»   » ವೈರಲ್ ವಿಡಿಯೋ: ಕೊನೆಯ ಜಾಹೀರಾತಿನಲ್ಲಿ ಮಿರ ಮಿರ ಮಿಂಚಿದ್ದ 'ಚಾಂದಿನಿ'

ವೈರಲ್ ವಿಡಿಯೋ: ಕೊನೆಯ ಜಾಹೀರಾತಿನಲ್ಲಿ ಮಿರ ಮಿರ ಮಿಂಚಿದ್ದ 'ಚಾಂದಿನಿ'

Posted By:
Subscribe to Filmibeat Kannada
ಶ್ರೀದೇವಿಯವರು ಕೊನೆಯ ಜಾಹಿರಾತಿನಲ್ಲಿ ಕೂಡ ಮಿರ ಮಿರ ಮಿಂಚಿದ್ರು | FIlmibeat Kannada

ನಟಿ ಶ್ರೀದೇವಿಯ ಅಂತಿಮಯಾತ್ರೆಯನ್ನ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ನಿರೀಕ್ಷೆ ಮಾಡದ ರೀತಿಯಲ್ಲಿ ಶ್ರೀದೇವಿ ತನ್ನ ಸಾವನ್ನ ಬರಮಾಡಿಕೊಂಡರು. ಇದು ನಿಜಕ್ಕೂ ಆಶ್ಚರ್ಯ ಹಾಗೂ ಅನುಮಾನ ಉಂಟು ಮಾಡಿತ್ತು. ಅದೇನೇ ಇರಲಿ, ಈಗ ಎಲ್ಲ ಮುಗಿದು ಹೋಗಿದೆ. ಬಾರದಲೋಕಕ್ಕೆ ಶ್ರೀದೇವಿ ಮರಳಿದ್ದಾರೆ.

ಇನ್ನೇನಿದ್ರೂ ಶ್ರೀದೇವಿಯ ನೆನಪು ಮಾತ್ರ. ಸಿನಿಮಾಗಳಲ್ಲಿ ಅವರನ್ನ ನೋಡಿ ಖುಷಿ ಪಡಬೇಕಿದೆ. ಈ ಮಧ್ಯೆ ಶ್ರೀದೇವಿ ಕಾಣಿಸಿಕೊಂಡಿದ್ದ ಕೊನೆಯ ಜಾಹೀರಾತು ವೈರಲ್ ಆಗಿದೆ. ಶ್ರೀದೇವಿ ಸಾಯುವುದಕ್ಕೂ ಮುನ್ನ ಕಮರ್ಷಿಯಲ್ ಜಾಹೀರಾತು ಒಂದರಲ್ಲಿ ಅಭಿನಯಿಸಿದ್ದರು. ಅದು ಇನ್ನು ಪ್ರಸಾರವಾಗಿರಲಿಲ್ಲ.

'ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ'

ಇದೀಗ, ಆ ಜಾಹೀರಾತು ವೈರಲ್ ಆಗಿದೆ. 54ರ ಹರೆಯದಲ್ಲೂ ಶ್ರೀದೇವಿ ಉತ್ಸಾಹ ಹೇಗಿತ್ತು ಎಂಬುದಕ್ಕೆ ಈ ಜಾಹೀರಾತು ಉದಾಹರಣೆಯಾಗಿದೆ. (ಸ್ಟೋರಿಯ ಕೊನೆಯಲ್ಲಿ ಜಾಹೀರಾತು ನೀಡಲಾಗಿದೆ. ಒಮ್ಮೆ ನೋಡಿ.....)

ಶ್ರೀದೇವಿಯ ಕೊನೆ ಜಾಹೀರಾತು

ಶ್ರೀದೇವಿಯ ಕೊನೆಯ ಕಮರ್ಷಿಯಲ್ ಜಾಹೀರಾತು ಎಂದು ಹೇಳಲಾಗುತ್ತಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯಕ್ಕೆ ಟಿವಿಯಲ್ಲಿ ಈ ಜಾಹೀರಾತು ಇನ್ನು ಪ್ರಸಾರವಾಗಿಲ್ಲ.

'ಸೂಪರ್ ಕೂಲ್' ಮಮ್ಮಿ

ಶ್ರೀದೇವಿ ನಿಜಜೀವನದಲ್ಲೂ ಕೂಲ್ ಅಮ್ಮನಾಗಿದ್ದರು. ಅದೇ ರೀತಿ ಸೂಪರ್ ಕೂಲ್ ಜಾಹೀರಾತಿನಲ್ಲಿ ಕೂಲ್ ಮಮ್ಮಿಯಾಗಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸ್, ಸೈಕ್ಲಿಂಗ್, ಆಕ್ಟಿಂಗ್, ಸಿಂಗಿಂಗ್, ಸ್ಟಂಟ್ ಕೂಡ ಮಾಡಿ ಗಮನ ಸೆಳೆದಿದ್ದಾರೆ.

ಇತರೆ ಜಾಹೀರಾತುಗಳು

'ಸೂಪರ್ ಕೂಲ್' ಜಾಹೀರಾತು ಹೊರತು ಪಡಿಸಿ, ಶ್ರೀದೇವಿ 'ಲಕ್ಸ್', 'ವನೀಶ್', 'ತನಿಷ್ಕ', 'ದಾಬರ್ ಆಮ್ಲ' ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಟಿವಿಯಲ್ಲಿ ಪ್ರಸಾರವಾಗಬೇಕಿದೆ

'ಸೂಪರ್ ಕೂಲ್' ಜಾಹೀರಾತು ಇನ್ನು ಟಿವಿಯಲ್ಲಿ ಇನ್ನು ಪ್ರಸಾರವಾಗಿಲ್ಲ. ಫೆಬ್ರವರಿ 26 ರಿಂದ ಪ್ರಸಾರವಾಗಲಿದೆ ಎನ್ನಲಾಗಿತ್ತು. ಇದೀಗ, ಶ್ರೀದೇವಿ ಅಕಾಲಿಕ ಮರಣ ಹೊಂದಿರುವ ಹಿನ್ನೆಲೆ ಈ ಜಾಹೀರಾತನ್ನ ಬೇಗ ಪ್ರಸಾರ ಮಾಡಲು ನಿರ್ಧರಿಸಿದ್ದಾರೆ.

ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

English summary
This unseen ‘Super Cool’ last Commercial of Sridevi Is Going Viral On Internet. According to report, the advertisement was to be aired on February 26, this year (2018).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada