»   » ಶ್ರೀದೇವಿಯ ಹಠಾತ್ ನಿಧನ: ಸೋನಂ ಕಪೂರ್ ಮದುವೆ ಮುಂದಕ್ಕೆ?

ಶ್ರೀದೇವಿಯ ಹಠಾತ್ ನಿಧನ: ಸೋನಂ ಕಪೂರ್ ಮದುವೆ ಮುಂದಕ್ಕೆ?

Posted By:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸೋನಂ ಕಪೂರ್ ಮದುವೆ ಜೂನ್-ಜುಲೈ ಹೊತ್ತಿಗೆ ನಡೆಯುತ್ತಿತ್ತು. ಆದ್ರೀಗ, ಈ ವರ್ಷ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಡುವುದು ಅನುಮಾನ. ಅದಕ್ಕೆ ಕಾರಣ, ಶ್ರೀದೇವಿಯ ಹಠಾತ್ ನಿಧನ.

ಶ್ರೀದೇವಿಯ ಅಕಾಲಿಕ ಮರಣದಿಂದ ಇಡೀ ಕಪೂರ್ ಕುಟುಂಬ ದಿಗ್ಭ್ರಮೆಗೊಂಡಿದೆ. ಅದರಲ್ಲೂ, ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್ ದುಃಖದ ಮಡುವಿನಲ್ಲಿದ್ದಾರೆ.

ಶ್ರೀದೇವಿ ಇನ್ನಿಲ್ಲ ಎಂಬ ಕಹಿಸತ್ಯವನ್ನ ಅರಗಿಸಿಕೊಳ್ಳಲು ಇನ್ನೂ ಕಪೂರ್ ಕುಟುಂಬಕ್ಕೆ ಸಾಧ್ಯ ಆಗುತ್ತಿಲ್ಲ. ಹೀಗಾಗಿ, ಸಾವಿನ ಮನೆಯಲ್ಲಿ ಸಂಭ್ರಮ ಬೇಡ ಎಂದು ಸೋನಂ ಕಪೂರ್ ಮದುವೆ ಪೋಸ್ಟ್ ಪೋನ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಮುಂದೆ ಓದಿರಿ...

ಸೋನಂ ಕಪೂರ್ ಮದುವೆ ಸದ್ಯಕ್ಕಿಲ್ಲ

32 ವರ್ಷ ವಯಸ್ಸಿನ ಸೋನಂ ಕಪೂರ್ ಮದುವೆ ಇದೇ ವರ್ಷದ ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯಬೇಕಿತ್ತು. ಆದ್ರೆ, ಸದ್ಯ ಕುಟುಂಬದ ಮೂಲಗಳು ತಿಳಿಸಿರುವ ಪ್ರಕಾರ, ಸೋನಂ ಕಪೂರ್ ಮದುವೆ ಸದ್ಯಕ್ಕೆ ನಡೆಯುವುದಿಲ್ಲ.

ಲವ್ ಕಮ್ ಅರೇಂಜ್ಡ್ ಮ್ಯಾರೇಜ್

ತಮ್ಮ ದೀರ್ಘಕಾಲದ ಗೆಳೆಯ ಆನಂದ್ ಅಹುಜಾ ಅವರನ್ನ ಕೈಹಿಡಿಯಲು ಸೋನಂ ಕಪೂರ್ ಮನಸ್ಸು ಮಾಡಿದ್ದಾರೆ. ಸೋನಂ-ಆನಂದ್ ಪ್ರೀತಿಗೆ ಕಪೂರ್ ಕುಟುಂಬ ಒಪ್ಪಿಗೆ ನೀಡಿದೆ.

ಕಪೂರ್ ಕುವರಿ ಸೋನಂ ಪೀ..ಪೀ..ಪೀ..ಡುಂ..ಡುಂಗೆ ರೆಡಿ.!

ಯಾರೀ ಆನಂದ್ ಅಹುಜಾ.?

ಆನಂದ್ ಅಹುಜಾ ದೆಹಲಿ ಮೂಲದ ಬಿಸಿನೆಸ್ ಮ್ಯಾನ್ ಆಗಿದ್ದು, ಕೆಲ ವರ್ಷಗಳಿಂದ ಸೋನಂ ಕಪೂರ್ ಅವರನ್ನ ಪ್ರೀತಿಸುತ್ತಿದ್ದಾರೆ.

ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ದ ಸೋನಂ-ಆನಂದ್

ದುಬೈ ಹೋಟೆಲ್ ನ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಶ್ರೀದೇವಿಗೆ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಅಂತಿಮ ನಮನ ಸಲ್ಲಿಸಿದ್ದರು.

English summary
According to sources of Kapoor Family, Sonam Kapoor's marriage plans postponed due to Sridevi's death.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada