For Quick Alerts
  ALLOW NOTIFICATIONS  
  For Daily Alerts

  'ಸುಶಾಂತ್‌ದು ಆತ್ಮಹತ್ಯೆಯೇ ಅಲ್ಲವೇ ಗೊತ್ತಿಲ್ಲ, ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡ್ತಾರೆ'

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ಹೆಸರು ತರುತ್ತಿರುವುದಕ್ಕೆ ನಟ ಸೂರಜ್ ಪಾಂಚೋಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

  Kushee Ravi Alias Dia Soup Photoshoot | Filmibeat Kannada

  ಸುಶಾಂತ್ ಸಾಯುವ ಹಿಂದಿನ ದಿನ ಜೂನ್ 13ರ ರಾತ್ರಿ ಸೂರಜ್ ಪಾಂಚೋಲಿ ಮನೆಯಲ್ಲಿ ಪಾರ್ಟಿ ನಡೆದಿತ್ತು ಎಂದು ಬಿಜೆಪಿ ಮುಖಂಡ ನಾರಾಯಣ ರಾಣೆ ಆರೋಪಿಸಿದ್ದರು. ಇದನ್ನು ಸೂರಜ್ ಅಲ್ಲಗಳೆದಿದ್ದಾರೆ.

  ನಾನೀಗ ಎಷ್ಟು ಸಾಧ್ಯವೋ ಅಷ್ಟು ಸಕಾರಾತ್ಮಕವಾಗಿ ಇರಲು ಪ್ರಯತ್ನಿಸುತ್ತಿದ್ದೇನೆ. ನನ್ನ ಬಗ್ಗೆಯೇ ಸದಾ ಕಾಲ ಯೋಚಿಸುವ ನನ್ನ ಕುಟುಂಬದವರು ನನ್ನಿಂದಾಗಿ ಈಗಾಗಲೇ ಸಾಕಷ್ಟು ಸಂಕಟ ಅನುಭವಿಸಿದ್ದಾರೆ. ಹೀಗಾಗಿ ಇದನ್ನು ಅವರೊಂದಿಗೆ ಚರ್ಚಿಸಲು ಸಾಧ್ಯವಿಲ್ಲ. ನಾನು ಏನಾದರೂ ಅನಾಹುತ ಮಾಡಿಕೊಳ್ಳುತ್ತೇನೆಯೋ ಎಂದು ನನ್ನ ಅಮ್ಮ ಹೆದರಿದ್ದಾರೆ. ಇದರ ಬಗ್ಗೆ ಒಂದೆರಡು ಬಾರಿ ಮಾತನಾಡಿದ್ದಾರೆ ಕೂಡ ಎಂದು ಸೂರಜ್ ಹೇಳಿದ್ದಾರೆ. ಮುಂದೆ ಓದಿ...

  ನನ್ನಿಂದಾಗಿ ಕಷ್ಟ ಅನುಭವಿಸಿದ್ದಾರೆ

  ನನ್ನಿಂದಾಗಿ ಕಷ್ಟ ಅನುಭವಿಸಿದ್ದಾರೆ

  ಸುಶಾಂತ್ ಸಿಂಗ್ ಸಾವಿನ ಬಳಿಕವೂ, 'ಅದೇನೇ ಇರಲಿ. ನಿನ್ನ ಮನಸಿನಲ್ಲಿ ಏನೇ ಇದ್ದರೂ ನಮ್ಮ ಬಳಿ ಮುಕ್ತವಾಗಿ ಹೇಳು. ಏನನ್ನೂ ಮುಚ್ಚಿಡಬೇಡ ಎಂದು ಅಮ್ಮ ಹೇಳಿದ್ದರು. ನನ್ನ ಸಮಸ್ಯೆಗಳ ವಿಚಾರ ಬಂದಾಗ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಏಕೆಂದರೆ ನನ್ನಿಂದಾಗಿ ನನ್ನ ಕುಟುಂಬ ಈಗಾಗಲೇ ತುಂಬಾ ಒತ್ತಡ ಅನುಭವಿಸಿತ್ತು ಎನ್ನುವುದು ಗೊತ್ತಿದೆ ಎಂದು ಸೂರಜ್ ಹೇಳಿದ್ದಾರೆ.

  ಸುಶಾಂತ್ ಆತ್ಮಹತ್ಯೆ: ಆ ಇಬ್ಬರು ನಟರ ವಿಚಾರಣೆ ಆಗಲೇಬೇಕು ಎಂದ ಮಾಜಿ ಸಿಎಂಸುಶಾಂತ್ ಆತ್ಮಹತ್ಯೆ: ಆ ಇಬ್ಬರು ನಟರ ವಿಚಾರಣೆ ಆಗಲೇಬೇಕು ಎಂದ ಮಾಜಿ ಸಿಎಂ

  ಕಷ್ಟಪಟ್ಟು ಉದ್ಯಮಕ್ಕೆ ಬಂದಿದ್ದೇನೆ

  ಕಷ್ಟಪಟ್ಟು ಉದ್ಯಮಕ್ಕೆ ಬಂದಿದ್ದೇನೆ

  ಈ ಉದ್ಯಮದಲ್ಲಿ ಬದುಕಲು ನಾನು ಪ್ರಯತ್ನಿಸುತ್ತಿದ್ದೇನೆ. ಇಷ್ಟುಬೇಗ ಬಿಟ್ಟುಬಿಡಲು ಸಿದ್ಧನಿಲ್ಲ. ಏಕೆಂದರೆ ಇದು ನನ್ನ ಕನಸು. ನನ್ನ ಪ್ಯಾಷನ್. ನಾನು ಹಾಸಿಗೆಯಿಂದೆದ್ದು ನೇರ ಸೆಟ್‌ಗೆ ಹೋಗಿಬಿಡುತ್ತೇನೆ ಎನ್ನುವಷ್ಟು ಉದ್ಯಮ ನನಗೆ ಸಲೀಸಾಗಿದೆ ಎಂದು ಜನರು ಭಾವಿಸಿದ್ದಾರೆ. ಆದರೆ ನಾನು ಬಹಳ ಕಷ್ಟಪಟ್ಟಿದ್ದೇನೆ. ಎರಡು ಸಿನಿಮಾಗಳಲ್ಲಿ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಭಿನಯ ಕೋರ್ಸ್ ಮಾಡಿದ್ದೇನೆ. ನಟನೆಯ ಪದವಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.

  ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾರೆ

  ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾರೆ

  ಈ ಜನರು ವಿನಾಕಾರಣ ನನ್ನನ್ನು ಎಲ್ಲದಕ್ಕೂ ಎಳೆದು ತರುತ್ತಿದ್ದಾರೆ. ಅವರು ನನ್ನ ಬದುಕನ್ನು ನಾಶಪಡಿಸುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಜನರು ಖಂಡಿತಾ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾರೆ ಎಂದಿದ್ದಾರೆ.

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಇಲ್ಲ ಎಂದ ಮುಂಬೈ ಪೊಲೀಸರುಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಇಲ್ಲ ಎಂದ ಮುಂಬೈ ಪೊಲೀಸರು

  ದಿಶಾ, ಸುಶಾಂತ್ ಜತೆ ಸಂಪರ್ಕವಿರಲಿಲ್ಲ

  ದಿಶಾ, ಸುಶಾಂತ್ ಜತೆ ಸಂಪರ್ಕವಿರಲಿಲ್ಲ

  ನನ್ನ ಮನೆಯಲ್ಲಿ ಅಂದು ಯಾವುದೇ ಪಾರ್ಟಿ ನಡೆದಿರಲಿಲ್ಲ. ಸುಶಾಂತ್ ಅಥವಾ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಜತೆಗೆ ನಾನು ಸಂಪರ್ಕವನ್ನೇ ಹೊಂದಿರಲಿಲ್ಲ. ನನಗೆ ಈ ಎರಡೂ ಪ್ರಕರಣಗಳಿಗೆ ಸಂಬಂಧ ಇಲ್ಲ ಎಂದು ಪೊಲೀಸರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಏಕೆ ಅದನ್ನು ಹೇಳುತ್ತಿಲ್ಲ. ಅವರೇಕೆ ಸುಮ್ಮನಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ನಾರಾಯಣ ರಾಣೆ ಹೇಳಿದ್ದಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ. ಸುಶಾಂತ್ ಕುಟುಂಬ ಏನಾದರೂ ಹೇಳಿದೆಯೇ? ಸುಶಾಂತ್ ತಂದೆ ಅಥವಾ ಸಹೋದರಿಯರು ಅಥವಾ ಸಂಬಂಧಿಕರು ಏನಾದರೂ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

  English summary
  Actor Sooraj Pacholi has denied any connection with Disha Salian and Sushant Singh Rajput's case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X