For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಮತ್ತು ಶ್ರದ್ಧಾ ವರ್ಷದ 'ಹಾಟೆಸ್ಟ್ ವೆಜಿಟೇರಿಯನ್' ಸೆಲೆಬ್ರಿಟಿಗಳು

  |

  ಬಹುಭಾಷಾ ನಟ ಸೋನು ಸೂದ್ ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದ ನಟ. ಲಾಕ್ ಡೌನ್ ಬಳಿಕ ಸಾಮಾಜಿಕ ಕೆಲಸಗಳಿಂದ ಜನರ ಮನಗೆದ್ದಿರುವ ಸೋನು ಸೂದ್ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಸೋನು ಸೂದ್ ಕೆಲಸಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಸೋನು ಸೂದ್ ಗೆ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದೆ.

  ಸೋನು ಸೂದ್ ಈ ವರ್ಷದ ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ ಎನ್ನುವ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹೌದು, ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಇಂಡಿಯಾ ಸೋನು ಸೂದ್ ಅವರನ್ನು ಆಯ್ಕೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಮಾಡಿದೆ. ಹಾಟೆಸ್ಟ್ ವೆಜಿಟೇರಿಯನ್ ನಟ ಸೋನು ಸೂದ್ ಆದರೇ, ಮಹಿಳೆಯರ ವಿಭಾಗದಲ್ಲಿ ಹಾಟೆಸ್ಟ್ ವೆಜಿಟೇರಿಯನ್ ಆಗಿ ನಟಿ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದಾರೆ.

  ಲಾಕ್‌ಡೌನ್ ಎಫೆಕ್ಟ್: ಸಿನಿ ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸೋನು ಸೂದ್ಲಾಕ್‌ಡೌನ್ ಎಫೆಕ್ಟ್: ಸಿನಿ ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸೋನು ಸೂದ್

  ಈ ಬಗ್ಗೆ ನಟ ಸೋನು ಸೂದ್ ಸಂತಸ ವ್ಯಕ್ತಪಡಿಸಿದ್ದಾರೆ. ಟ್ವಟ್ಟರ್ ನಲ್ಲಿ ಬರೆದುಕೊಂಡಿರುವ ಸೋನು ಸೂದು, 'ಧನ್ಯವಾದಗಳು ಪೆಟಾ ಇಂಡಿಯಾ' ಎಂದು ಹೇಳಿ, ಪೆಟಾ ಚಿತ್ರವನ್ನು ಶೇರ್ ಮಾಡಿದ್ದಾರೆ.

  ಭಾರತೀಯ ಚಿತ್ರರಂಗದಲ್ಲಿ ಖಡಕ್ ಖಳನಾಯಕನಾಗಿ ಗುರುತಿಸಿಕೊಂಡಿರುವ ಸೋನು ಸೂದ್ ಇನ್ಮುಂದೆ ಖಳನಟನ ಪಾತ್ರ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡದಲ್ಲಿ ಸೋನು ಸೂದ್ ಅಬ್ಬರಿಸಿದ್ದಾರೆ. ಸ್ಟಾರ್ ನಟರ ಎದುರು ಪ್ರಮುಖ ಖಳನಟನಾಗಿ ಮಿಂಚಿರುವ ಸೋನು ಸೂದ್ ಇನ್ಮುಂದೆ ವಿಲನ್ ಆಗಿ ನಟಿಸದಿರಲು ನಿರ್ಧರಿಸಿದ್ದಾರೆ.

  ಕರ್ನಾಟಕದಿಂದ ಹೊರಗೆ ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಗ್ರೂಪ್ | Darshan Bike Ride | Filmibeat Kannada

  ಈ ಬಗ್ಗೆ ಸೋನು ಸೂದ್ ಮಾತನಾಡಿದ್ದು, 'ಕಳೆದ ಒಂದು ವರ್ಷದಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಬಹುತೇಕ ಎಲ್ಲವೂ ಪಾಸಿಟಿವ್ ಆಗಿದೆ. ಒಬ್ಬ ನಟನಾಗಿ ನನ್ನ ವೃತ್ತಿ ಜೀವನದಲ್ಲಿ ಇನ್ಮುಂದೆ ವಿಲನ್ ಪಾತ್ರಗಳು ಮಾಡದಿರಲು ನಿರ್ಧರಿಸಿದ್ದೇನೆ' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  English summary
  Actor Sonu sood and shraddha kapoor Become hottest vegetarian celebrity of 2020 by PETA India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X