For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಪೊಲೀಸರಿಗೆ ನೆರವು ನೀಡಿದ ನಟ ಸೋನು ಸೂದ್

  |

  ನಟ ಸೋನು ಸೂದ್ ಕೊರೊನಾ ರೋಗಿಗಳಿಗೆ, ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರಿಗೆ ಮಾತ್ರವೇ ಅಲ್ಲದೆ ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೂ ನೆರವಿನ ಹಸ್ತ ಚಾಚುತ್ತಾ ಬಂದಿದ್ದಾರೆ.

  ಕೊರೊನಾ ವಿರುದ್ಧ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿ ಜೊತೆಗೆ ಪೊಲೀಸರೂ ಇದ್ದು ಅವರಿಗೆ ಸೋನು ಸೂದ್ ನೆರವಾಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ಪೊಲೀಸರಿಗೆ ಸೋನು ಸೂದ್ ಸಹಾಯ ಮಾಡಿದ್ದಾರೆ.

  ಬೆಂಗಳೂರು ಪೊಲೀಸರ ಬಳಕೆಗೆಂದು ಆಮ್ಲಜನಕ ಸಾಂದ್ರಕ ಯಂತ್ರ (ಆಕ್ಸಿಜನ್ ಕಾನ್ಸನ್‌ಟ್ರೇಟರ್) ಅನ್ನು ಸೋನು ಸೂದ್ ನೀಡಿದ್ದಾರೆ. ಸೋನು ಸೂದ್ ನೀಡಿರುವ ಕಾನ್ಸನ್‌ಟ್ರೇಟರ್ ಅನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಸ್ವೀಕರಿಸಿದ್ದಾರೆ.

  ಕೊರೊನಾ ವಾರಿಯರ್ಸ್‌ಗಳಾಗಿರುವ ಬೆಂಗಳೂರು ಪೊಲೀಸರ ಬಳಕೆಗೆಂದು ಈ ಯಂತ್ರವನ್ನು ಸೋನು ಸೂದ್ ತಮ್ಮ ಚಾರಿಟೇಬಲ್ ವತಿಯಿಂದ ನೀಡಿದ್ದು, ಇದಕ್ಕೂ ಮುನ್ನ ಕಮಲ್ ಪಂಥ್ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿ ಯಂತ್ರವನ್ನು ಸ್ವೀಕರಿಸುವಂತೆ ಸೋನು ಸೂದ್ ಮನವಿ ಮಾಡಿದ್ದಾರೆ.

  ಸೋನು ಸೂದ್ ಚಾರಿಟೇಬಲ್ ಟ್ರಸ್ಟ್‌ನ ಹಶ್ಮತ್ ಎಂಬುವರು ಕಮಲ್ ಪಂಥ್ ಅವರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ತಲುಪಿಸಿದ್ದಾರೆ. ಈ ಯಂತ್ರಕ್ಕೆ ಈಗ ಬಹಳ ಬೇಡಿಕೆ ಇದ್ದು ಒಂದು ಯಂತ್ರ 80,000 ಕ್ಕೂ ಹೆಚ್ಚು ಬೆಲೆಯಿದೆ.

  ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿವೆ. ಬೆಂಗಳೂರಿನ ಕರ್ತವ್ಯ ನಿರತ ಹಲವು ಪೊಲೀಸರು ಸಹ ಕೊರೊನಾಕ್ಕೆ ತುತ್ತಾಗಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಸೋನು ಸೂದ್ ಆಮ್ಲಜನಕ ಸಾಂದ್ರಕ ಯಂತ್ರವನ್ನು ನೀಡಿದ್ದಾರೆ.

  ಮುಂಬೈ ಏರ್ ಪೋರ್ಟ್ ನಲ್ಲಿ ಊರ್ವಶಿಯ ಡ್ರೆಸ್ ಗೆ ಗಾಳಿ ಕೊಟ್ಟ ಕಾಟ ಅಷ್ಟಿಷ್ಟಲ್ಲ | Filmibeat Kannada

  ಕೊರೊನಾ ಎರಡನೇ ಅಲೆಯಲ್ಲಿ ರೋಗಿಗಳು ಆಸ್ಪತ್ರೆ ಬೆಡ್‌ಗಳಿಲ್ಲದೆ, ಆಮ್ಲಜನಕವಿಲ್ಲದೆ ಪರಿತಪಿಸುತ್ತಿದ್ದಾರೆ. ಸೋನು ಸೂದ್ ಅವರು ತಮ್ಮನ್ನು ಸಂಪರ್ಕಿಸಿದವರಿಗೆ ಆಸ್ಪತ್ರೆ ಬೆಡ್ ಕೊಡಿಸುವ, ಆಮ್ಲಜನಕ ಕೊಡಿಸುವ ಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆಲವು ಆಮ್ಲಜನಕ ಸಿಲಿಂಡರ್‌ಗಳು, ಬೆಡ್‌ಗಳನ್ನು ಉಚಿತವಾಗಿ ನೀಡಿ ಕಳೆದ ವರ್ಷ ಆರಂಭಿಸಿದ್ದ ತಮ್ಮ ಸಮಾಜ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ.

  English summary
  Actor Sonu Sood gave oxygen concentrator to Bengaluru police. Bengaluru commissioner Kamal Pant received the concentrator.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X