For Quick Alerts
  ALLOW NOTIFICATIONS  
  For Daily Alerts

  ಮನೆ ಮಾರಿದ ನಟಿ ಸೋನಂ ಕಪೂರ್! ಮಾರಾಟವಾಗಿದ್ದು ಎಷ್ಟು ಕೋಟಿಗೆ?

  |

  ತಾಯಿಯಾಗಿರುವ ನಟಿ ಸೋನಂ ಕಪೂರ್ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಸೋನಂ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷಕ್ಕೂ ಮೇಲಾಯ್ತು. ನಡುವಲ್ಲಿ ಅಪ್ಪ ಅನಿಲ್ ಕಪೂರ್‌ ಸಿನಿಮಾ ಒಂದರಲ್ಲಿ ಮುಖ ತೋರಿಸಿ ಹೋಗಿದ್ದಾರೆ ಅಷ್ಟೆ.

  ಆದಾಯಕ್ಕಾಗಿ ಸಿನಿಮಾದಲ್ಲಿ ನಟಿಸುತ್ತಲೇ ಇರಬೇಕು ಎಂಬ ಜರೂರತ್ತೇನು ಸೋನಂಗಿಲ್ಲ. ಆಕೆಯ ಪತಿ ದೊಡ್ಡ ಉದ್ಯಮಿ ಸಹ ಹೌದು. ಆದರೆ ಹೊಸ ಸುದ್ದಿಯೆಂದರೆ ಸಕಲ ಐಶಾರಾಮಿತ್ವಗಳಿರುವ ಸೋನಂ ಕಪೂರ್ ಇತ್ತೀಚೆಗೆ ತಮ್ಮ ಮನೆಯೊಂದನ್ನು ಮಾರಿದ್ದಾರಂತೆ!

  ಬಹುತೇಕ ಸಮಯವನ್ನು ಪತಿಯೊಟ್ಟಿಗೆ ಲಂಡನ್‌ನಲ್ಲಿ ಕಳೆವ ನಟಿ ಸೋನಂ ಕಪೂರ್ ಅಲ್ಲಿವೇ ಹೆಚ್ಚು ವಾಸವಿರುವ ಕಾರಣ ಮುಂಬೈನ ಬಾಂಡ್ರಾ-ಕುರ್ಲಾ ಬಳಿಯ ಐಶಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಮಾರಾಟ ಮಾಡಿದ್ದಾರೆ.

  2015 ರಲ್ಲಿ ಸೋನಂ ಕಪೂರ್ ಖರೀದಿಸಿದ್ದ ಈ ಅಪಾರ್ಟ್‌ಮೆಂಟ್‌ ಅನ್ನು ಇತ್ತೀಚೆಗೆ 32.50 ಕೋಟಿ ರುಪಾಯಿಗೆ ಸೋನಂ ಕಪೂರ್ ಮಾರಾಟ ಮಾಡಿದ್ದಾರೆ. 5,533 ಚದರ ಅಡಿಯ ವಿಶಾಲವಾದ ಪ್ರೀಮಿಯನ್ ಮನೆಯಾಗಿದ್ದು, ಸಿಗ್ನೇಚರ್ ಐಸ್‌ಲೆಂಡ್ ಅಪಾರ್ಟ್‌ಮೆಂಟ್‌ನ ಮೂರನೇ ಫ್ಲೋರ್‌ನಲ್ಲಿದೆ. ಬಾಂಡ್ರಾ ಈಸ್ಟ್‌ನ ಐಶಾರಾಮಿ ಕಾಂಪ್ಲೆಕ್ಸ್‌ಗಳಲ್ಲಿ ಇದು ಸಹ ಒಂದು.

  ಸಂಸ್ಥೆಯೊಂದಕ್ಕೆ ಸೋನಂ ಕಪೂರ್ ಈ ಆಸ್ತಿಯನ್ನು ಮಾರಿದ್ದು, ನೊಂದಣಿ ಕಾರ್ಯವು ಡಿಸೆಂಬರ್ 29 ಕ್ಕೆ ನಡೆದಿದೆ. ಎಸ್‌ಎಂಎಫ್‌ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯು ಸೋನಂರ ಆಸ್ತಿಯನ್ನು ಖರೀದಿಸಿದ್ದು, ಸ್ಟಾಂಪ್ ಡ್ಯೂಟಿಯಾಗಿ 1.95 ಕೋಟಿ ರುಪಾಯಿಗಳನ್ನು ತೆತ್ತಿದೆ. ಸ್ಟ್ಯಾಂಪ್ ಡ್ಯೂಟಿ ಆಧಾರದ ಮೇಲೆ ಆಸ್ತಿಯ ಒಟ್ಟು ಮೌಲ್ಯವನ್ನು ಅಂದಾಜಿಸಲಾಗಿದೆ.

  ಸೋನಂ ಕಪೂರ್, ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಪುತ್ರಿ. 200 ರಲ್ಲಿ 'ಸಾವರಿಯಾ' ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಸೋನಂ ಕಪೂರ್ ಆ ಬಳಿಕ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 2019 ರಲ್ಲಿ ಬಿಡುಗಡೆ ಆಗಿದ್ದ 'ದಿ ಜೋಯಾ ಫ್ಯಾಕ್ಟರ್' ಸೋನಂ ನಟಿಸಿದ ಕೊನೆಯ ಸಿನಿಮಾ. 2018 ರಲ್ಲಿ ಉದ್ಯಮಿ ಆನಂದ್ ಅಹುಜಾರನ್ನು ವಿವಾಹವಾದರು. ಈ ಜೋಡಿಗೆ ಇತ್ತೀಚೆಗಷ್ಟೆ ಒಂದು ಗಂಡು ಮಗು ಜನಿಸಿದೆ.

  English summary
  Actress Sonam Kapoor sold her Mumbai house for 32.50 crore rs. She is living in London with her husband.
  Thursday, January 5, 2023, 10:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X