ಮುಂಬೈನಲ್ಲಿ ಸಿಲುಕಿದ ಕನ್ನಡಿಗರನ್ನು ಮನೆ ಸೇರಿಸಿದ ನಟ ಸೋನು ಸೂದ್: ಅಭಿಮಾನಿಗಳ ಮೆಚ್ಚುಗೆ

ಖ್ಯಾತ ಬಹುಭಾಷ ನಟ ಸೋನು ಸೂದ್ ಮುಂಬೈನಲ್ಲಿ ಸಿಲುಕಿದ್ದ ಕರ್ನಾಟಕದ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ಸೇರಿಸಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ವಲಸೆ ಕಾರ್ಮಿಕರ ಸಂಕಷ್ಟ ಹೇಳತೀರದಾಗಿದೆ. ಕೆಲಸ ಕಳೆದುಕೊಂಡಿರುವ ಕಾರ್ಮಿಕರು ಮನೆಗೂ ತೆರಳಲಾಗದೆ, ಊಟನೂ ಸಿಗದೆ ಪರದಾಡುತ್ತಿದ್ದಾರೆ.

ಸಾವಿರಾರು ಸಂಖ್ಯೆಯ ಕಾರ್ಮಿಕರು ಮಕ್ಕಳನ್ನು, ವಯಸ್ಸಾದವರನ್ನು ಕರೆದುಕೊಂಡು ಕಾಲ್ನಡಿಗೆಯಲ್ಲಿಯೆ ಮನೆಯ ದಾರಿ ಹಿಡಿದು ಹೊರಟಿರುವ ದೃಶ್ಯ ಕರಳುಕಿತ್ತು ಬರುವಂತ್ತಿದೆ. ಕಾರ್ಮಿಕರ ಕರುಣಾಜನಕ ಸ್ಥಿತಿಗೆ ಮರುಗಿದ ನಟ ಸೋನು ಸೂದ್ ನೆರವಿಗೆ ಬಂದಿದ್ದಾರೆ. ಸೋನು ಸೂದ್ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮುಂದೆ ಓದಿ..

350 ಕಾರ್ಮಿಕರನ್ನು ಮನೆ ಸೇರಿಸಿದ ಸೋನು

350 ಕಾರ್ಮಿಕರನ್ನು ಮನೆ ಸೇರಿಸಿದ ಸೋನು

ಕೆಲಸ ಅರಸಿ ಗುಲ್ಬರ್ಗದಿಂದ ಮುಂಬೈಗೆ ವಲಸೆ ಹೋಗಿದ್ದ ಕರ್ನಾಟಕದ ಕಾರ್ಮಿಕರನ್ನು ನಟ ಸೋನು ಸೂದ್ ಸುರಕ್ಷಿತವಾಗಿ ಮನೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ. ಸ್ವತಹ ಸೋನು ಸೂದ್ ಅವರೇ ಮುಂಬೈನ ಥಾಣೆಯಿಂದ ಕಾರ್ಮಿಕರು ಹೊರಡುವ ಸ್ಥಳಕ್ಕೆ ಬಂದು ಕಾರ್ಮಿಕರನ್ನು ಬಸ್ ಹತ್ತಿಸಿ, ಊರಿಗೆ ಕಳುಹಿಸಿ ಕೊಟ್ಟಿದ್ದಾರೆ.

10 ಬಸ್ ಗಳ ವ್ಯವಸ್ಥೆ

10 ಬಸ್ ಗಳ ವ್ಯವಸ್ಥೆ

ಒಟ್ಟು 350 ಕಾರ್ಮಿಕರನ್ನು ಕರ್ನಾಟಕದ ಗುಲ್ಬರ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಕಾರ್ಮಿಕರಿಗಾಗಿ ಒಟ್ಟು 10 ಬಸ್ ಗಳ ವ್ಯವಸ್ಥೆ ಮಾಡಿದ್ದರು ಸೋನು. ಜೊತೆಗೆ ಬಸ್ ನಲ್ಲಿ ಸಾಗುವ ಕಾರ್ಮಿಕರಿಗೆ ಆಹಾರದ ಕಿಟ್ ಅನ್ನು ನೀಡಿದ್ದಾರೆ.

ಎರಡೂ ಸರ್ಕಾರದ ಅನುಮತಿ ಪಡೆದಿರುವ ನಟ

ಎರಡೂ ಸರ್ಕಾರದ ಅನುಮತಿ ಪಡೆದಿರುವ ನಟ

ಬಸ್ ಗಳ ಮೂಲಕ ಕಾರ್ಮಿಕರನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಳುಹಿಸಬೇಕಾದರೆ ಸರ್ಕಾರದ ಅನುಮತಿ ಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಸರ್ಕಾರದ ಅನುಮತಿ ಪಡೆದು ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಇದರ ಸಂಪೂರ್ಣ ಖರ್ಚನ್ನು ಸೋನು ಸೂದ್ ಅವರೆ ಭರಿಸಿದ್ದಾರೆ.

ಪ್ರತಿಯೊಬ್ಬರು ಕುಟುಂಬದ ಜೊತೆ ಇರಬೇಕು

ಪ್ರತಿಯೊಬ್ಬರು ಕುಟುಂಬದ ಜೊತೆ ಇರಬೇಕು

ನಾವೆಲ್ಲರು ಈ ಜಾಗತಿಕ ಆರೋಗ್ಯ ವಿಪತ್ತನ್ನು ಎದುರಿಸುತ್ತಿರುವ ಪ್ರಸ್ತುತ ಸಮಯದಲ್ಲಿ, ಪ್ರತಿಯೊಬ್ಬ ಭಾರತೀಯರು ತಮ್ಮ ಕುಟುಂಬ ಮತ್ತು ಆತ್ಮೀಯರ ಜೊತೆ ಇರಬೇಕೆಂದು ನಾನು ಬಲವಾಗಿ ನಂಬುತ್ತೇನೆ. ವಲಸಿಗರನ್ನು 10 ಬಸ್ ಗಳಲ್ಲಿ ಮನೆಗೆ ತಲುಪಿಸಲು ಎರಡೂ ಸರ್ಕಾರದ ಅನುಮತಿ ಪಡೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.

ಬೇರೆ ರಾಜ್ಯ ಕಾರ್ಮಿಕರನ್ನೂ ಕಳುಹಿಸಿ ಕೊಡುತ್ತೇನೆ

ಬೇರೆ ರಾಜ್ಯ ಕಾರ್ಮಿಕರನ್ನೂ ಕಳುಹಿಸಿ ಕೊಡುತ್ತೇನೆ

"ಪುಟ್ಟ ಮಕ್ಕಳು, ವೃದ್ಧ ಪೋಷಕರು, ಸೇರಿದಂತೆ ಅನೇಕರು ರಸ್ತೆಯಲ್ಲಿ ನಡೆದುಕೊಂಡು ಹೋಗುವ ವಲಸೆಗರನ್ನು ನೋಡಲು ನಿಜಕ್ಕೂ ಕರಳು ಹಿಂಡುತ್ತಿತ್ತು. ಇನ್ನೂ ಅನೇಕ ರಾಜ್ಯದ ಕಾರ್ಮಿಕರು ಸಿಲುಕಿದ್ದಾರೆ. ಎಲ್ಲರನ್ನು ಮನೆಗೆ ಸೇರಿಸುವ ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ.

More from Filmibeat

English summary
Actor Sonu Sood organised buses for migrant workers stuck in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X