For Quick Alerts
  ALLOW NOTIFICATIONS  
  For Daily Alerts

  ಕೊರೊನಾ ರೋಗಿಗಳ ಉಪಚಾರಕ್ಕೆ ಐಶಾರಾಮಿ ಹೋಟೆಲ್ ಬಿಟ್ಟುಕೊಟ್ಟ ಖ್ಯಾತ ವಿಲನ್

  |

  ಕೊರೊನಾ ವಿರುದ್ಧ ದೇಶವೇ ಒಗ್ಗಟ್ಟಿನಿಂದ ಹೋರಾಡುತ್ತಿದ್ದು, ಕೊರೊನಾ ವಿರುದ್ಧದ ಈ ಸಂಘರ್ಷದಲ್ಲಿ ಸಿನಿಮಾ ಉದ್ಯಮವು ಸರ್ಕಾರಕ್ಕೆ ದೊಡ್ಡ ನೆರವನ್ನೇ ನೀಡುತ್ತಿದೆ.

  ನಟ-ನಟಿಯರು ದೊಡ್ಡ ಮೊತ್ತದ ಹಣಕಾಸಿನ ನೆರವನ್ನು ಸರ್ಕಾರಗಳಿಗೆ ಘೋಷಿಸಿದ್ದಾರೆ. ಬಾಲಿವುಡ್ ಸೇರಿ ದೇಶದ ಬಹುತೇಕ ಎಲ್ಲಾ ಸಿನಿರಂಗಗಳಲ್ಲಿಯೂ ನಟ-ನಟಿಯರು ಬರಪೂರ ನೆರವನ್ನು ಸರ್ಕಾರಕ್ಕೆ ನೀಡಿದ್ದಾರೆ.

  ಕೊರೊನಾ ಎದುರಿಸಲು ನಾಲ್ಕಂತಸ್ತಿನ ಕಟ್ಟಡವನ್ನೇ ಬಿಟ್ಟುಕೊಟ್ಟ ಶಾರುಖ್ ಖಾನ್ಕೊರೊನಾ ಎದುರಿಸಲು ನಾಲ್ಕಂತಸ್ತಿನ ಕಟ್ಟಡವನ್ನೇ ಬಿಟ್ಟುಕೊಟ್ಟ ಶಾರುಖ್ ಖಾನ್

  ಕೇವಲ ಹಣಕಾಸಿನ ನೆರವನ್ನು ಮಾತ್ರವಲ್ಲ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ನಾಲ್ಕಂತಸ್ತಿನ ಕಚೇರಿ ಕಟ್ಟಡವನ್ನೇ ಕೊರೊನಾ ರೋಗಿಗಳ ಉಪಚಾರಕ್ಕೆಂದು ಬಿಟ್ಟುಕೊಟ್ಟಿದ್ದರು. ಇದೀಗ ಇದೇ ಹಾದಿಯನ್ನು ಖ್ಯಾತ ವಿಲನ್ ಒಬ್ಬರು ತುಳಿದಿದ್ದಾರೆ.

  ಕೊರೊನಾ ವಿರುದ್ಧ ಹೋರಾಟಕ್ಕೆ ವಿಲನ್ ನೆರವು

  ಕೊರೊನಾ ವಿರುದ್ಧ ಹೋರಾಟಕ್ಕೆ ವಿಲನ್ ನೆರವು

  ಬಾಲಿವುಡ್, ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳಲ್ಲೂ ನಟಿಸಿರುವ, ಜಾಕಿ ಚಾನ್‌ ಜೊತೆ ಸಹ ನಟಿಸಿರುವ ನಟ ಸೋನು ಸೂದ್ ಅವರು ದೊಡ್ಡ ಮಟ್ಟಿನ ಸಹಾಯವನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಡಿದ್ದಾರೆ.

  ಸೋನುಸೂದ್ ಮಾಲೀಕತ್ವದ ಐಶಾರಾಮಿ ಹೋಟೆಲ್

  ಸೋನುಸೂದ್ ಮಾಲೀಕತ್ವದ ಐಶಾರಾಮಿ ಹೋಟೆಲ್

  ಸೋನು ಸೂದ್ ಅವರು ತಮ್ಮ ಒಡೆತನದ ಆರು ಅಂತಸ್ತಿನ ಐಶಾರಾಮಿ ಹೋಟೆಲ್ ಅನ್ನು ಕೊರೊನಾ ಪೀಡಿತರ ಉಪಚಾರ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ವಾಸ್ತವ್ಯಕ್ಕೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.

  ''ವೈದ್ಯರು, ನರ್ಸ್‌ಗಳು ತಂಗಲು ಹೋಟೆಲ್ ಬಿಟ್ಟುಕೊಡಲು ಸಿದ್ಧ''

  ''ವೈದ್ಯರು, ನರ್ಸ್‌ಗಳು ತಂಗಲು ಹೋಟೆಲ್ ಬಿಟ್ಟುಕೊಡಲು ಸಿದ್ಧ''

  ''ಕೊರೊನಾ ವಿರುದ್ಧ ಹೋರಾಟದಲ್ಲಿ ಇದೊಂದು ನನ್ನ ಸಹಾಯ. ಕೊರೊನಾ ರೋಗಿಗಳನ್ನು ಉಪಚರಿಸಲು ಮಹಾರಾಷ್ಟ್ರದ ಹಲವುಕಡೆಗಳಿಂದ ವೈದ್ಯರು, ನರ್ಸ್‌ಗಳು, ಇತರ ವೈದ್ಯಕೀಯ ಸಿಬ್ಬಂದಿ ಮುಂಬೈಗೆ ಬಂದಿದ್ದಾರೆ, ಅವರಿಗೆ ವಿಶ್ರಮಿಸಲು, ತಂಗಲು ನನ್ನ ಹೋಟೆಲ್ ಅನ್ನು ಬಿಟ್ಟುಕೊಡಲಿಚ್ಛಿದ್ದೇನೆ, ಈ ಬಗ್ಗೆ ಸ್ಥಳೀಯ ಆಡಳಿತದೊಂದಿಗೆ ಮಾತನಾಡುತ್ತಿದ್ದೇನೆ' ಎಂದು ಸೋನು ಸೂದ್ ಹೇಳಿದ್ದಾರೆ.

  ರೋಗಿಗಳ ಉಪಚಾರಕ್ಕೆ ಕಚೇರಿ ಬಿಟ್ಟುಕೊಟ್ಟ ಶಾರುಖ್

  ರೋಗಿಗಳ ಉಪಚಾರಕ್ಕೆ ಕಚೇರಿ ಬಿಟ್ಟುಕೊಟ್ಟ ಶಾರುಖ್

  ಕೆಲವೇ ದಿನಗಳ ಹಿಂದೆ ಶಾರುಖ್ ಖಾನ್-ಗೌರಿ ಖಾನ್ ದಂಪತಿ ಹಣಕಾಸಿನ ನೆರವು, ಆಹಾರ, ದಿನಸಿ ಸಾಮಗ್ರಿಗಳು, ಆರೋಗ್ಯ ಸಲಕರಣೆಗಳ ನೆರವಿನ ಜೊತೆಗೆ ಕೊರೊನಾ ರೋಗಿಗಳನ್ನು ಉಪರಿಸಲು ತಮ್ಮ ನಾಲ್ಕಂತಸ್ತಿನ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಗೆ ಬಿಟ್ಟುಕೊಟ್ಟಿದ್ದಾರೆ.

  English summary
  Famous Actor Sonu Sood offers his six storey hotel to medical staff and doctors whow were fighting against coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X