»   » 'ಭಜರಂಗಿ ಭಾಯ್ ಜಾನ್' ಸೂಪರ್ ಸ್ಪೆಷಾಲಿಟೀಸ್

'ಭಜರಂಗಿ ಭಾಯ್ ಜಾನ್' ಸೂಪರ್ ಸ್ಪೆಷಾಲಿಟೀಸ್

Posted By:
Subscribe to Filmibeat Kannada

ಬಾಲಿವುಡ್ ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಭಜರಂಗಿ ಭಾಯ್ ಜಾನ್'. ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಭಜರಂಗಿ ಭಾಯ್ ಜಾನ್' ಚಿತ್ರ ನಾಳೆ (ಜುಲೈ 17) ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.

ಪ್ರತಿ ವರ್ಷ ಈದ್ ಹಬ್ಬಕ್ಕೆ ತಮ್ಮ ಚಿತ್ರಗಳ ಮೂಲಕ ಎಲ್ಲರಿಗೂ ಉಡುಗೊರೆ ಕೊಡುತ್ತಲೇ ಬಂದಿರುವ ಸಲ್ಮಾನ್ ಖಾನ್, ಈ ಬಾರಿ 'ಭಜರಂಗಿ ಭಾಯ್ ಜಾನ್' ಮೂಲಕ ಒಂದು ಸೆಂಟಿಮೆಂಟ್ ಕಹಾನಿಯನ್ನ ಹೊತ್ತು ತಂದಿದ್ದಾರೆ.

ಪಾಕಿಸ್ತಾನದಿಂದ ತಪ್ಪಿಸಿಕೊಂಡ ಮಾತು ಬಾರದ ಪುಟಾಣಿ ಮುನ್ನಿಯನ್ನ ಮರಳಿ ಗೂಡಿಗೆ ಸೇರಿಸಲು ಸಲ್ಮಾನ್ ಖಾನ್ ಪಡುವ ಸಾಹಸ 'ಭಜರಂಗಿ ಭಾಯ್ ಜಾನ್' ಚಿತ್ರದ ಹೂರಣ.

ಹಲವು ವಿಶೇಷತೆಗಳ ಆಗರವಾಗಿರುವ 'ಭಜರಂಗಿ ಭಾಯ್ ಜಾನ್' ಚಿತ್ರದ ಹಾಡುಗಳು ಮತ್ತು ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ನಾಳೆ ನೀವು ಸಿನಿಮಾ ನೋಡುವ ಮುನ್ನ, ಇಲ್ಲಿವರೆಗೂ 'ಭಜರಂಗಿ ಭಾಯ್ ಜಾನ್' ಅಡ್ಡದಿಂದ ಹೊರಬಂದಿರುವ ಎಲ್ಲಾ ತುಣುಕುಗಳಲ್ಲಿ ಅಂತಹ ವಿಶೇಷತೆಗಳು ಏನಿವೆ ಅಂತ ಒಮ್ಮೆ ನೋಡಿಬಿಡಿ....

ರಾಜಮೌಳಿ ತಂದೆಯ ಕಥೆ

ಟಾಲಿವುಡ್ ಹಿಟ್ ಸಿನಿಮಾಗಳಾದ 'ಸೈ', 'ಛತ್ರಪತಿ', 'ವಿಕ್ರಮಾರ್ಕುಡು', 'ಯಮದೊಂಗ', 'ಮಗಧೀರ', 'ಬಾಹುಬಲಿ' ಚಿತ್ರಗಳಿಗೆ ಕಥೆ ರಚಿಸಿರುವ ಟಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿಯ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೂ ಕಥೆ ಹೆಣೆದಿದ್ದಾರೆ.

ಲವ್ ಸ್ಟೋರಿಯಲ್ಲ.! ಸೆಂಟಿಮೆಂಟ್ ಹೈಲೈಟ್.!

ಈಗಾಗಲೇ ರಿಲೀಸ್ ಆಗಿರುವ 'ಭಜರಂಗಿ ಭಾಯ್ ಜಾನ್' ಟ್ರೈಲರ್ ನೋಡ್ತಿದ್ರೆ, ಚಿತ್ರದಲ್ಲಿ ಲವ್ ಸ್ಟೋರಿಗಿಂತ ಸಲ್ಮಾನ್ ಖಾನ್ ಮತ್ತು ಪುಟ್ಟ ಬಾಲಕಿ ಮುನ್ನಿ ನಡುವಿನ ಸೆಂಟಿಮೆಂಟ್ ದೃಶ್ಯಗಳೇ ಚಿತ್ರದ ಹೈಲೈಟ್ ಅನ್ಸತ್ತೆ.

ಸಲ್ಮಾನ್ ಗೆ ಕರೀನಾ ಕಪೂರ್ ಜೋಡಿ

'ಬಾಡಿಗಾರ್ಡ್' ಚಿತ್ರದಲ್ಲಿ ಒಂದಾಗಿದ್ದ ಸಲ್ಲು-ಕರೀನಾ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲೂ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇಬ್ಬರ ಕಾಂಬಿನೇಷನ್ ಸಿನಿಮಾದಲ್ಲಿ ಹೇಗೆ ಮೂಡಿಬಂದಿದೆ ಅನ್ನೋದಕ್ಕೆ ಈ ಹಾಡೇ ಸಾಕ್ಷಿ.

'ಭಜರಂಗಿ' ಆದ ಸಲ್ಮಾನ್ ಖಾನ್

ಇಂದಿನವರೆಗೂ ನೀವು ನೋಡಿದ ಸಲ್ಮಾನ್ ಖಾನ್ ಗಿಂತ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಕಾಣುವ ಸಲ್ಲುನೇ ಬೇರೆ. ಪವನ್ ಕುಮಾರ್ ಚತುರ್ವೇಧಿ ಪಾತ್ರಧಾರಿ ಆಗಿರುವ ಸಲ್ಮಾನ್, ಭಜರಂಗಿ ಆಗಿ ವೀರಾಂಜಿನೇಯನ ಸ್ಮರಣೆ ಮಾಡಿದ್ದಾರೆ. ಅದಕ್ಕೆ ಲೇಟೆಸ್ಟ್ ಸೆಲ್ಫಿ ಟಚ್ ಸೇರಿಸಿರುವ ಹಾಡು ಇಲ್ಲಿದೆ. [ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ]

ಸಲ್ಮಾನ್ ಪಾರ್ಟಿ ಕೂಡ ಮಾಡ್ತಾರೆ

ಸೆಂಟಿಮೆಂಟ್, ಲವ್, ಆಕ್ಷನ್ ಎಲ್ಲಾ ಹದವಾಗಿ ಬೆರೆತಿರುವ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಸ್ಪೆಷಲ್ ಪಾರ್ಟಿ ಸಾಂಗ್ ಕೂಡ ಇದೆ. ಅದರಲ್ಲಿ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಡ್ಯಾನ್ಸ್ ಜುಗಲ್ಬಂದಿ ಹೇಗಿದೆ ಅಂತ ನೀವೇ ನೋಡಿ...

ಮಾತು ಬಾರದ 'ಮುನ್ನಿ'

'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಮಾತು ಬಾರದ ಪುಟ್ಟ ಹುಡುಗಿ ಮುನ್ನಿ ಆಗಿ ಅಭಿನಯಿಸಿರುವುದು ಹರ್ಷಾಲಿ ಮಲ್ಹೋತ್ರ. ಟಿವಿ ಸೀರಿಯಲ್ 'ಲೌಟ್ ಆವೋ ತ್ರಿಶಾ', Hyundai Xcent, Shubhmahal Jewellers ಆಡ್ ನಲ್ಲಿ ಕಾಣಿಸಿಕೊಂಡಿದ್ದ ಹರ್ಷಾಲಿ ಮಲ್ಹೋತ್ರ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಮಿಂಚಿರುವ ಚಿತ್ರ ಇದು. [ಸೀಕ್ರೇಟ್ ಆಗಿ ಉಳಿದ ಹರ್ಷಾಲಿ ಮಲ್ಹೊತ್ರಾ]

ಇಂಡಿಯಾ ಟು ಪಾಕಿಸ್ತಾನ್ ಪರದಾಟ

ಭಾರತದಲ್ಲಿ ಮಿಸ್ ಆಗಿರುವ ಮುನ್ನಿ ವಾಪಸ್ ಪಾಕಿಸ್ತಾನ್ ಗೆ ಮರಳಬೇಕು. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ಕೆಲವು ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ರಿಚ್ ಮೇಕಿಂಗ್

ಸಲ್ಮಾನ್ ಖಾನ್ ಸಿನಿಮಾ ಅಂದ್ಮೇಲೆ ಇದು ಬಿಗ್ ಬಜೆಟ್ ಪ್ರಾಜೆಕ್ಟ್. 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೆ ಖುದ್ದು ಸಲ್ಮಾನ್ ಖಾನ್ ಬಂಡವಾಳ ಹಾಕಿದ್ದಾರೆ. ಪಾರ್ಟನರ್ ಶಿಪ್ ನಲ್ಲಿ ಕನ್ನಡಿಗ ರಾಕ್ ಲೈನ್ ವೆಂಕಟೇಶ್ ಕೂಡ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಸಿನಿಮಾ ರಿಚ್ ಆಗಿ ಹೇಗೆ ಮೂಡಿಬಂದಿದೆ ಅನ್ನೋದಕ್ಕೆ ಈ ಮೇಕಿಂಗ್ಗೇ ಸಾಕ್ಷಿ. [ರಾಕ್ ಲೈನ್ ನಿರ್ಮಾಣದಲ್ಲಿ ರೋಹಿತ್ ಶೆಟ್ಟಿ ಹಿಂದಿ ಚಿತ್ರ]

ಕಬೀರ್ ಖಾನ್ ಸಿನಿಮಾ

'ಕಾಬುಲ್ ಎಕ್ಸ್ ಪ್ರೆಸ್', 'ನ್ಯೂ ಯಾರ್ಕ್', 'ಎಕ್ ಥಾ ಟೈಗರ್' ಅಂತಹ ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳನ್ನ ನಿರ್ದೇಶಿಸಿದ್ದ ಕಬೀರ್ ಖಾನ್, 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರೀತಂ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸಿನಿಮಾದ ಎಲ್ಲಾ ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ನಾಳೆ (ಜುಲೈ 17) 'ಭಜರಂಗಿ ಭಾಯ್ ಜಾನ್' ನಿಮ್ಮ ಮುಂದೆ ಬರುತ್ತಿದೆ.

English summary
Bollywood Actor Salman Khan starrer 'Bajrangi Bhaijaan' is releasing tomorrow (July 17th). Here are few specialties of the movie which is directed by Kabir Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada