗೇಜ್ ಆಗಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಏಪ್ರಿಲ್ ತಿಂಗಳಿನಲ್ಲಿ ಇವರಿಬ್ಬರು ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.

ನಿಶ್ಚಿತಾರ್ಥಕ್ಕೆ ಸಜ್ಜಾದ ನಟಿ ಸೋನಮ್ ಕಪೂರ್: ಹುಡುಗ ಯಾರು?

ಜೋಧ್ ​ಪುರದ ಉಮೇದ್ ಭವನ್ ಪ್ಯಾಲೇಸ್​ನಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಖಾಸಗಿ ಮದುವೆ ಇದಾಗಿದ್ದು, ಆಪ್ತರಿಗೆ ಮಾತ್ರ ಆಮಂತ್ರಣ ನೀಡಲು ಕುಟುಂಬ ನಿರ್ಧರಿಸಿದೆ. ಈಗಾಗಲೇ ಸೋನಮ್ 5-6 ದಿನಕ್ಕೆ ಪ್ಯಾಲೇಸ್ ಬುಕ್ ಮಾಡಿದ್ದಾರಂತೆ. ಆದ್ರೆ, ಈ ವದಂತಿಗೆ ಸೋನಮ್ ಗರಂ ನಿರಾಕರಿಸಿದ್ದಾರೆ. ''ನಾನು ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹೀಗಿರುವಾಗ ನನಗೆ ಮದುವೆಯಾಗಲು ಸಮಯ ಎಲ್ಲಿದೆ?' ಎಂದಿದ್ದಾರೆ.

Sonam Kapoor and Anand Ahuja marriage

ಈ ಬಗ್ಗೆ ಕುಟುಂಬಸ್ಥರು ಕೂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಇದೆಲ್ಲಾ ವದಂತಿಗಳು ಎನ್ನಲಾಗಿದೆ. 'ನೀರ್ಜಾ' ಚಿತ್ರದ ನಂತರ ಯಶಸ್ಸಿನ ನಂತರ ಸೋನಮ್ ಕಪೂರ್ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಅಕ್ಷಯ್ ಕುಮಾರ್ ಜೊತೆ ಅಭಿನಯಿಸಿರುವ 'ಪ್ಯಾಡ್ ಮ್ಯಾನ್' ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ.

English summary
After Virat Kohli and Anushka Sharma, Sonam Kapoor and Anand Ahuja is the next couple in line to take their relationship to the next level. According to source the couple is set to tie the knot in April this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X