»   » ರಜನಿಕಾಂತ್ ಗಾಗಿ ಒಂದು ವಾರ ಉಪವಾಸ ಮಾಡಿದ್ದ ಶ್ರೀದೇವಿ.!

ರಜನಿಕಾಂತ್ ಗಾಗಿ ಒಂದು ವಾರ ಉಪವಾಸ ಮಾಡಿದ್ದ ಶ್ರೀದೇವಿ.!

Posted By:
Subscribe to Filmibeat Kannada
ಶ್ರೀದೇವಿಯವರು ರಜನಿಕಾಂತ್ ಗಾಗಿ ಒಂದು ವಾರ ಉಪವಾಸ ಮಾಡಿದ್ದರು | Filmibeat Kannada

ಲೇಡಿ ಸೂಪರ್ ಸ್ಟಾರ್ ಆಗಿ, ನಂಬರ್ ಒನ್ ಅಭಿನೇತ್ರಿ ಆಗಿ ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಮೆರೆದ ಶ್ರೀದೇವಿ ಇನ್ನು ನೆನಪು ಮಾತ್ರ.

ತೆರೆಮೇಲೆ ಭಿನ್ನ-ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಶ್ರೀದೇವಿ, ನಿಜ ಜೀವನದಲ್ಲಿ ಸಹೃದಯಿ. ಸ್ನೇಹಿತರು, ಕುಟುಂಬಸ್ಥರ ಪೈಕಿ ಯಾರಿಗೇ ಏನೇ ಆದರೂ ತಕ್ಷಣ ಹಾಜರ್ ಆಗಿ ಸಹಾಯ ಹಸ್ತ ಚಾಚುತ್ತಿದ್ದವರು ಶ್ರೀದೇವಿ. ಆತ್ಮೀಯವಾಗಿದ್ದವರಿಗೆ ಕಾಳಜಿ ತೋರುತ್ತಿದ್ದ ಶ್ರೀದೇವಿ ಅನೇಕರ ಪಾಲಿಗೆ 'ಸಹೋದರಿ' ಆಗಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಶ್ರೀದೇವಿ, ತಲೈವಾ ಆರೋಗ್ಯಕ್ಕಾಗಿ ಒಂದು ವಾರ ಉಪವಾಸ ಮಾಡಿದ್ರು ಅನ್ನೋದು ನಿಮ್ಗೆ ಗೊತ್ತಾ.?

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರಜನಿಕಾಂತ್

2011 ರಲ್ಲಿ ದಕ್ಷಿಣ ಭಾರತದ ಸ್ಟಂಟ್ ಗಾಡ್ ರಜನಿಕಾಂತ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ರಜನಿಕಾಂತ್ ಅವರನ್ನ ಸಿಂಗಾಪುರಕ್ಕೆ ಶಿಫ್ಟ್ ಮಾಡಲಾಗಿತ್ತು. ಅಂದು ರಜನಿಕಾಂತ್ ಅವರ ಅನಾರೋಗ್ಯದ ಸುದ್ದಿ ಕೇಳಿ ಶ್ರೀದೇವಿ ಗಾಬರಿಗೊಂಡಿದ್ದರು.

ಸಾಯಿ ಬಾಬಾಗೆ ಹರಕೆ ಹೊತ್ತ ಶ್ರೀದೇವಿ

ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಶಿರಡಿ ಸಾಯಿ ಬಾಬಾರನ್ನ ಭಕ್ತಿಯಿಂದ ಪ್ರಾರ್ಥಿಸಿ ಶ್ರೀದೇವಿ ಹರಕೆ ಮಾಡಿಕೊಂಡರು.

ಶಿರಡಿಗೆ ಪ್ರಯಾಣ ಕೈಗೊಂಡ ಶ್ರೀದೇವಿ

ರಜನಿಕಾಂತ್ ಆರೋಗ್ಯ ಸುಧಾರಿಸಬೇಕು ಎಂಬ ಕಾರಣಕ್ಕೆ, ಶಿರಡಿ ಸಾಯಿ ಬಾಬಾ ಮಂದಿರಕ್ಕೂ ತೆರಳಿ, ಪೂಜೆ ಸಲ್ಲಿಸಿದ್ದರಂತೆ ನಟಿ ಶ್ರೀದೇವಿ.

ಒಂದು ವಾರ ಉಪವಾಸ

ರಜನಿಕಾಂತ್ ಆರೋಗ್ಯದಲ್ಲಿ ಹೆಚ್ಚು ಕಮ್ಮಿ ಆಗಬಾರದು ಎಂದು ಒಂದು ವಾರ ಸಾಯಿ ಬಾಬಾಗಾಗಿ ಉಪವಾಸ ಮಾಡಿದ್ದರಂತೆ ಶ್ರೀದೇವಿ.

ಇಂದು ಶ್ರೀದೇವಿ ಇಲ್ಲ

ಶ್ರೀದೇವಿ ಜೊತೆಗೆ ರಜನಿಕಾಂತ್ ಕುಟುಂಬಸ್ಥರು, ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಯಿಂದ ರಜನಿಕಾಂತ್ ಗುಣಮುಖರಾದರು. ಇಂದು ರಜನಿಕಾಂತ್ ಆರೋಗ್ಯವಾಗಿದ್ದಾರೆ. ಆದ್ರೆ, ನಟಿ ಶ್ರೀದೇವಿ ಮಾತ್ರ ಹಠಾತ್ತಾಗಿ ನಿಧನರಾಗಿದ್ದು ದುರಾದೃಷ್ಟಕರ ಸಂಗತಿ.

ಶಾಕ್ ಆದ ರಜನಿಕಾಂತ್

ಶ್ರೀದೇವಿ ನಿಧನದ ಸುದ್ದಿ ಕೇಳಿ, ''ಶ್ರೀದೇವಿ ವಿಧಿವಶರಾಗಿದ್ದು ಕೇಳಿ ಶಾಕ್ ಆಗಿದ್ದೇನೆ. ತುಂಬಾ ಡಿಸ್ಟರ್ಬ್ ಆಗಿದೆ. ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಕಳೆದುಕೊಂಡಿದ್ದೇನೆ. ಚಿತ್ರರಂಗ ಉತ್ಕೃಷ್ಟ ಕಲಾವಿದೆಯನ್ನು ಕಳೆದುಕೊಂಡಿದೆ. ನನ್ನ ಹೃದಯ ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರಿಗಾಗಿ ಮಿಡಿಯುತ್ತಿದೆ. ಅವರ ದುಃಖದಲ್ಲಿ ನಾನೂ ಭಾಗಿ. ನಿಮ್ಮ ಮಿಸ್ ಮಾಡಿಕೊಳ್ಳುತ್ತೇನೆ'' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದರು.

ಶ್ರೀದೇವಿ ನಿಧನದ ವಾರ್ತೆ ಕೇಳಿ ಶಾಕ್ ಆದ ರಜನಿಕಾಂತ್

ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ

English summary
Did you know.? Bollywood Actress Sridevi fasted for a week when Rajinikanth fell ill in 2011.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada