For Quick Alerts
  ALLOW NOTIFICATIONS  
  For Daily Alerts

  ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ನಟಿ ಸೋನಂ ಪ್ರತಿಕ್ರಿಯೆ

  |

  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ಹೇಳಿರುವ ವಿವಾದಾತ್ಮಕ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ನಾಟಕವೆಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟ ನಿಜವಾದ ಚಳುವಳಿಯಲ್ಲ, ನಾಟವಾಗಿದೆ ಎಂದು ಅನಂತ್ ಕುಮಾರ್ ಹೇಳಿದ್ದರು.

  ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ರಾಜಕೀಯ ವ್ಯಕ್ತಿಗಳ ವಾದ-ವಿವಾದಗಳ ನಡುವೆ ಬಾಲಿವುಡ್ ನಟಿ ಸೋನಂ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸೋನಂ 'ಹೇ ರಾಮ್' ಎಂದು ಹೇಳಿದ್ದಾರೆ.

  ಬಾಲಿವುಡ್ ನಟಿ ಸೋನಂ ಕಪೂರ್ ಗೆ 'ಭಯಾನಕ ಅನುಭವ': ಕಾರಣ ಊಬರ್.!ಬಾಲಿವುಡ್ ನಟಿ ಸೋನಂ ಕಪೂರ್ ಗೆ 'ಭಯಾನಕ ಅನುಭವ': ಕಾರಣ ಊಬರ್.!

  ಕೇವಲ ಎರಡೇ ಪದದಲ್ಲಿ ಪ್ರತಿಕ್ರಿಯೆ ನೀಡಿದರೂ, ಈ ಎರಡೇ ಪದದ ಮೂಲಕ ಎಲ್ಲವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಸೋನಂ ಟ್ವೀಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಸೋನಂ ಹೇಳಿಕೆಗೆ ಬೆಂಬಲ ನೀಡಿದರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಸೋನಂ ಕಪೂರ್ ತಂದೆ ಅನಿಲ್ ಕಪೂರ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಇರುವ ಫೋಟೋವನ್ನು ಶೇರ್ ಮಾಡಿ ಹೇ ದಾವೂದ್, ಹೇ ರಾಮ್ ಎಂದು ಟ್ರೋಲ್ ಮಾಡುತ್ತಿದ್ದಾರೆ.

  ಇನ್ನು ಕೆಲವರು ಈ ವಿಷಯದಲ್ಲಿ ಸುಮ್ಮನಿರಿ ಭಕ್ತರು ನಿಮ್ಮ ಮೇಲೆ ವಾಗ್ದಾಳಿ ನಡೆಸಬಹುದು ಎಂದು ಕಿವಿ ಮಾತು ಹೇಳುತ್ತಿದ್ದಾರೆ. ಇದು ಒಳ್ಳೆಯದು. ಆದರೆ ಇಷ್ಟು ಬೇಗ ಬದಲಾಗಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಸೋನಂ ಇದ್ಯಾವುದಕ್ಕು ಪ್ರತಿಕ್ರಿಯೆ ನೀಡದೆ ಹೇ ರಾಮ್ ಎಂದು ಸೈಲೆಂಟ್ ಆಗಿದ್ದಾರೆ.

  English summary
  Bollywood Actress Sonam Kapoor reacted to ananth Kumar Hegde controversial statement on Gandhiji.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X