ಮಟನ್ ಶಾಪ್‌ಗೆ ತನ್ನ ಹೆಸರಿಟ್ಟ ಅಭಿಮಾನಿಗೆ ಸಸ್ಯಹಾರಿ ಸೋನು ಸೂದ್ ಹೇಳಿದ್ದೇನು?

ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ದೇಶದಾದ್ಯಂತ ಜನರಿಗೆ ಸಹಾಯ ಹಸ್ತ ಚಾಚುತ್ತಿರುವ ಸೋನು ಸೂದ್ ಬ್ಯುಸಿಯ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.

Recommended Video

ಸಸ್ಯಾಹಾರಿಯಾಗಿರೋ ಸೋನು ಸೂದ್ ಮಟನ್ ಶಾಪ್ ಓನರ್ ಗೆ ಹೇಳಿದ್ದೇನು? | Filmibeat Kannada

ಸೋನು ಸೂದ್ ಮಾನವೀಯ ಕೆಲಸಕ್ಕೆ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಸಾಕಷ್ಟು ಶಾಪ್‌ಗಳಿಗೆ ಸೋನು ಸೂದ್ ಹೆಸರಿಟ್ಟು ಪ್ರೀತಿ, ಅಭಿಮಾನ ಮೆರೆಯುತ್ತಿದ್ದಾರೆ. ಇತ್ತೀಚಿಗೆ ಅಭಿಮಾನಿಯೊಬ್ಬ ತನ್ನ ಮಟನ್ ಶಾಪ್‌ಗೆ ಸೋನು ಸೂದ್ ಹೆಸರಿಟ್ಟಿದ್ದಾರೆ.

ತೆಲಂಗಾಣದ ಕರೀಮ್ ನಗರದ ಒಂದು ಮಟನ್ ಶಾಪ್‌ಗೆ ಸೋನು ಸೂದ್ ಹೆಸರಿಡಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಟ ಸೋನು ಸೂದ್ ಅವರ ಗಮನಕ್ಕೂ ಬಂದಿದೆ. ಈ ವಿಡಿಯೋ ನೋಡಿದ ಸೋನು ಸೂದ್, ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

Sonu Sood reacts to mutton shop named after him

'ನಾನು ಸಸ್ಯಹಾರಿ ಆದರೆ ಮಟನ್ ಶಾಪ್‌ಗೆ ನನ್ನ ಹೆಸರು?' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೆಯಲ್ಲ 'ಸಸ್ಯಹಾರಿ ಶಾಪ್ ತೆರೆಯಲು ನಾನು ಅವರಿಗೆ ಸಹಾಯ ಮಾಡಬಹುದೇ' ಎಂದು ಕೇಳಿದ್ದಾರೆ.

ಸೋನು ಸೂದ್ ಟ್ವೀಟ್‌ಗೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. ಸಸ್ಯಹಾರಿಯಾಗಿರುವ ಸೋನು ಸೂದ್ ಗೆ ಪ್ರಾಣಿಗಳನ್ನು ಕಡಿದು ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಾಗಿ ಮಟನ್ ಶಾಪ್‌ಗೆ ಸೋನು ಸೂದ್ ಹೆಸರಿಟ್ಟ ಅಭಿಮಾನಿಗೆ ಸಸ್ಯಹಾರಿ ಶಾಪ್ ಇಡಲು ಸಹಾಯ ಮಾಡುವುದಾಗಿ ಹೇಳಿದ್ದಾರೆ.

ಕಷ್ಟ ಎಂದವರಿಗೆ ತಕ್ಷಣಕ್ಕೆ ಸಹಾಯಕ್ಕೆ ಧಾವಿಸುವ ಸೋನು ಸೂದ್ ಈಗಾಗಲೇ ಲಕ್ಷಾಂತರ ಜನರ ಜೀವನಕ್ಕೆ ಬೆಳಕಾಗಿದ್ದಾರೆ. ಕೊರೊನಾ ಪ್ರಾರಂಭವಾದಾಗಿನಿಂದ ಮಾನವೀಯ ಕೆಲಸ ಮಾಡುತ್ತಿರುವ ಸೋನು ಸೂದ್ ಇಂದಿಗೂ ಮುಂದುವರೆಸಿದ್ದಾರೆ.

More from Filmibeat

English summary
Sonu Sood reacts to mutton shop named after him. He says I am a vegetarian.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X