»   » ಶ್ರೀದೇವಿಯ ದೀರ್ಘಕಾಲದ ಕನಸು ಕೊನೆಗೂ ನನಸಾಯಿತು! ಏನದು?

ಶ್ರೀದೇವಿಯ ದೀರ್ಘಕಾಲದ ಕನಸು ಕೊನೆಗೂ ನನಸಾಯಿತು! ಏನದು?

Posted By:
Subscribe to Filmibeat Kannada

ಬಾಲಿವುಡ್ ನಟಿ ಶ್ರೀದೇವಿ ಅಭಿನಯದ ಚಿತ್ರ 'ಮಾಮ್' ಜುಲೈ 7 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಮಗಳ ಮೇಲಿನ ಅತಿಯಾದ ಕಾಳಜಿ ಕುರಿತ ಈ ಚಿತ್ರದಲ್ಲಿ ಶ್ರೀದೇವಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಶ್ರೀದೇವಿ ರವರ ಬಹು ದೀರ್ಘಕಾಲದ ಕನಸೊಂದು ನನಸಾಗಿದೆಯಂತೆ.

ಹೌದು, 80-90 ರ ದಶಕದಲ್ಲಿ ಲೀಡಿಂಗ್ ನಟಿಯಾಗಿ ಬಾಲಿವುಡ್ ಚಿತ್ರರಂಗ ಆಳಿದ ಶ್ರೀದೇವಿ ಗೆ ಎರಡು 'ಆಸ್ಕರ್' ಪ್ರಶಸ್ತಿಗಳನ್ನು ಪಡೆದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಜೊತೆ ವರ್ಕ್ ಮಾಡುವುದು ದೀರ್ಘ ಕಾಲದ ಕನಸಾಗಿತ್ತಂತೆ. ಆ ಕನಸು ಈಗ 'ಮಾಮ್' ಚಿತ್ರದ ಮೂಲಕ ನನಸಾಗಿದೆಯಂತೆ.

Sridevi realise her dream of working with AR Rahman through her 'MOM' film

ತಮಿಳು ಡಬ್ಬಿಂಗ್ 'ಮಾಮ್' ಚಿತ್ರದ ಪ್ರಮೋಷನ್ ಗೆ ನಿನ್ನೆ ಚೆನ್ನೈಗೆ ಬಂದಿದ್ದ ವೇಳೆ ಸಂಗೀತ ನಿರ್ದೇಶಕ ರೆಹಮಾನ್ ಜೊತೆ ವರ್ಕ್ ಮಾಡಿದ ಸಂತೋಷವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮೇಲಿನಂತೆ ಹಂಚಿಕೊಂಡರು. ಇನ್ನು ಇದೇ ವೇಳೆ 'ಮಾಮ್' ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಎ.ಆರ್.ರೆಹಮಾನ್ ರವರು ಚಿತ್ರದ ಕಥೆ ತುಂಬಾ ಇಷ್ಟವಾಯಿತು. ಇದೊಂದು ಯುನಿವರ್ಸಲ್ ಸಬ್ಜೆಕ್ಟ್, ಕೌಟುಂಬಿಕ ಸಂಬಂಧಗಳ ಭಾವನಾತ್ಮಕ ಚಿತ್ರ. ನಾನು ಸಹ ತುಂಬಾ ಇಷ್ಟದಿಂದ ವರ್ಕ್ ಮಾಡಿದ್ದೇನೆ ಎಂದು ಹೇಳಿದರು.

ಶ್ರೀದೇವಿ ರವರ ಲುಕ್ ನಿಂದಲೇ 'ಮಾಮ್' ಚಿತ್ರ ದೇಶದಾದ್ಯಂತ ಸಖತ್ ಸೌಂಡ್ ಮಾಡುತ್ತಿದೆ. ಸಾಲದು ಎಂಬಂತೆ ಚಿತ್ರತಂಡ ಈಗ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಿದೆ. ಚಿತ್ರಕ್ಕೆ ರವಿ ಉಡ್ಯಾವಾರ್ ಆಕ್ಷನ್ ಕಟ್ ಹೇಳಿದ್ದು, ಬೋನೆ ಕಪೂರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದ ಎರಡನೇ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Bollywood Actress Sridevi realise her dream of working with AR Rahman through her 'MOM' film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada