Just In
Don't Miss!
- Automobiles
ಸ್ಕೋಡಾ ಕುಶಾಕ್ ಕಾರಿನ ಉತ್ಪಾದನಾ ಮಾದರಿಯ ರೋಡ್ ಟೆಸ್ಟಿಂಗ್ ಶುರು
- News
ತಮಿಳುನಾಡು ರಾಜಕಾರಣದಲ್ಲಿ ಆಟ ಶುರು ಮಾಡುತ್ತಾರಾ "ಚಿನ್ನಮ್ಮ"?
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Sports
SMAT: ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಬರೋಡಾವನ್ನು ಸೆಮಿಫೈನಲ್ಗೇರಿಸಿದ ವಿಷ್ಣು ಸೋಲಂಕಿ
- Finance
ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಸರು ಹೇಳದೆ ಕಂಗನಾ ರಣೌತ್ ವರ್ತನೆ ಟೀಕಿಸಿದ ಸೋನು ಸೂದ್
ಕೊರೊನಾ ಲಾಕ್‌ಡೌನ್ ನಂತರ ಸೋನು ಸೂದ್ ಖ್ಯಾತಿ ಬಹು ಎತ್ತರಕ್ಕೆ ಏರಿದೆ. ಮುಂಚೆ ಆಗೊಮ್ಮೆ ಈಗೊಮ್ಮೆ ಪ್ರಕಟವಾಗುತ್ತಿದ್ದ ಅವರ ಸಂದರ್ಶನಗಳು ಈಗ ವಾರಕ್ಕೆ ಎರಡು-ಮೂರು ಬಾರಿ ಪ್ರಕಟವಾಗುತ್ತಿವೆ.
ಬಾಲಿವುಡ್ ನಲ್ಲಿ ಮಾತ್ರವೇ ಅಲ್ಲದೆ ರಾಷ್ಟ್ರ ರಾಜಕಾರಣದ ಬಗ್ಗೆಯೂ ಸೋನು ಸೂದ್ ಅಭಿಪ್ರಾಯ ಸಂಗ್ರಹಿಸಲು ಮಾಧ್ಯಮಗಳು ಸೋನು ಸೂದ್ ಅವರನ್ನು ಎಡತಾಕುತ್ತಿವೆ. ಸೋನು ಸೂದ್ ಸಹ ವಿವಾದಕ್ಕೆ ಆಸ್ಪದ ಕೊಡದೆ ಮಾಧ್ಯಮಗಳೊಂದಿಗೆ ಸಂವಾದಿಸುತ್ತಿದ್ದಾರೆ.
ಇತ್ತೀಚಿಗಿನ ಸಂದರ್ಶನವೊಂದರಲ್ಲಿ 'ಹಿಂದಿ ಸಿನಿಮಾರಂಗದ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡುತ್ತಿದ್ದಾರಲ್ಲ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?' ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ಸೋನು ಸೂದ್, ಬಾಲಿವುಡ್ ಮೇಲೆ ಬೆರಳು ಮಾಡುವವರ ವರ್ತನೆ ಅಸಹನೀಯ ಎಂದಿದ್ದಾರೆ.

ನಮ್ಮವರೇ ಸಿನಿಮಾರಂಗವನ್ನು ನಿಂದಿಸುತ್ತಿದ್ದಾರೆ: ಸೋನು ಸೂದ್
'ಸಿನಿಮಾರಂಗದ ನಿಂದನೆ ನನಗೆ ಬೇಸರ ತರಿಸಿದೆ. ಸಿನಿಮಾರಂಗದಲ್ಲಿರುವವರೇ ಸಿನಿಮಾರಂಗದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ತೀವ್ರ ಬೇಸರ ತಂದಿದೆ. ಈ ಉದ್ಯಮವು ನಮಗೆ ಮನೆ, ಕುಟುಂಬವನ್ನು ಕೊಟ್ಟಿದೆ. ನಮ್ಮ ಕನಸುಗಳು ಈಡೇರುವಂತೆ ಮಾಡಿದೆ. ಆದರೆ ಇದರಲ್ಲೇ ಇರುವ ಜನ ಸಿನಿಮಾರಂಗದ ಮೇಲೆ ಬೆರಳೆತ್ತಿ ತೋರುತ್ತಿದ್ದಾರೆ' ಎಂದಿದ್ದಾರೆ ಸೋನು ಸೂದ್.

ಬಾಲಿವುಡ್ ಸತತವಾಗಿ ಟೀಕಿಸುತ್ತಿರುವ ಕಂಗನಾ
ನಟಿ ಕಂಗನಾ ರಣೌತ್ ಬಾಲಿವುಡ್ ಬಗ್ಗೆ ತಿಂಗಳುಗಳಿಂದ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಬಾಲಿವುಡ್ ಅನ್ನು 'ಮಾಫಿಯಾ' ಎಂಥಲೂ 'ಬುಲ್ಲಿವುಡ್' ಎಂಥಲೂ, ಅನೈತಿಕತೆಯ ಅಡ್ಡ ಎಂತಲೂ ನಿಂದಿಸುತ್ತಿದ್ದಾರೆ ಕಂಗನಾ. ಅಷ್ಟೇ ಅಲ್ಲದೆ, ನಟಿ ತಾಪ್ಸಿ, ಸಲ್ಮಾನ್ ಖಾನ್, ಮಹೇಶ್ ಭಟ್, ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಊರ್ಮಿಳಾ ಮತೋಡ್ಕರ್ ಇನ್ನೂ ಹಲವರ ವಿರುದ್ಧ ಪುಂಖಾನುಪುಂಖವಾಗಿ ವಾಗ್ದಾಳಿ ಮಾಡಿದ್ದಾರೆ.

ಹೆಸರು ಹೇಳದೆ ಟೀಕೆ ಮಾಡಿದ ಸೋನು ಸೂದ್
ಇದೇ ವಿಷಯವಾಗಿ ಸೋನು ಸೂದ್ ಸಹ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಅವರು ಕಂಗನಾ ಹೆಸರನ್ನು ಬಳಸದೆ ಅವರ ವರ್ತನೆ ಅಸಹನೀಯ ಎಂಬರ್ಥದ ಮಾತುಗಳನ್ನು ಹೇಳಿದ್ದಾರೆ. 'ಕೆಲವರು ತಾವು ಬಾಲಿವುಡ್ಡಿನವರೇ ಎಂದು ಹೇಳುತ್ತಾರೆ, ಆದರೆ ಅವರೇ ಬಾಲಿವುಡ್ ಅನ್ನು ನಿಂದಿಸುತ್ತಾರೆ, ಅವರಿಗೆ ಬುದ್ಧಿವಾದ ಹೇಳಲೂ ಸಾಧ್ಯವಿಲ್ಲ, ಅವರು ತಮ್ಮ ಸುತ್ತ ಗೋಡೆ ಕಟ್ಟಿಕೊಂಡುಬಿಟ್ಟಿದ್ದಾರೆ' ಎಂದಿದ್ದಾರೆ ಸೋನು ಸೂದ್.

ಕಂಗನಾ-ಸೋನು ಸೂದ್ ನಡುವೆ ಮನಸ್ತಾಪವಿದೆ
ನಟಿ ಕಂಗನಾ ರಣೌತ್ ಹಾಗೂ ಸೋನು ಸೂದ್ ನಡುವೆ ಹಲವು ವರ್ಷಗಳಿಂದ ಮನಸ್ಥಾಪವಿದೆ. ಕಂಗನಾ ನಟಿಸಿದ್ದ 'ಮಣಿಕರ್ಣಿಕಾ' ಸಿನಿಮಾದಿಂದ ಸೋನು ಸೂದ್ ಅನ್ನು ಹೊರಹಾಕಿದ್ದರು ಕಂಗನಾ ರಣೌತ್. ಸೋನು ಸೂದ್ ಗೆ ನಟನೆ ಬರುವುದಿಲ್ಲ ಎಂದು ಹೇಳಿದ್ದರು ಕಂಗನಾ.