For Quick Alerts
  ALLOW NOTIFICATIONS  
  For Daily Alerts

  ಹುಟ್ಟೂರಿನ ರಸ್ತೆಗೆ ತಾಯಿಯ ಹೆಸರು: ಭಾವುಕರಾದ ಸೋನು ಸೂದ್

  |

  ಲಾಕ್‌ಡೌನ್‌ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಮಾಡಿದ ಮಾನವೀಯತೆ ಕಾರ್ಯಗಳಿಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದರು. ಅನೇಕ ಸಂಘ, ಸಂಸ್ಥೆಗಳಿಂದ ಪ್ರಶಸ್ತಿ, ಗೌರವ ಪಡೆದಿದ್ದರು. ಇದೀಗ, ತಮ್ಮ ಹುಟ್ಟೂರಿನಲ್ಲಿ ರಸ್ತೆಯೊಂದಕ್ಕೆ ಸೋನು ಸೂದ್ ತಾಯಿಯ ಹೆಸರನ್ನು ಇಡಲಾಗಿದೆ.

  ಈ ವಿಚಾರವನ್ನು ಇನ್ಟ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸೋನು ಸೂದ್ ಭಾವುಕರಾಗಿದ್ದಾರೆ. ಪಂಜಾಬ್‌ನ ಮೊಗ ಎಂಬ ಗ್ರಾಮದಲ್ಲಿ ರಸ್ತೆಗೆ ''ಫ್ರೋ. ಸರೋಜ್ ಸೂದ್ ರಸ್ತೆ'' ಎಂದು ನಾಮಕರಣ ಮಾಡಲಾಗಿದೆ.

  ಟೀಕಿಸಿದ ಟ್ರೋಲ್‌ಗಳಿಗೆ ಸೋನು ಸೂದ್ ಖಡಕ್ ಉತ್ತರ

  ಈ ನಾಮಫಲಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸೋನು ಸೂದ್ ''ಜಗತ್ತಿನಲ್ಲಿ ಅತಿ ಹೆಚ್ಚು ಇಷ್ಟವಾದ ಸ್ಥಳ ಇದು'' ಎಂದು ಬರೆದುಕೊಂಡಿದ್ದಾರೆ.

  ''ನನ್ನ ಜೀವನದುದ್ದಕ್ಕೂ ನಾನು ಕನಸು ಕಂಡ ದೃಶ್ಯ ಇದು. ಇಂದು ನನ್ನ ಹುಟ್ಟೂರಿನ ಮೊಗಾದ ರಸ್ತೆಗೆ ನನ್ನ ತಾಯಿಯ ಹೆಸರನ್ನು ಇಡಲಾಗಿದೆ, 'ಪ್ರೊಫೆಸರ್ ಸರೋಜ್ ಸೂದ್ ರಸ್ತೆ'. ನನ್ನ ತಾಯಿ ಜೀವನದುದ್ದಕ್ಕೂ ಪ್ರಯಾಣಿಸಿದ ರಸ್ತೆ ಇದು. ಮನೆಯಿಂದ ಕಾಲೇಜಿಗೆ ಮತ್ತು ಕಾಲೇಜಿನಿಂದ ಮನೆಗೆ ಹಿಂತಿರುಗಿದ ರಸ್ತೆ. ನನ್ನ ಜೀವನದಲ್ಲಿ ಇದು ಪ್ರಮುಖ ಅಧ್ಯಾಯವಾಗಿರುತ್ತದೆ'' ಎಂದು ಭಾವುಕರಾಗಿದ್ದಾರೆ.

  ಪುಸ್ತಕ ರೂಪ ಪಡೆದ ನಟ ಸೋನು ಸೂದ್ ಜೀವನ ಅನುಭವ

  ''ನನ್ನ ತಾಯಿ ಮತ್ತು ತಂದೆ ಸ್ವರ್ಗದಿಂದ ಇದನ್ನು ನೋಡಿ ಸಂತಸ ಪಡುತ್ತಿದ್ದಾರೆ. ನಮ್ಮ ಸುತ್ತಲೂ ಅವರು ಇದ್ದಾರೆ ಎಂದು ನಾನು ನಂಬಿದ್ದೇನೆ. ಇದನ್ನು ಸಾಧ್ಯವಾಗಿಸಿದ ಶ್ರೀ ಹರ್ಜೋತ್ ಕಮಲ್, ಶ್ರೀ ಸಂದೀಪ್ ಹ್ಯಾನ್ಸ್ ಮತ್ತು ಶ್ರೀಮತಿ ಅನಿತಾ ದರ್ಶಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ'' ಎಂದು ಪೋಸ್ಟ್ ಹಾಕಿದ್ದಾರೆ.

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

  ಸೋನು ಸೂದ್ ಅವರ ಜೀವನದ ಅನುಭವದ ಬಗ್ಗೆ 'ಐ ಆಮ್ ನೋ ಮೆಸ್ಸಿಹ್' ಎಂಬ ಪುಸ್ತಕ ರಚನೆಯಾಗಿದ್ದು, ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.

  English summary
  Bollywood Actor sonu sood share a pic of road in his hometown gets named after his mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X