»   » ಜಾನ್ಹವಿ ಸಿನಿಮಾಗೆ ಬರುವುದು ಶ್ರೀದೇವಿಗೆ ಇಷ್ಟವಿಲ್ಲ

ಜಾನ್ಹವಿ ಸಿನಿಮಾಗೆ ಬರುವುದು ಶ್ರೀದೇವಿಗೆ ಇಷ್ಟವಿಲ್ಲ

Posted By:
Subscribe to Filmibeat Kannada

ಎಂಬತ್ತರಿಂದ ತೊಂಬತ್ತರ ದಶಕದಲ್ಲಿ ಬರೋಬ್ಬರಿ ಹತ್ತು ವರ್ಷಗಳ ಕಾಲ ಬಾಲಿವುಡ್ ರಾಣಿಯಾಗಿ ಮೆರೆದ ಶ್ರೀದೇವಿ, ತಮ್ಮ ಮಗಳು ಜಾನ್ಹವಿ ಚಿತ್ರರಂಗಕ್ಕೆ ಬರುವುದನ್ನು ತಾವು ಇಷ್ಟಪಡುವುದಿಲ್ಲ ಎಂದಿದ್ದಾರೆ. ನನ್ನ ಮಗಳು ಜಾನ್ಹವಿ ಚಿತ್ರದಲ್ಲಿ ನಟಿಸುವುದನ್ನು ನಾನು ಇಷ್ಟಪಡಲಾರೆ ಎಂದಿರುವ ಶ್ರೀದೇವಿಯ ಮನದಿಂಗಿತವೇನು ಎಂಬುದು ರಹಸ್ಯವಾಗಿದೆ.

ತೀರಾ ಇತ್ತೀಚಿಗೆ ಮಗಳೊಂದಿಗೆ ಶ್ರೀದೇವಿ ಫ್ಯಾಷನ್ ಶೋ ಒಂದರಲ್ಲಿ ಹೆಜ್ಜೆಹಾಕಿದ್ದನ್ನು ಕಣ್ಣಾರೆ ಕಂಡವರು ಜಾನ್ಹವಿಯನ್ನು ಶ್ರೀದೇವಿ ಸಿನಿಮಾರಂಗಕ್ಕೆ ಕರೆತರುವುದು ಗ್ಯಾರಂಟಿ ಎನ್ನುತ್ತಿದ್ದಾರೆ. ಅವರಿಗೆಲ್ಲ ಶಾಕ್ ನ್ಯೂಸ್ ಎನ್ನುವಂತೆ ಶ್ರೀದೇವಿ ಈ ಬಾಂಬ್ ಸಿಡಿಸಿದ್ದಾರೆ. ಅವಳು ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಅವಳಿಗಿನ್ನೂ ಕೇವಲ ಹದಿನೈದು ವರ್ಷ" ಎಂದಿದ್ದಾರೆ.

"ನಾನು ಅತಿ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಬಂದು ಶಿಕ್ಷಣದಿಂದ ವಂಚಿತಳಾಗಿದ್ದೇನೆ. ಆದರೆ ನನ್ನ ಮಗಳಿಗೆ ಹಾಗಾಗುವುದು ಬೇಡ. ನಾನೂ ಸ್ಟಡೀಸ್ ನಲ್ಲಿ ತುಂಬಾ ಚೆನ್ನಾಗಿದ್ದೆ, ನನ್ನ ಮಗಳೂ ಅಷ್ಟೇ. ನನಗೆ ಸಿಗದ ಉನ್ನತ ಶಿಕ್ಷಣ ಅವಳಿಗಾದರೂ ಸಿಗಲಿ" ಎಂದು ಹಾರೈಸಿದ್ದಾರೆ. ಅಂದಹಾಗೆ, ಸದ್ಯದಲ್ಲೇ ಬರಲಿರುವ ಶ್ರೀದೇವಿ ಹಾಗೂ ಅಮಿತಾಬ್ ಜೋಡಿಯ ಚಿತ್ರ ಇಂಗ್ಲಿಷ್ ವಿಂಗ್ಲಿಷ್ (English Vinglish)' ತೀವ್ರ ನಿರೀಕ್ಷೆ ಮೂಡಿಸಿದೆ. (ಏಜೆನ್ಸೀಸ್)

English summary
Sridevi, who ruled Bollywood in 80's and early 90's, says that she does not want her daughter Jahnavi to become an actor.
 
Please Wait while comments are loading...