Just In
Don't Miss!
- News
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
- Lifestyle
ಮಂಗಳವಾರದ ರಾಶಿಫಲ: ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ನೋಡಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಭಿಮಾನಿಯ ಪುಟ್ಟ ಹೋಟೆಲ್ ಹುಡುಕಿ ಬಂದ ಸೋನು ಸೋದ್
ನಟ ಸೋನು ಸೂದ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಸೇವೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಬಿಡುವಿಲ್ಲದೆ ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದಾರೆ ನಟ ಸೋನು ಸೂದ್. ಸಾವಿರಾರು ಮಂದಿ ವಲಸೆ ಕಾರ್ಮಿಕರನ್ನು ಅವರುಗಳು ಸ್ವಂತ ಊರುಗಳಿಗೆ ತಲುಪಿಸಿದ್ದಾರೆ. ಉಚಿತ ಆಹಾರ ಹಂಚಿಕೆ, ನಿರ್ಗತಿಕರಿಗೆ ವಸತಿ ವ್ಯವಸ್ಥೆ, ವೈದ್ಯರುಗಳಿಗೆ, ಆರೋಗ್ಯ ಕಾರ್ಯಕರ್ತರಿಗೆ ಸಹಾಯ, ಸರ್ಕಾರಕ್ಕೆ ದೇಣಿಗೆ ಹೀಗೆ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಸೋನು ಸೂದ್.
'ರಿಯಲ್ ಹೀರೋ' ಸೋನು ಸೂದ್ ಗೆ ದೇವಾಲಯ ಕಟ್ಟಿದ ತೆಲಂಗಾಣ ಜನತೆ
ಈಗ ಲಾಕ್‌ಡೌನ್ ಮುಗಿದ ಬಳಿಕವೂ ತಮ್ಮ ಸೇವೆ ಜಾರಿಯಲ್ಲಿಟ್ಟಿದ್ದಾರೆ ಸೋನು ಸೂದ್, ಸಹಾಯ ಕೇಳಿ ಬರುತ್ತಿರುವ ಹಲವರಿಗೆ ಹಲವು ರೀತಿಯ ಸಹಾಯಗಳನ್ನು ಮಾಡಿದ್ದಾರೆ ಸೋನು ಸೂದ್. ಅವರ ಈ ಮಾನವೀಯ ಗುಣದಿಂದ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಸಂಪಾದಿಸಿದ್ದಾರೆ ಸೋನು ಸೂದ್.
ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ; ಸೋನು ಸೂದ್ ಗೆ ಮೆಗಾಸ್ಟಾರ್ ಹೀಗೆ ಹೇಳಿದ್ದೇಕೆ?

ರಸ್ತೆ ಬದಿ ಹೋಟೆಲ್‌ಗೆ ಸೋನು ಸೂದ್ ಭೇಟಿ
ಹೈದರಾಬಾದ್‌ನಲ್ಲಿ ಸೋನು ಸೂದ್ ಅಭಿಮಾನಿಯೊಬ್ಬರು ತಮ್ಮ ರಸ್ತೆ ಬದಿಯ ಪುಟ್ಟ ಹೋಟೆಲ್‌ಗೆ ಸೋನು ಸೂದ್ ಹೆಸರಿಟ್ಟಿದ್ದಾರೆ. 'ಲಕ್ಷ್ಮಿ ಸೋನು ಸೂದ್ ಫಾಸ್ಟ್ ಫುಡ್' ಹೆಸರಿಟ್ಟು ಅಂಗಡಿ ತೆರೆದಿದ್ದಾರೆ. ಈ ವಿಷಯ ತಿಳಿದ ಸೂನು ಸೂದ್ ರಸ್ತೆ ಬದಿ ಅಂಗಡಿಗೆ ಭೇಟಿ ನೀಡಿದ್ದರು.

ಎಗ್ ರೈಸ್ ಸವಿದ ಸೋನು ಸೂದ್
ಅಭಿಮಾನಿ ಯ ಅಂಗಡಿಗೆ ಸರ್ಪ್ರೈಸ್ ಭೇಟಿ ಕೊಟ್ಟ ಸೋನು ಸೂದ್, ಅಭಿಮಾನಿ ಮಾಡಿಕೊಟ್ಟ 'ಎಗ್ ರೈಸ್, ಎಗ್ ಮಂಚೂರಿ ಸವಿದಿದ್ದಾರೆ. ಅಷ್ಟೇ ಅಲ್ಲ ತಾವೂ ಸಹ ಎಗ್ ರೈಸ್ ಮಾಡಿ ಗ್ರಾಹಕರಿಗೆ ನೀಡಿದ್ದಾರೆ. ಹೊರಡುವ ಮುನ್ನಾ ಅಭಿಮಾನಿಯ ತಾಯಿಯ ಕೊರಳಿಗೆ ಹಾರ ಹಾಕಿ ಅವರನ್ನು ಗೌರವಿಸಿದ್ದಾರೆ.

ವಿಡಿಯೋ, ಚಿತ್ರಗಳು ವೈರಲ್
ಸೋನು ಸೂದ್ ಅವರು ಅಭಿಮಾನಿಯ ಅಂಗಡಿಗೆ ಭೇಟಿ ನೀಡಿದ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಸೋನು ಸೂದ್ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ತೆಲಂಗಾಣಲ್ಲಿ ಸೋನು ಸೂದ್ ಗಾಗಿ ಗುಡಿ ನಿರ್ಮಾಣ
ಕೆಲವು ದಿನಗಳ ಹಿಂದಷ್ಟೆ ತೆಲಂಗಾಣದ ಪುಟ್ಟ ಗ್ರಾಮ ದುಬ್ಬತಾಂಡದಲ್ಲಿ ಸೋನು ಸೂದ್ ಗಾಗಿ ಗುಡಿಯನ್ನೇ ಕಟ್ಟಲಾಗಿದೆ. ಸೋನು ಸೂದ್ ಪುತ್ಥಳಿ ನಿರ್ಮಿಸಿ ಅದಕ್ಕೆ ಹಾಲಿನ ಅಭಿಷೇಕ, ಪೂಜೆಗಳನ್ನು ಸಹ ಮಾಡಲಾಗಿದೆ. ಇಂಥಹಾ ದೊಡ್ಡ ಗೌರವಕ್ಕೆ ನಾನು ಅರ್ಹನಲ್ಲ ಎಂದು ವಿನಯದಿಂದ ಪ್ರತಿಕ್ರಿಯಿಸಿದ್ದರು ಸೋನು ಸೂದ್.