For Quick Alerts
  ALLOW NOTIFICATIONS  
  For Daily Alerts

  ಭಾರತದ ಅತ್ಯಂತ 'ಶ್ರೀಮಂತ' ಮಹಿಳೆಯನ್ನು ಪರಿಚಯಿಸಿದ ಸೋನು ಸೂದ್

  |

  ನಟ ಸೋನು ಸೂದ್, ಭಾರತದ ಅತಿ ಶ್ರೀಮಂತ ಮಹಿಳೆಯನ್ನು ನಟ ಸೋನು ಸೂದ್ ಪರಿಚಯಿಸಿದ್ದಾರೆ. ವಿಶೇಷವೆಂದರೆ ಆಕೆಯ ಶ್ರೀಮಂತಿಕೆ ಅಡಗಿರುವುದು ಹಣದಲ್ಲಲ್ಲ ಬದಲಿಗೆ ಆಕೆಯ ಹೃದಯದಲ್ಲಿ.

  ಪ್ರಪಂಚದ ಶ್ರೀಮಂತ ಮಹಿಳೆಯನ್ನು ಪರಿಚಯಿಸಿದ ಸೋನು ಸೂದ್ | Filmibeat Kannada

  ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ಮಾಡುತ್ತಿರುವ ಸಹಾಯಕ್ಕೆ ಹಲವಾರು ಮಂದಿ ಸೋನು ಸೂದ್ ಫೌಂಡೇಶನ್‌ಗೆ ದೇಣಿಗೆ ನೀಡಿದ್ದಾರೆ. ದೇಶದ ಖ್ಯಾತ ನಾಮರು ಸೋನು ಸೂದ್‌ ಫೌಂಡೇಶನ್‌ಗೆ ಸಾಕಷ್ಟು ಹಣ ನೀಡಿದ್ದಾರೆ. ಹಾಗೆಯೇ ಸಾಮಾನ್ಯ ಜನರೂ ಸಹ ಸೋನು ಸೂದ್‌ ಮಾಡುತ್ತಿರುವ ಕಾರ್ಯಕ್ಕೆ ತಮ್ಮ ನೆರವಿನ ಹಸ್ತವನ್ನು ಜೋಡಿಸಿದ್ದಾರೆ.

  ಆಂಧ್ರ ಪ್ರದೇಶದ ವರಿಕುಂಟಪಾಡು ಎಂಬ ಸಣ್ಣ ಹಳ್ಳಿಯ ಅಂಧ ಮಹಿಳೆ ಬೊಡ್ಡು ನಾಗಲಕ್ಷ್ಮಿ ಸಹ ಸೋನು ಸೂದ್‌ ಫೌಂಡೇಶನ್‌ಗೆ 15,000 ರುಪಾಯಿ ದೇಣಿಗೆ ನೀಡಿದ್ದಾರೆ. ಅಂಧೆಯಾದ ಬೊಡ್ಡು ನಾಗಲಕ್ಷ್ಮಿಗೆ ಪ್ರತಿತಿಂಗಳು ಸರ್ಕಾರ ಕೊಡುವ 3000 ರು. ಮಾಸಾಶನದ ಹಣದಲ್ಲಿ ಉಳಿಸಿ ಕೂಡಿಟ್ಟ 15,000 ಹಣವನ್ನು ಅವರು ಸೋನು ಸೂದ್‌ಗೆ ನೀಡಿದ್ದಾರೆ.

  ಈ ವಿಷಯವನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ನಟ ಸೋನು ಸೂದ್, 'ಅಂಧ ಯುವತಿ, ಯೂಟ್ಯೂಬರ್‌ ಸಹ ಆಗಿರುವ ಬೊಡ್ಡು ನಾಗಲಕ್ಷ್ಮಿ 15,000 ನೀಡಿದ್ದಾರೆ. ಇದು ಅವರ ಐದು ತಿಂಗಳ ಮಾಸಾಶನ. ನನ್ನ ಮಟ್ಟಿಗೆ ಈಕೆಯೇ ಭಾರತದ ಶ್ರೀಮಂತ ಮಹಿಳೆ. ಬೇರೊಬ್ಬರ ನೋವನ್ನು ಕಾಣಲು ಕಣ್ಣುಗಳ ಅವಶ್ಯಕತೆ ಇಲ್ಲ' ಎಂದಿದ್ದಾರೆ ಸೋನು ಸೂದ್.

  ಅಂಧೆ ಬೊಡ್ಡು ನಾಲಲಕ್ಷ್ಮಿ ತೋರಿರುವ ಮಾನವೀಯತೆ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಸೋನು ಸೂದ್ ಅವರು ನಾಗಲಕ್ಷ್ಮಿಯ ಚಿತ್ರವನ್ನು ಸಹ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ನಾಗಲಕ್ಷ್ಮಿಯ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಕೊರೊನಾ ಸಂಕಷ್ಟದಲ್ಲಿ ನಟ ಸೋನು ಸೂದ್ ದೊಡ್ಡ ನೆರವಿನ ಹಸ್ತ ಚಾಚಿದ್ದಾರೆ. ಆಮ್ಲಜನಕ ಸಿಲಿಂಡರ್ ವಿತರಣೆ, ಬೆಡ್ ಕೊಡಿಸುವುದು, ಉಚಿತ ಆಹಾರ ವಿತರಣೆ, ಔಷಧಿ ವಿತರಣೆ, ಅವಶ್ಯಕತೆ ಇದ್ದವರಿಗೆ ಪ್ಲಾಸ್ಮಾ ಡೋನರ್‌ಗಳ ಸಂಪರ್ಕ ಮಾಡಿಸಿಕೊಡುವುದು. ವೈದ್ಯರಿಗೆ, ದಾದಿಯರಿಗೆ ಸಹಾಯ ಹೀಗೆ ಹಲವಾರು ವಿಧಗಳಲ್ಲಿ ಸೋನು ಸೂದ್ ನೆರವಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಹ ಉಚಿತವಾಗಿ ಆಮ್ಲಜನಕ ಸಿಲಿಂಡರ್‌ ವಿತರಣೆ ಮಾಡುತ್ತಿದ್ದಾರೆ ಸೋನು ಸೂದ್.

  English summary
  Sonu Sood introduced India's richest woman Boddu Naga Lakshmi. She donate 15,000 to Sonu Sood foundation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X