Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾಕ್‌ಡೌನ್ ಎಫೆಕ್ಟ್: ಸಿನಿ ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸೋನು ಸೂದ್
ಕೊರೊನಾ ವೈರಸ್ ಸಂಕಷ್ಟದಲ್ಲಿದ್ದ ಅನೇಕರಿಗೆ ಬಾಲಿವುಡ್ ನಟ ಸೋನು ಸೂದ್ ಸಹಾಯ ಮಾಡಿದ್ದಾರೆ. ಮಾರ್ಚ್ ತಿಂಗಳಿಂದ ಇಲ್ಲಿಯವರೆಗೂ ಒಂದಲ್ಲ ಒಂದು ರೀತಿ ಜನರಿಗೆ ನೆರವು ನೀಡುತ್ತೇಲೆ ಇದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಆಸ್ತಿಯನ್ನು ಅಡಮಾನವಿಟ್ಟು ಆ ದುಡ್ಡಿನಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಸ್ವಂತ ಊರುಗಳಿಗೆ ಹೋಗಲಾಗದೆ ಪರದಾಡಿದವರಿಗೆ ಬಸ್ ವ್ಯವಸ್ಥೆ ಮಾಡಿದರು. ಊಟವಿಲ್ಲದೇ ಸಂಕಷ್ಟದಲ್ಲಿದ್ದವರಿಗೆ ಅನ್ನದಾನ ಮಾಡಿದರು. ಆನ್‌ಲೈನ್ ಶಿಕ್ಷಣ ಪಡೆಯಲು ಅನುಕೂಲವಿಲ್ಲದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದರು. ಆರ್ಥಿಕ ಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಲ್ಪಿಸಿದರು. ರೋಗಿಗಳಿಗೆ ಚಿಕಿತ್ಸೆ ಕೊಡಿಸಿದರು. ಹೀಗೆ ಹೇಳುತ್ತಾ ಸಾಗಿದರೆ ಅನೇಕ ಸಮಾಜಮುಖಿ ಕೆಲಸಗಳನ್ನು ಈ ಏಳೆಂಟು ತಿಂಗಳಲ್ಲಿ ವರದಿಯಾಗಿದೆ. ಇಂತಹ ನಟ ಸೋನು ಸೂದ್ ಈಗ ತಮ್ಮ ಸಿನಿ ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದೆ ಓದಿ....
ಕೊರೊನಾ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರ ನೆರವಿಗೆ ಸೋನು ಸೂದ್

ವಿಲನ್ ಪಾತ್ರ ಮಾಡಲ್ಲ ಅಂದ್ರು ಸೋನು ಸೂದ್
ಭಾರತೀಯ ಚಿತ್ರರಂಗದಲ್ಲಿ ಸೋನು ಸೂದ್ ಖಡಕ್ ಖಳನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡದಲ್ಲಿ ಸೋನು ಸೂದ್ ಅಬ್ಬರಿಸಿದ್ದಾರೆ. ದಬಾಂಗ್ ಚಿತ್ರದಲ್ಲಿ ಸಲ್ಲು ಎದುರು, ಅರುಂಧತಿ ಚಿತ್ರದಲ್ಲಿ ಅನುಷ್ಕಾ ಎದುರು, ವಿಷ್ಣುವರ್ಧನ ಚಿತ್ರದಲ್ಲಿ ಸುದೀಪ್ ಎದುರು, ದೂಕುಡು ಚಿತ್ರದಲ್ಲಿ ಮಹೇಶ್ ಬಾಬು ಎದುರು, ಜುಲಾಯ್ ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ಹೀಗೆ ಸ್ಟಾರ್ ನಟರ ಎದುರು ಪ್ರಮುಖ ಖಳನಟನಾಗಿ ಮಿಂಚಿರುವ ಸೋನು ಸೂದ್ ಇನ್ಮುಂದೆ ವಿಲನ್ ಆಗಿ ನಟಿಸದಿರಲು ನಿರ್ಧರಿಸಿದ್ದಾರೆ.
ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳಲ್ಲಿ ಮೊದಲ ಎರಡು ಸ್ಥಾನದಲ್ಲಿ ಇಬ್ಬರು ಭಾರತೀಯರು!

ನನ್ನ ಜೀವನದಲ್ಲಿ ಬದಲಾವಣೆಗಳಾಗಿವೆ
''ಕಳೆದ ಒಂದು ವರ್ಷದಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಬಹುತೇಕ ಎಲ್ಲವೂ ಪಾಸಿಟಿವ್ ಆಗಿದೆ. ಒಬ್ಬ ನಟನಾಗಿ ನನ್ನ ವೃತ್ತಿ ಜೀವನದಲ್ಲಿ ಇನ್ಮುಂದೆ ವಿಲನ್ ಪಾತ್ರಗಳು ಮಾಡದಿರಲು ನಿರ್ಧರಿಸಿದ್ದೇನೆ'' ಎಂದು ಸಂದರ್ಶನವೊಂದರಲ್ಲಿ ಸೋನು ಸೂದ್ ಹೇಳಿಕೊಂಡಿದ್ದಾರೆ.

ಒಳ್ಳೆಯ ಅವಕಾಶ ಬರ್ತಿದೆ
''ನಾನು ಮುಂದಿನ ದಿನಗಳಲ್ಲಿ ಪಾಸಿಟಿವ್ ಪಾತ್ರಗಳನ್ನು ಹೆಚ್ಚು ಮಾಡುತ್ತೇನೆ. ಜೊತೆಗೆ ಕಾದಂಬರಿ ಅಥವಾ ಪುಸ್ತುಕ ಆಧರಿಸಿದ ಪಾತ್ರಗಳಲ್ಲಿ ನಟಿಸಲು ತೀರ್ಮಾನಿಸಿದ್ದೇನೆ. ಪ್ರಸ್ತುತ ಒಳ್ಳೆಯ ಪಾತ್ರಗಳು ನನ್ನನ್ನು ಹುಡುಕಿ ಬರ್ತಿದೆ. ವರ್ಷಕ್ಕೆ ಕನಿಷ್ಠ ಅಂದ್ರು ಎರಡ್ಮೂರು ಚಿತ್ರಗಳಲ್ಲಿ ನಟಿಸಲು ಪ್ರಯತ್ನಿಸುತ್ತೇನೆ'' ಎಂದು ಸೋನು ಸೂದ್ ನಿರ್ಧರಿಸಿದ್ದಾರೆ.

ಭವಿಷ್ಯ ನುಡಿದಿದ್ದ ಅತುಲ್ ಖಾತ್ರಿ
ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಅವರು ಮಾಡಿದ ಸಮಾಜಮುಖಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಹಾಸ್ಯ ನಟ ಅತುಲ್ ಖಾತ್ರಿ ''ಬಹುಶಃ ಮುಂದಿನ ದಿನದಲ್ಲಿ ಸೋನು ಸೂದ್ ಅವರನ್ನು ವಿಲನ್ ಪಾತ್ರದಲ್ಲಿ ನೋಡುವುದು ಕಷ್ಟವಾಗಬಹುದು. ಜನರು ಅದನ್ನು ಸ್ವೀಕರಿಸುವುದಿಲ್ಲ'' ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್ '; ಹೊಸ ಜರ್ನಿ ಆರಂಭಿಸಲು ಇದು ಸಮಯ ಸಹೋದರ'' ಎಂದು ಹೇಳಿದ್ದರು.