Don't Miss!
- News
Breaking; ಕೋಲಾರವೇ ಕ್ಷೇತ್ರವೇ ಏಕೆ, ಸಿದ್ದರಾಮಯ್ಯ ಪ್ರತಿಕ್ರಿಯೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೋನಂ ಕಪೂರ್ ಗರ್ಭಿಣಿನಾ? ಶುಂಠಿ ಟೀ, ಬಿಸಿ ನೀರು ಕುಡಿದು ನಿಜ ಹೇಳಿದ ನಟಿ
ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಕಳೆದ ವಾರ ಲಂಡನ್‌ನಿಂದ ಭಾರತಕ್ಕೆ ಬಂದರು. ಮಗಳನ್ನು ಸ್ವಾಗತಿಸಲು ಖುದ್ದು ಅನಿಲ್ ಕಪೂರ್ ಏರ್‌ಪೋರ್ಟ್‌ಗೆ ಹೋಗಿದ್ದರು. ಮಗಳನ್ನು ಕಂಡ ಕೂಡಲೇ ತಬ್ಬಿಕೊಂಡು ಭಾವುಕರಾಗಿದ್ದ ಘಟನೆ ನಡೆದಿತ್ತು.
ಅಂದು ಏರ್‌ಪೋರ್ಟ್‌ನಲ್ಲಿ ಸೋನಂ ಕಪೂರ್ ನೋಡಿದವರು ಆಕೆ ಗರ್ಭಿಣಿ ಇರಬಹುದಾ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಏಕಂದ್ರೆ, ಸೋನಂ ಕಪೂರ್ ಧರಿಸಿದ್ದ ಬಟ್ಟೆಯಲ್ಲಿ ಬೇಬಿ ಬಂಪ್ ರೀತಿ ಕಂಡಿತ್ತು. ಹಾಗಾಗಿ, ಸೋನಂ ಗರ್ಭಿಣಿ ಎಂಬ ಪ್ರಶ್ನೆ ಹುಟ್ಟುಹಾಕಿತ್ತು.
ವರ್ಷದ
ಬಳಿಕ
ಭಾರತಕ್ಕೆ
ಬಂದ
ಸೋನಂ:
ಅಪ್ಪನ್ನು
ತಬ್ಬಿಕೊಂಡು
ಕಣ್ಣೀರಿಟ್ಟ
ನಟಿ
ಇದೀಗ, ಬಿಸಿ ನೀರು ಮತ್ತು ಶುಂಠಿ ಕುಡಿಯುವ ಮೂಲಕ ಈ ವದಂತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ಸೋನಂ ''ನನ್ನ ಋತುಚಕ್ರದ ಮೊದಲ ದಿನ ಒಂದು ಲೋಟ ಬಿಸಿ ನೀರು ಮತ್ತು ಶುಂಠಿ ಟೀ ಸೇವಿಸುವುದರೊಂದಿಗೆ ಆರಂಭ'' ಎಂದು ಬರೆದುಕೊಂಡಿದ್ದಾರೆ.
ಋತುಚಕ್ರದ ಬಗ್ಗೆ ಮಾಹಿತಿ ನೀಡಿದ ಅನಿಲ್ ಕಪೂರ್ ಪುತ್ರಿ ಗರ್ಭಿಣಿ ಎನ್ನುವ ಸುದ್ದಿ ಸುಳ್ಳಾಗಿದೆ. ಜೊತೆಗೆ ಋತುಚಕ್ರದ ವೇಳೆ ಬಿಸಿ ನೀರು ಮತ್ತು ಶುಂಠಿ ಟೀ ಸೇವಿಸುವುದು ಉತ್ತಮ ಆಯ್ಕೆ ಎಂದು ಸಲಹೆ ಕೊಟ್ಟಿದ್ದಾರೆ.
2018ರ ಮೇ ತಿಂಗಳಲ್ಲಿ ಉದ್ಯಮಿ ಆನಂದ್ ಆಹುಜಾ ಜೊತೆ ಸೋನಂ ಕಪೂರ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯ ಜೊತೆ ಲಂಡನ್‌ನಲ್ಲಿ ನೆಲೆಸಿದ್ದ ಸೋನಂ 2020ರಿಂದಲೂ ಅಲ್ಲೆ ಉಳಿದುಕೊಂಡಿದ್ದರು. ಕೊರೊನಾ ಕಾರಣದಿಂದ ಭಾರತಕ್ಕೆ ಪ್ರಯಾಣ ಬಂದಿರಲಿಲ್ಲ. ಕುಟುಂಬವನ್ನು ಬಹಳ ಮಿಸ್ ಮಾಡಿಕೊಂಡಿದ್ದರು.

ಸೋನಂ ಕಪೂರ್ ಸಿನಿಮಾಗಳು
Recommended Video
ಅಂದ್ಹಾಗೆ, ನಟಿ ಸೋನಂ ಕಪೂರ್ 2019ರಲ್ಲಿ ತೆರೆಕಂಡಿದ್ದ 'ದಿ ಜೋಯಾ ಫ್ಯಾಕ್ಟರ್' ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಅದಾದ ಮೇಲೆ ಅನಿಲ್ ಕಪೂರ್ ನಟಿಸಿದ್ದ 'ಎಕೆ vs ಎಕೆ' ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ 'ಬ್ಲೈಂಡ್' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.