For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ 'ಇಂಗ್ಲಿಷ್ ವಿಂಗ್ಲಿಷ್' ಬಾಕ್ಸ್ ಆಫೀಸ್ ವರದಿ

  |

  ಬಾಲಿವುಡ್ ಕನಸಿನ ರಾಣಿ ಶ್ರೀದೇವಿ ನಟನೆಯ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೊದಲ ವಾರದ ಬಾಕ್ಸ್ ಆಫೀಸ್ ವರದಿ ದೊರಕಿದೆ. ಗೌರಿ ಶಿಂಧೆ ನಿರ್ದೇಶನದ ಈ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೊದಲ ವಾರದ ಕಲೆಕ್ಷನ್ ಉತ್ತಮ ಎನ್ನಬಹುದಾದ ರು. 20.88 ಕೋಟಿ ಗಳಿಸಿದೆ ಎಲ್ಲರ ಹುಬ್ಬೇರಿಸಿದೆ. ಕಾರಣ ಗೌರಿ ಶಿಂಧೆ ನಿರ್ದೇಶಿಸಿದ ಮೊದಲ ಬಾಲಿವುಡ್ ಚಿತ್ರವಿದು. ಜೊತೆಗೆ ಶ್ರೀದೇವಿ ನಟನೆಯ ನಾಯಕಿ ಪ್ರಧಾನ ಚಿತ್ರವಿದು.

  ಬರೋಬ್ಬರಿ 15 ವರ್ಷಗಳ ಹಿಂದೆ 'ಜುದಾಯಿ' ಚಿತ್ರದ ನಟನೆಯ ಬಳಿಕ ಬಾಲಿವುಡ್ ಗೆ ಗುಡ್ ಬೈ ಹೇಳಿದ್ದ ಶ್ರೀದೇವಿಯ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾದ ಚಿತ್ರವಿದು. ಆ 80-90 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದ್ದ ಶ್ರೀದೇವಿ, ಒನ್ ಅಂಡ್ ಓನ್ಲಿ ನಟಿಯಾಗಿ ಮಿಂಚಿದ್ದವರು. ಇದೀಗ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೂಲಕ ಮತ್ತೆ ಬಂದ ಅವರನ್ನು ಪ್ರೇಕ್ಷಕರು ಅಭೂತಪೂರ್ವ ಸ್ವಾಗತ ನೀಡಿ ಸ್ವಾಗತಿಸಿದ್ದಾರೆ.

  'ಇಂಗ್ಲಿಷ್ ವಿಂಗ್ಲಿಷ್' ಚಿತ್ರವು 'ಓ ಮೈ ಗಾಡ್' ಚಿತ್ರದ ಗಳಿಕೆಯನ್ನು ಹಿಂದಿಕ್ಕುವಲ್ಲಿ ವಿಫಲವಾದರೂ 'ಹೀರೋಯಿನ್ ಓರಿಯೆಂಟೆಡ್' ಚಿತ್ರದ ಭಾರಿ ಗಳಿಕೆ ಮೂಲಕ ಬಾಲಿವುಡ್ ಜನರಿಗೆ ಬೆರಗು ಮೂಡಿಸಿದೆ. ಯಾವುದೇ ಸದ್ಯದ ಸ್ಟಾರ್ ಇರದ, ಕೇವಲ ಶ್ರೀದೇವಿ ನಟನೆಯನ್ನೇ ಅವಲಂಬಿಸಿದ ಚಿತ್ರವೊಂದು ಈ ಪರಿ ಯಶಸ್ವಿಯಾಗುತ್ತಿರುವುದು ಹೊಸ ದಾಖಲೆ ಎನ್ನಿಸಿದೆ. ಈ ಚಿತ್ರದಲ್ಲಿನ ಶ್ರೀದೇವಿ ನಟನೆ, ಪ್ರೇಕ್ಷಕರು ಹಾಗೂ ವಿಮರ್ಶಕರ ಭಾರೀ ಮೆಚ್ಚುಗೆ ಗಳಿಸಿದೆ.

  'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೊದಲ ಶೋ ಗಳಿಕೆ ತೀರಾ ಕಡಿಮೆಯಿತ್ತು. ಆದರೆ ಪ್ರೇಕ್ಷಕರ ಮೌತ್ ಪಬ್ಲಿಸಿಟಿ ಹಾಗೂ ವಿಮರ್ಶಕರ ಅತ್ಯುತ್ತಮ ಚಿತ್ರವೆಂಬ ಮೆಚ್ಚುಗೆ ಪಡೆದ ಮೇಲೆ ಚಿತ್ರದ ಗಳಿಕೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮೊದಲ ದಿನದಲ್ಲಿ ರು. 2.51 ಕೋಟಿ ಗಳಿಸಿದ ಈ ಚಿತ್ರ, ನಂತರ ಗಳಿಕೆಯಲ್ಲಿ ಏರುತ್ತಾ ಹೋಗಿ ವೀಕೆಂಟ್ ಹೊತ್ತಿಗೆ ರು. 20.88 ಕೋಟಿ ಗಳಿಸಿ ಯಶಸ್ವಿ ಪ್ರಯಾಣ ದಾಖಲಿಸಿದೆ.

  ಈ ಚಿತ್ರದ ನಟನೆ ಮೂಲಕ ಮತ್ತೆ ಪ್ರೇಕ್ಷಕರಲ್ಲಿ ಮಿಂಚು ಹರಿಸಿರುವ ಶ್ರೀದೇವಿ, ಇನ್ನೂ ಹೆಚ್ಚು ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ. ಈ ಚಿತ್ರದ ಬಿಡುಗಡೆ ಬಳಿಕ ಹಾಲಿವುಡ್ ಚಿತ್ರಗಳ ಆಫರ್ ಪಡೆದಿರುವ ಶ್ರೀದೇವಿ ಬಗ್ಗೆ ಎಲ್ಲೆಡೆ ಅಚ್ಚರಿ ತುಂಬಿದ ಪ್ರಶಂಸೆ ವ್ಯಕ್ತವಾಗುತ್ತಿದೆ. ಶ್ರೀದೇವಿಯೇನಾದರೂ ಬಂದ ಹಾಲಿವುಡ್ ಆಫರ್ ಒಪ್ಪಿ ಹಾಲಿವುಡ್ ಕಡೆ ಮುಖ ಮಾಡಿದರೆ 49 ಹರೆಯದ ಶ್ರೀದೇವಿ ಜಗದ್ವಿಖ್ಯಾತೆ ಆಗುವುದರಲ್ಲಿ ಸಂದೇಹವೇ ಇಲ್ಲ. (ಏಜೆನ್ಸೀಸ್)

  English summary
  Sridevi English Vinglish has concluded the first week with wonderful collection at Indian Box Office, but failed to beat OMG Oh My God business. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X