»   » ಸೆಟ್ ನಲ್ಲೇ ಕುಸಿದು ಬಿದ್ದ ಸೋನಮ್ ಕಪೂರ್

ಸೆಟ್ ನಲ್ಲೇ ಕುಸಿದು ಬಿದ್ದ ಸೋನಮ್ ಕಪೂರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟ ಅನಿಲ್ ಕಪೂರ್ ಮುದ್ದಿನ ಮಗಳು ಸೋನಮ್ ಕಪೂರ್ ಶೂಟಿಂಗ್ ವೇಳೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪ್ರೇಮ್ ರತನ್ ಧನ್ ಪಾಯೋ ಚಿತ್ರ ತಂಡ ಹೇಳಿದೆ.

ಕರ್ಜಾತ್ ನ ಎನ್ ಡಿ ಸ್ಟುಡಿಯೋದಲ್ಲಿ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದ ಚಿತ್ರೀಕರಣ ನಡೆದಿತ್ತು. ಈ ಸಂದರ್ಭದಲ್ಲಿ ತೀವ್ರ ಉಸಿರಾಟ ಹಾಗೂ ದೈಹಿಕ ಬಳಲಿಕೆಯಿಂದ ಸೋನಮ್ ಕಪೂರ್ ಶೂಟಿಂಗ್ ವೇಳೆ ಕುಸಿದು ಬಿದ್ದರು. ಆಕೆಯನ್ನು ಕೊಕಿಲಾಬೇನ್ ಅಂಬಾನಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.

Sonam Kapoor

ಆಸ್ಪತ್ರೆಯಲ್ಲಿ ಮಲಗಿ ಕಾಲದೂಡುವುದು ಹಿಂಸೆಯ ಕೆಲಸ ಎಂದು ಸೋನಮ್ ಕಪೂರ್ ಟ್ವೀಟ್ ಮಾಡಿದ್ದಾರೆ. ಸೂಜಿ ಚುಚ್ಚಿಸಿಕೊಂಡ ಸೋನಮ್ ಕೈಗೆ ಭಾರಿ ಲೈಕ್ಸ್ ಕಾಮೆಂಟ್ ಗಳು ಶುಭ ಕೋರಿಕೆ ಸಂದೇಶಗಳು ಬಂದಿವೆ. ಇನ್ ಸ್ಟಾಗ್ರಾಮ್ ನಲ್ಲಿ ಈ ಚಿತ್ರಕ್ಕೆ 22,677 ಲೈಕ್ಸ್ ಬಂದಿದೆ.

Sonam Kapoor twitter picture

ಮೂಲಗಳ ಪ್ರಕಾರ ಆಕೆಗೆ ಆಸ್ತಮಾ ರೀತಿಯಲ್ಲಿ ತೊಂದರೆ ಉಂಟಾಯಿತು. ಹೀಗಾಗಿ ಇನ್ನಷ್ಟು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಿದೆ. ಅದರೆ, ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ಹಠ ಹಿಡಿದಿದ್ದರಿಂದ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲಾಗಿದೆ. ಶ್ವಾಸಕೋಶದ ಸೋಂಕು ನಿವಾರಣೆಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.ಖೂಬ್ ಸೂರತ್ ಚಿತ್ರದಲ್ಲಿ ಫವಾದ್ ಖಾನ್ ಜೊತೆ ನಟಿಸಿದ್ದ ಸೋನಮ್ ಕಪೂರ್ ಗೆ ಈಗ ಸಲ್ಮಾನ್ ಖಾನ್ ಜೊತೆಯಲ್ಲಿ ನಟಿಸುತ್ತಿದ್ದಾರೆ.

English summary
Bollywood actress Sonam Kapoor has been hospitalised after she suffers severe exhaustion and high temperature.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada