For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಫೌಂಡೇಶನ್‌ ಜೊತೆ ಕೈ ಜೋಡಿಸಿದ ಸಾರಾ ಅಲಿ ಖಾನ್

  |

  ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಜನಪರ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಸೋನು ಸೂದ್ ಫೌಂಡೇಶನ್ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮುಂದುವರಿಸಿದ್ದಾರೆ.

  ಆಕ್ಸಿಜನ್ ಸಮಸ್ಯೆ, ಬೆಡ್ ಸಮಸ್ಯೆ ಸೇರಿದಂತೆ ಆರೋಗ್ಯದ ದೃಷ್ಟಿಯಿಂದ ಎದುರಾಗುತ್ತಿರುವ ಹಾಗೂ ತಮ್ಮ ಗಮನಕ್ಕೆ ಬರುತ್ತಿರುವ ಸಮಸ್ಯೆಗಳಿಗೆ ಸೋನು ಸೋದ್ ಸ್ಪಂದಿಸುತ್ತಿದ್ದಾರೆ.

  ಸರ್ಕಾರಗಳ ಹೊರತಾಗಿಯೂ ಸೋನು ಸೂದ್ ಮಾಡುತ್ತಿರುವ ಕೆಲಸಗಳು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ, ಸೋನು ಸೂದ್‌ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಾಥ್ ನೀಡಿದ್ದಾರೆ.

  ಸೋನು ಸೂದ್ ಮೋಸಗಾರ, ದುಡ್ಡಿಗಾಗಿ ಎಲ್ಲಾ ಮಾಡುತ್ತಿದ್ದಾರೆ: ಟ್ವೀಟ್ ಲೈಕ್ ಮಾಡಿದ ಕಂಗನಾಸೋನು ಸೂದ್ ಮೋಸಗಾರ, ದುಡ್ಡಿಗಾಗಿ ಎಲ್ಲಾ ಮಾಡುತ್ತಿದ್ದಾರೆ: ಟ್ವೀಟ್ ಲೈಕ್ ಮಾಡಿದ ಕಂಗನಾ

  ಸೋನು ಸೂದ್ ಫೌಂಡೇಶನ್‌ಗೆ ದೇಣಿಗೆ ನೀಡುವ ಮೂಲಕ ಸೋನು ಅವರ ಮಾನವೀಯತೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  Recommended Video

  ಕೊರೊನಾ ಬಂದ್ರೆ ಮನೆಯಲ್ಲಿದ್ದುಕೊಂಡೇ ಹುಷಾರಾಗೋದು ಹೇಗೆ? | Filmibeat Kannada

  ಸೋನು ಸೂದ್ ಫೌಂಡೇಶನ್‌ಗೆ ದೇಣಿಗೆ ನೀಡಿದ್ದಕ್ಕಾಗಿ ಟ್ವಿಟ್ಟರ್ ಮೂಲಕ ಸಾರಾ ಅಲಿ ಖಾನ್‌ಗೆ ಧನ್ಯವಾದ ಅರ್ಪಿಸಿದ್ದಾರೆ. 'ಈ ಕಷ್ಟದ ಸಮಯದಲ್ಲಿ ರಾಷ್ಟ್ರದ ಯುವಕರು ಮುಂದೆ ಬಂದು ಸಹಾಯ ಮಾಡಲು ನೀವು ಪ್ರೇರಣೆ ನೀಡಿದ್ದೀರಿ. ನೀವು ಹೀರೋ, ನಿಮ್ಮ ಬಗ್ಗೆ ಹೆಮ್ಮೆ ಇದೆ' ಎಂದು ಟ್ವೀಟ್ ಮಾಡಿದ್ದಾರೆ.

  English summary
  Sonu Sood on Saturday thanked Sara Ali Khan for her contribution to his foundation.
  Saturday, May 8, 2021, 19:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X