For Quick Alerts
  ALLOW NOTIFICATIONS  
  For Daily Alerts

  'ಮಾಲ್ಡೀವ್ಸ್ ಗೆ ಟಿಕೆಟ್ ಕೊಡಿಸಿ' ಎಂದವನಿಗೆ ಸೋನು ಸೂದ್ ಕೊಟ್ರು ತಕ್ಕ ಉತ್ತರ

  |

  ನಟ ಸೋನು ಸೂದ್ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಅವರವರ ಸ್ವಗ್ರಾಮಗಳಿಗೆ ಕಳಿಸುವ ಮಹತ್ ಕಾರ್ಯ ಮಾಡಿದ್ದರು.

  ಕೊರೊನಾ ಮುಗಿದ ಮೇಲೂ ಸಹ ತಮ್ಮ ಸತ್ಕಾರ್ಯವನ್ನು ನಿಲ್ಲಿಸಿದ್ದ ನಟ ಸೋನು ಸೂದ್. ಈಗಲೂ ಯಾರೇ ಸಹಾಯ ಬಯಸಿ ಸೋನುಸೂದ್ ಅನ್ನು ಸಂಪರ್ಕಿಸಿದರೆ ಅವರಿಗೆ ಇಲ್ಲವೆನ್ನದೇ ಸಹಾಯ ಮಾಡುತ್ತಿದ್ದಾರೆ.

  ಸೋನು ಸೂದ್ ಸಹಾಯ ಮಾಡುತ್ತಿರುವುದೆಲ್ಲ ಪ್ರಚಾರಕ್ಕಾಗಿಯೇ? ಅನುಮಾನದ ಪ್ರಶ್ನೆಗೆ ತಿರುಗೇಟು ಕೊಟ್ಟ ನಟಸೋನು ಸೂದ್ ಸಹಾಯ ಮಾಡುತ್ತಿರುವುದೆಲ್ಲ ಪ್ರಚಾರಕ್ಕಾಗಿಯೇ? ಅನುಮಾನದ ಪ್ರಶ್ನೆಗೆ ತಿರುಗೇಟು ಕೊಟ್ಟ ನಟ

  ಆದರೆ ಕೆಲವರು ಸೋನು ಸೂದ್ ಮಾಡಿದ ಕಾರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇನ್ನು ಕೆಲವದು ಸೋನು ಸೂದ್ ಅವರ ಕಾಲೆಳೆಯಲು ಯತ್ನಿಸಿದರು. ಇನ್ನು ಕೆಲವರು ತಮಾಷೆ ಮಾಡಿದರೆ, ಇನ್ನು ಕೆಲವರು ರಾಜಕೀಯ ಮಹಾತ್ವಾಕಾಂಕ್ಷೆ ತೀರಿಸಿಕೊಳ್ಳು ಹೀಗೆ ಮಾಡುತ್ತಿದ್ದಾರೆ ಎಂದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೋನು ಸೂದ್ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ.

  ಪಪ್ಪು ಯಾದವ್ ಎಂಬ ಯುವಕನಿಗೆ ಸೋನು ಸಹಾಯ

  ಪಪ್ಪು ಯಾದವ್ ಎಂಬ ಯುವಕನಿಗೆ ಸೋನು ಸಹಾಯ

  ಇತ್ತೀಚೆಗೆ ಸೋನು ಸೂದ್ ರಿಂದ ಸಹಾಯ ಪಡೆದ ಪಪ್ಪು ಯಾದವ್ ಎಂಬುವರ ಬಗ್ಗೆ ಅವಿನಾಶ್ ಶ್ರೀವತ್ಸ ಎಂಬುವರು ಸೋನು ಸೂದ್‌ಗೆ ಟ್ವೀಟ್ ಮಾಡಿ ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸೋನು ಸೂದ್, 'ಪಪ್ಪು ಯಾದವ್ ಅಂಥೂ ಹೀರೋ ಥರ ಕಾಣ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದರು.

  ಸೋನು ಸೂದ್ ಗೆ 'ಭಾರತ ರತ್ನ' ಸಿಗಬೇಕು: ಪ್ರಧಾನಿ ಮೋದಿ ಬಳಿ ಅಭಿಮಾನಿಗಳ ಮನವಿಸೋನು ಸೂದ್ ಗೆ 'ಭಾರತ ರತ್ನ' ಸಿಗಬೇಕು: ಪ್ರಧಾನಿ ಮೋದಿ ಬಳಿ ಅಭಿಮಾನಿಗಳ ಮನವಿ

  ನನ್ನನ್ನು ಮಾಲ್ಡೀವ್ಸ್‌ಗೆ ಕಳಿಸಿಕೊಡಿ ಎಂದ ಯುವಕ

  ನನ್ನನ್ನು ಮಾಲ್ಡೀವ್ಸ್‌ಗೆ ಕಳಿಸಿಕೊಡಿ ಎಂದ ಯುವಕ

  ಸೋನು ಸೂದ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪಾರ್ಥ್ ಹೆಸರಿನ ಟ್ರೋಲಿಗ, 'ಸಾರ್ ನನಗೆ ಮಾಲ್ಡೀವ್ಸ್‌ ಗೆ ಹೋಗಬೇಕೆಂದಿದೆ, ನನ್ನನ್ನು ಅಲ್ಲಿಗೆ ಕಳಿಸಿಕೊಡಿ' ಎಂದು ತಮಾಷೆ ಮಾಡಿದ್ದಾನೆ. ಸೋನು ಸೂದ್ ಹೆಸರಲ್ಲಿ ಉಚಿತವಾಗಿ ಮಾಲ್ಡೀವ್ಸ್ ಸುತ್ತಿ ಬರುವ ಉದ್ದೇಶವಿರಬಹುದು ಆತನದ್ದು.

  ತಕ್ಕ ಉತ್ತರ ನೀಡಿದ ಸೋನು ಸೂದ್

  ತಕ್ಕ ಉತ್ತರ ನೀಡಿದ ಸೋನು ಸೂದ್

  ಆದರೆ ಇದಕ್ಕೆ ಸರಿಯಾಗಿಯೇ ಉತ್ತರಿಸಿರುವ ಸೋನು ಸೂದ್, 'ಮಾಲ್ಡಿವ್ಸ್‌ಗೆ ಸೈಕಲ್ ನಲ್ಲಿ ಹೋಗುತ್ತೀಯಾ ಅಥವಾ ಆಟೋ ರಿಕ್ಷಾದಲ್ಲಿಯಾ?' ಎಂದು ಮರು ಪ್ರಶ್ನೆ ಎಸೆದಿದ್ದಾರೆ. ಪಾಪ ಆ ಟ್ರೋಲಿಗನ ಬಾಯಿ ಬಂದ್ ಮಾಡಿದ್ದಾರೆ ಸೋನು ಸೂದ್.

  ಸೋನು ಸೂದ್ ಮಾನವೀಯತೆ ಕೆಲಸಕ್ಕೆ ಪ್ರತಿಷ್ಠಿತ ಪ್ರಶಸ್ತಿ ನೀಡಿದ ವಿಶ್ವಸಂಸ್ಥೆಸೋನು ಸೂದ್ ಮಾನವೀಯತೆ ಕೆಲಸಕ್ಕೆ ಪ್ರತಿಷ್ಠಿತ ಪ್ರಶಸ್ತಿ ನೀಡಿದ ವಿಶ್ವಸಂಸ್ಥೆ

  Shivanna, Prabhudeva ಬಿಗ್ ಬಜೆಟ್ ಸಿನಿಮಾಗೆ ಭಟ್ಟರ ಸಾರಥ್ಯ | Filmibeat Kannada
  ನಕಲಿ ವ್ಯಕ್ತಿಗಳಿಗೆ ಸಹಾಯ ಎಂದವರಿಗೆ ಸೋನು ಸೂದ್ ಉತ್ತರ

  ನಕಲಿ ವ್ಯಕ್ತಿಗಳಿಗೆ ಸಹಾಯ ಎಂದವರಿಗೆ ಸೋನು ಸೂದ್ ಉತ್ತರ

  ಸೋನು ಸೂದ್ ಗೆ ಸಹಾಯ ಕೇಳುತ್ತಿರುವುದು ನಕಲಿ ಖಾತೆಗಳು, ನಕಲಿ ವ್ಯಕ್ತಿಗಳಿಗೆ ಸೋನು ಸಹಾಯ ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿದ್ದರು. ಇದಕ್ಕೆ ಸಾಕ್ಷ್ಯ ಸಮೇತ ಉತ್ತರಿಸಿದ್ದ ಸೋನು ಸೂದ್, 'ತಮ್ಮಿಂದ ಸಹಾಯ ಪಡೆದ ಮಗುವಿನ ಚಿತ್ರ, ಆಸ್ಪತ್ರೆ ವಿಳಾಸ, ಬಿಲ್' ಎಲ್ಲವನ್ನೂ ಟ್ವೀಟ್ ಮಾಡಿ, ಪ್ರಶ್ನೆ ಎತ್ತಿದ್ದವರ ಬಾಯಿ ಮುಚ್ಚಿಸಿದ್ದರು.

  English summary
  A man asked Sonu Sood to send him to Maldives, Sonu Sood gave hilarious answer to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X