Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಂಧೋರ್ ಪಾಲಿಕೆಯಿಂದ ಎಸೆಯಲ್ಪಟ್ಟ ವೃದ್ಧರಿಗೆ ಸೋನು ಸೂದ್ ನೆರವು
ಕೆಲವು ದಿನಗಳ ಹಿಂದೆ ವಿಡಿಯೋ ಒಂದು ಸಖತ್ ವೈರಲ್ ಆಗಿತ್ತು. ಕೆಲವು ವಯೋವೃದ್ಧರನ್ನು ಗಾಡಿಯೊಂದರಲ್ಲಿ ತುಂಬಿಕೊಂಡು ಬಂದು ನಗರದ ಹೊರಗೆ ರಸ್ತೆಯಲ್ಲಿ ದಬ್ಬಲಾದ ವಿಡಿಯೋ ಅದು. ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ವೃದ್ಧರನ್ನು ಬೇಕಾಬಿಟ್ಟಿಯಾಗಿ ರಸ್ತೆಯ ಮೇಲೆ ಎಸೆದು ಹೋಗುತ್ತಿರುವ ಆ ವಿಡಿಯೋ ಮಧ್ಯ ಪ್ರದೇಶ ರಾಜ್ಯದ್ದು. ಇಂಧೋರ್ ನ ಮಹಾನಗರ ಪಾಲಿಕೆಯು ನಗರದಲ್ಲಿನ ಅನಾಥ ವಯೋವೃದ್ಧರನ್ನು ಹಿಡಿದು ಗಾಡಿಯಲ್ಲಿ ತುಂಬಿಕೊಂಡು ಬಂದು ನಗರದ ಹೊರವಲಯದ ಇಂದೋರ್-ದಿವಾಸ್ ಹೈವೇನಲ್ಲಿ ಬಿಸಾಡಿದ್ದರು.
ಈ ವಿಡಿಯೋ ನಟ ಸೋನು ಸೂದ್ ಕಣ್ಣಿಗೆ ಬಿದ್ದಿದ್ದು. ಇಂಧೋರ್ ಪಾಲಿಕೆಯಿಂದ ಎಸೆಯಲ್ಪಟ್ಟ ಆ ಎಲ್ಲಾ ವೃದ್ಧರಿಗೂ ವಾಸ್ತವ್ಯ ಕಲ್ಪಿಸಲು ಮುಂದೆ ಬಂದಿದ್ದಾರೆ ಸೋನು ಸೂದ್. ತಮ್ಮ ಈ ಕಾರ್ಯಕ್ಕೆ ಸ್ಥಳೀಯರು ನೆರವಾಗಬೇಕು ಎಂದು ಸಹ ಮನವಿ ಮಾಡಿದ್ದಾರೆ.

ವೃದ್ಧರಿಗೆ ಮನೆ ಕಟ್ಟಿಸಿಕೊಡಲಿರುವ ಸೋನು ಸೂದ್
ಈ ಬಗ್ಗೆ ವಿಡಿಯೋ ಮಾಡಿರುವ ಸೂನು ಸೂದ್, 'ವೃದ್ಧರ ಮೇಲೆ ದೌರ್ಜನ್ಯ ಮಾಡಿರುವ ಸುದ್ದಿ ಕೇಳಿ ತೀವ್ರ ದುಃಖವೆನಿಸಿತು. ನನ್ನ ಅಣ್ಣ-ತಂಗಿಯರಲ್ಲಿ ನಾನು ಮನವಿ ಮಾಡುತ್ತೇನೆ. ನಾವು ಅವರಿಗೆ ಸೂರು ಒದಗಿಸೋಣ. ಅವರಿಗೆ ಅವರ ಹಕ್ಕನ್ನು ಮರಳಿಸಲು ಮುಂದೆ ಬರೋಣ, ಅವರಿಗೆ ಆಹಾರ-ನೀರಿನ ವ್ಯವಸ್ಥೆ ಮಾಡೋಣ' ಎಂದು ಕರೆ ನೀಡಿದ್ದಾರೆ ಸೋನು ಸೂದ್. ಆ ವೃದ್ಧರಿಗಾಗಿ ದೊಡ್ಡ ಮನೆಯೊಂದನ್ನು ಕಟ್ಟಿಸಲು ಸೋನು ಸೂದ್ ತಯಾರಾಗಿದ್ದಾರೆ ಎನ್ನಲಾಗುತ್ತಿದೆ.

ಮಕ್ಕಳಿಗೆ, ಯುವಕರಿಗೆ ಪಾಠವಾಗಬೇಕು: ಸೋನು ಸೂದ್
'ನಾವು ಮಾಡುವ ಕಾರ್ಯ ಮಕ್ಕಳಿಗೆ, ಯುವಕರಿಗೆ ಪಾಠವಾಗಿ ಪರಿಣಮಿಸಬೇಕು. ತಮ್ಮ ವೃದ್ಧ ಪೋಷಕರನ್ನು ಹೊರಗೆ ಹಾಕದೆ ಮನೆಯಲ್ಲಿಯೇ ಇಟ್ಟುಕೊಂಡು ಗೌರವದಿಂದ ನೋಡಿಕೊಳ್ಳುವಂತಾಗಬೇಕು, ನಾವು ಇಂದು ಮಾಡುವ ಕಾರ್ಯ ಮುಂದಿನ ಪೀಳಿಗೆಗೆ ಪಾಠವಾಗಬೇಕು' ಎಂದಿದ್ದಾರೆ ಸೋನು ಸೂದ್.

ಘಟನೆ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಟ್ವೀಟ್
ಇಂಧೋರ್ ನ ಈ ಘಟನೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಗಮನಕ್ಕೆ ಸಹ ಬಂದಿದ್ದು. ಕೃತ್ಯಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಮುಖ್ಯಾಧಿಕಾರಿ ಹಾಗೂ ಕೆಲವು ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ. ವೃದ್ಧರ ಬಳಿ ಗೌರವಪೂರ್ವಕವಾಗಿ ನಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಟ್ವೀಟ್ ಮಾಡಿದ್ದದಾರೆ.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಸಹಾಯ
ನಟ ಸೋನು ಸೂದ್ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ಮಂದಿಗೆ ಸಹಾಯ ಮಾಡಿದ್ದಾರೆ. ಆ ನಂತರವೂ ತಮ್ಮ ಸಹಾಯವನ್ನು ಮುಂದುವರೆಸಿದ್ದಾರೆ. ತಮ್ಮ ಕೊರೊನಾ ಸಮಯದ ಅನುಭವಗಳನ್ನು ಒಟ್ಟು ಮಾಡಿ 'ಐ ಆಮ್ ನಾಟ್ ಮಸೀಹಾ' ಹೆಸರಿನ ಪುಸ್ತಕವನ್ನು ಸಹ ಸೋನು ಸೂದ್ ಬರೆದಿದ್ದಾರೆ.