ರಜತ ಪರದೆಗೆ ಅಡಿಯಿಡಲಿರುವ ಶ್ರೀದೇವಿ ಕುವರಿ

By Rajendra

ಈ ಸುದ್ದಿ ಸುಮಾರು ದಿನಗಳಿಂದಲೂ ಹರಿದಾಡುತ್ತಲೇ ಇದೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡ ನಾಯಕಿ ಶ್ರೀದೇವಿ ಅವರ ಕುವರಿ ಬೆಳ್ಳಿಪರದೆಗೆ ಅಡಿಯಿಡಲು ಸಿದ್ಧವಾಗಿದ್ದಾರೆ. ಇತ್ತೀಚೆಗೆ ತಮ್ಮ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಟ್ರೇಲರ್ ಬಿಡುಗಡೆಗೆ ಹೈದರಾಬಾದಿಗೆ ಶ್ರೀದೇವಿ ಆಗಮಿಸಿದ್ದರು.

ಆಗ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆ ಹೀಗಿತ್ತು. ತಮ್ಮ ಮಗಳನ್ನು ಬೆಳ್ಳಿತೆರೆಗೆ ಯಾವಾಗ ಪರಿಚಯಿಸುತ್ತೀರಿ ಎಂದು. ಅದಕ್ಕೆ ಶ್ರೀದೇವಿ, ಬಹಳ ಸುದೀರ್ಘ ಸಮುಯದ ಬಳಿಕ ಅಭಿನಯಿಸಿದ್ದೇನೆ. ಮೊದಲು ನನ್ನ ಚಿತ್ರ ನೋಡಿ. ಆಮೇಲೆ ನೋಡೋಣ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಬಹಳ ದಿನಗಳ ಬಳಿಕ ಈ ಚಿತ್ರದಲ್ಲಿ ಶ್ರೀದೇವಿ ಡಾನ್ಸ್ ಕೂಡ ಮಾಡಿದ್ದಾರೆ. ಈ ರೀತಿ ಕುಣಿಯಲು ನನಗೇನು ತೊಂದರೆಯಾಗಲಿಲ್ಲ ಎಂದಿದ್ದಾರೆ. ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಮನೆ ಮಾತಾದ ಶ್ರೀದೇವಿ, 1996ರಲ್ಲಿ ಹಿಂದಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದ ಬಳಿಕ ಮುಂಬೈನಲ್ಲಿ ನೆಲೆಗೊಂಡರು.

ಪ್ರೀತಿಗೆ ಸಾಕ್ಷಿಯಾಗಿ ಈಗ ಇಬ್ಬರು ಮಕ್ಕಳು ಜಾನ್ವಿ ಹಾಗೂ ಖುಷಿ. ಈಗ ಜಾನ್ವಿಯನ್ನು ಬೆಳ್ಳಿ ಪರದೆಗೆ ತರುವ ಸಿದ್ಧತೆಯಲ್ಲಿದ್ದಾರೆ ಶ್ರೀದೇವಿ. ವಯಸ್ಸು 50ರ ಗಡಿ ತಲುಪಿದ್ದರೂ ಇನ್ನೂ ಶ್ರೀದೇವಿ ಅವರ ಆಕರ್ಷಣೆ ಮಾತ್ರ ಗುಲಗಂಜಿಯಷ್ಟೂ ಕಡಿಮೆಯಾಗಿಲ್ಲ. ಅವರ ಮಗಳೂ ಸಹ ಅಷ್ಟೇ ಅಮ್ಮನ ಪಡಿಯಚ್ಚಿನಂತಿದ್ದಾರೆ.

ತಮ್ಮ ಪುತ್ರಿಯನ್ನು ದಕ್ಷಿಣ ಚಿತ್ರರಂಗ ಚಿತ್ರದ ಮೂಲಕವೇ ಪರಿಚಯಿಸಬೇಕು ಎಂಬುದು ಶ್ರೀದೇವಿ ದಂಪತಿಗಳ ಮಹದಾಸೆ. ಅದ್ಯಾವಾಗ ಇವರ ಆಸೆಗೆ ಮುಹೂರ್ತ ಕೂಡಿಬರುತ್ತದೋ ಗೊತ್ತಿಲ್ಲ. ಆದಷ್ಟು ಬೇಗ ಅವರ ಕನಸು ನೆರವೇರಲಿ ಶೀಘ್ರದಲ್ಲೇ ಜೂನಿಯರ್ ಶ್ರೀದೇವಿ ಆಗಮನವಾಗಲಿ ಎಂದು ಆಶಿಸೋಣ. (ಏಜೆನ್ಸೀಸ್)

More from Filmibeat

English summary
Recently Sridevi, former dream actress of Bollywood answered about her daughter Jhanvi's entry in film field. She says, first watch me in my film English Vinglish coming after a long time. We will talk about my daughter later.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X