»   » ಸರೋಜ್ ಖಾನ್ ವಿರುದ್ಧ ಶ್ರೀರೆಡ್ಡಿ, ಸೋಫಿ ಚೌಧರಿ ಸಿಡಿಮಿಡಿ.!

ಸರೋಜ್ ಖಾನ್ ವಿರುದ್ಧ ಶ್ರೀರೆಡ್ಡಿ, ಸೋಫಿ ಚೌಧರಿ ಸಿಡಿಮಿಡಿ.!

Posted By:
Subscribe to Filmibeat Kannada

''ಕಾಸ್ಟಿಂಗ್ ಕೌಚ್ ನಿಂದ ಕೆಲಸ ಅಂತೂ ಸಿಗುತ್ತೆ. ಕಮ್ಮಿ ಅಂದ್ರೂ ಹೊಟ್ಟೆಗೆ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ'' ಎಂದು ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಆಡಿದ ಮಾತು ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

ಓರ್ವ ಮಹಿಳೆಯಾಗಿ, ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸದೇ 'ಕಾಸ್ಟಿಂಗ್ ಕೌಚ್' ಪರವಾಗಿ ಸರೋಜ್ ಖಾನ್ ನೀಡಿರುವ ಹೇಳಿಕೆ ಹಲವು ನಟಿಯರನ್ನು ಕೆರಳಿಸಿದೆ.

'ಕಾಸ್ಟಿಂಗ್ ಕೌಚ್' ವಿರುದ್ದ ಸಮರ ಸಾರಿರುವ ಶ್ರೀರೆಡ್ಡಿ, ಸರೋಜ್ ಖಾನ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಬಾಲಿವುಡ್ ನಟಿ ಸೋಫಿ ಚೌಧರಿ ಕೂಡ ಸರೋಜ್ ಖಾನ್ ಕೊಟ್ಟಿರುವ ಬೇಜವಾಬ್ದಾರಿ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುಂದೆ ಓದಿರಿ...

ಸೋಫಿ ಚೌಧರಿ ಕೊಟ್ಟ ಪ್ರತಿಕ್ರಿಯೆ ಏನು.?

''ನೃತ್ಯ ಸಂಯೋಜಕಿ ಸರೋಜ್ ಖಾನ್ ಮೇಲೆ ತುಂಬಾ ಗೌರವ ಇತ್ತು. ಆದ್ರೆ, ಅವರು ಹೀಗಾ ಮಾತಾಡೋದು?'' ಎನ್ನುವ ಮೂಲಕ ಸರೋಜ್ ಖಾನ್ ವಿರುದ್ಧ ಉರಿದು ಬಿದ್ದಿದ್ದಾರೆ ನಟಿ ಸೋಫಿ ಚೌಧರಿ.

ಆಡಿದ ಮಾತಿಗೆ ಕ್ಷಮೆ ಕೇಳಿದ ಸರೋಜ್ ಖಾನ್: ಆದರೂ ತಣ್ಣಗಾಗದ ನೆಟ್ಟಿಗರ ಕೋಪ.!

ಅದೊಂದೇ ದಾರಿ ಅಲ್ಲ.!

''ತಮ್ಮ ಕನಸುಗಳು ನನಸಾಗುತ್ತೆ ಎನ್ನುವ ನಂಬಿಕೆ ಮೇಲೆ ಸಾವಿರಾರು ಹೆಣ್ಮಕ್ಕಳು ಅನುಭವಿಸುವ ಯಾತನೆ ಹೇಳತೀರದು. ಕೆಲಸಕ್ಕಾಗಿ ಇನ್ನೊಬ್ಬರ ಜೊತೆ ಮಲಗಲು ಯಾರೂ ಇಷ್ಟ ಪಡಲ್ಲ. ಆದ್ರೆ, ಅದೊಂದೇ ದಾರಿ ಎನ್ನುವ ಹಾಗೆ ಬಿಂಬಿಸುತ್ತಾರೆ. ಮಂಚ ಏರಲು ಒಪ್ಪಿಕೊಳ್ಳದವರಿಗೆ ಇಲ್ಲಿ ಮುಳ್ಳಿನ ಹಾದಿ. ಇದು ಕೂಡಲೆ ನಿಲ್ಲಬೇಕು'' ಎಂದಿದ್ದಾರೆ ಸೋಫಿ ಚೌಧರಿ.

'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!

ಶ್ರೀರೆಡ್ಡಿ ಏನಂತಾರೆ.?

''ಸರೋಜ್ ಮೇಡಂ, ನಾನು ನಿಮ್ಮ ಮೇಲೆ ಇಟ್ಟಿದ್ದ ಗೌರವವನ್ನು ನೀವು ಕಳೆದುಕೊಂಡಿದ್ದೀರಾ. ಹಿರಿಯರಾಗಿ, ಯುವ ನಟಿಯರಿಗೆ ನೀವು ಒಳ್ಳೆಯ ದಾರಿ ತೋರಿಸಬೇಕು. ಆದ್ರೆ, ನಿಮ್ಮ ಮಾತು ತಪ್ಪು ಸಂದೇಶ ರವಾನೆ ಮಾಡುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ ಶ್ರೀರೆಡ್ಡಿ.

ಸಮರ ಸಾರಿರುವ ಶ್ರೀರೆಡ್ಡಿ

'ಸಿನಿಮಾಗಳಲ್ಲಿ ಅವಕಾಶ ಸಿಗಬೇಕು ಅಂದ್ರೆ ಚಿತ್ರತಂಡದವರ ಲೈಂಗಿಕ ತೃಷೆ ತೀರಿಸಬೇಕು' ಎಂಬ ಪದ್ಧತಿಯ ವಿರುದ್ಧ ಬೀದಿಯಲ್ಲಿ ಬಟ್ಟೆ ಬಿಚ್ಚಿ ಸಮರ ಸಾರಿದ್ದವರು ಯುವ ನಟಿ ಶ್ರೀರೆಡ್ಡಿ.

ಕ್ಷಮೆ ಕೇಳಿದ ಸರೋಜ್ ಖಾನ್

ತಾವು ಕೊಟ್ಟ ಹೇಳಿಕೆ ವಿವಾದಾತ್ಮಕ ತಿರುವು ಪಡೆದುಕೊಂಡ್ಮೇಲೆ, ನೃತ್ಯ ಸಂಯೋಜಕಿ ಸರೋಜ್ ಖಾನ್ ಕ್ಷಮೆ ಕೇಳಿದರು. ಆದ್ರೂ, ಸೋಷಿಯಲ್ ಮೀಡಿಯಾದಲ್ಲಿ ಸರೋಜ್ ಖಾನ್ ಬಗ್ಗೆ ಟ್ರೋಲ್ ಮಾಡುವವರ ಸಂಖ್ಯೆ ಕಮ್ಮಿ ಆಗಿಲ್ಲ.

English summary
Bollywood Actress Sophie Choudry and Sri Reddy slams Saroj Khan for her statement on Casting Couch.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X