»   » ಪತಿ ಬೋನಿ ಕಪೂರ್ ಜೊತೆಗೆ 3 ತಿಂಗಳ ಕಾಲ ಮಾತು ಬಿಟ್ಟಿದ್ದ ಶ್ರೀದೇವಿ.! ಯಾಕೆ.?

ಪತಿ ಬೋನಿ ಕಪೂರ್ ಜೊತೆಗೆ 3 ತಿಂಗಳ ಕಾಲ ಮಾತು ಬಿಟ್ಟಿದ್ದ ಶ್ರೀದೇವಿ.! ಯಾಕೆ.?

Posted By:
Subscribe to Filmibeat Kannada

ಶೀರ್ಷಿಕೆ ಓದಿದ ಕೂಡಲೆ ನಿಮಗೆ ನೀವೇ ಏನೇನೋ ಊಹೆ ಮಾಡಿಕೊಳ್ಳುವ ಮೊದಲು ಪೂರ್ತಿ ಮ್ಯಾಟರ್ ಓದಿರಿ...

ನಾವು ಹೇಳಲು ಹೊರಟಿರುವುದು ಜಸ್ಟ್ 'ರೀಲ್' ಸುದ್ದಿ ಅಷ್ಟೇ ಹೊರತು ಶ್ರೀದೇವಿ ಅವರ ವೈಯುಕ್ತಿಕ ವಿಚಾರ ಅಲ್ಲ. ಅಷ್ಟಕ್ಕೂ, ಶೂಟಿಂಗ್ ಸ್ಪಾಟ್ ಗೆ ಶ್ರೀದೇವಿ ಹಾಜರ್ ಆದರು ಅಂದ್ರೆ, ವೈಯುಕ್ತಿಕ ವಿಷಯಗಳಿಗೆ ಆಸ್ಪದ ನೀಡುವುದಿಲ್ಲ. ಅದು ಪತಿ ಬೋನಿ ಕಪೂರ್ ಆದರೂ ಅಷ್ಟೆ.! ಅಷ್ಟಕ್ಕೂ, ಏನೀ 'ಮಾತು' ಮರ್ಮ ಅಂದ್ರಾ..? ಸಂಪೂರ್ಣ ವಿವರ ಇಲ್ಲಿದೆ. ಓದಿ....

ಪತಿ ಜೊತೆಗೆ ಮಾತು ಬಿಟ್ಟಿದ್ದು ನಿಜ.!

ಪತಿ ಬೋನಿ ಕಪೂರ್ ಜೊತೆ ಬರೋಬ್ಬರಿ ಮೂರು ತಿಂಗಳ ಕಾಲ ನಟಿ ಶ್ರೀದೇವಿ ಮಾತು ಬಿಟ್ಟಿದ್ದು ನಿಜ. ಅದು ಯಾಕೆ ಅಂದ್ರೆ....

'ಮಾಮ್' ಚಿತ್ರೀಕರಣ

ಎಲ್ಲರಿಗೂ ಗೊತ್ತಿರುವ ಹಾಗೆ, 'ಮಾಮ್' ಚಿತ್ರದಲ್ಲಿ ನಟಿ ಶ್ರೀದೇವಿ ಅಭಿನಯಿಸಿದ್ದಾರೆ. ಇದೇ ಚಿತ್ರಕ್ಕೆ ಬಂಡವಾಳ ಹಾಕಿರುವವರು ಶ್ರೀದೇವಿ ಪತಿ ಬೋನಿ ಕಪೂರ್. 'ಮಾಮ್' ಚಿತ್ರೀಕರಣದ ವೇಳೆ 'ವೃತ್ತಿಪರತೆ' ಕಾಪಾಡಿಕೊಂಡಿದ್ದ ನಟಿ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ಜೊತೆ ಮಾತನಾಡುತ್ತಿರಲಿಲ್ಲವಂತೆ.

ಎಷ್ಟು ಬೇಕೋ ಅಷ್ಟೇ.!

ಒಂದು ಸಿನಿಮಾದ ಸೆಟ್ ನಲ್ಲಿ ಹೀರೋಯಿನ್ ಹಾಗೂ ನಿರ್ಮಾಪಕರ ಮಧ್ಯೆ ಎಷ್ಟು ಮಾತುಕತೆ ನಡೆಯುತ್ತೋ... ಅಷ್ಟೇ ಮಾತುಕತೆ ಬೋನಿ ಕಪೂರ್ ಹಾಗೂ ಶ್ರೀದೇವಿ ನಡುವೆ ಇತ್ತಂತೆ. ಅಷ್ಟು ಬಿಟ್ಟರೆ ಪತಿ-ಪತ್ನಿ ಗಪ್-ಚುಪ್.

ಮನೆಯಲ್ಲೂ ಅಷ್ಟೇ.!

ಬರೀ 'ಮಾಮ್' ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಮಾತ್ರ ಅಲ್ಲ. ಮನೆಗೆ ಹೋದ ಮೇಲೂ ಬೋನಿ ಕಪೂರ್ ಜೊತೆ ಶ್ರೀದೇವಿ ಮಾತನಾಡುತ್ತಿರಲಿಲ್ಲವಂತೆ. 'ಮಾಮ್' ಪಾತ್ರದ ತಯಾರಿಯಲ್ಲಿಯೇ ಹೆಚ್ಚಿನ ಸಮಯ ಕಳೆದರಂತೆ ನಟಿ ಶ್ರೀದೇವಿ.

ಬರೀ ಎರಡೇ ಪದ.!

ಮೂರು ತಿಂಗಳ ಕಾಲ ಪತಿ ಬೋನಿ ಕಪೂರ್ ಜೊತೆ ಪತ್ನಿಯಾಗಿ ಮಾತನಾಡದ ಶ್ರೀದೇವಿ, ಕೇವಲ 'ಗುಡ್ ಮಾರ್ನಿಂಗ್' ಹಾಗೂ 'ಗುಡ್ ನೈಟ್' ಎಂದು ವಿಶ್ ಮಾಡುತ್ತಿದ್ದರಂತೆ. ಹಾಗಂತ ಸ್ವತಃ ನಟಿ ಶ್ರೀದೇವಿ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೊಂಡಿದ್ದಾರೆ.

ಸಲುಗೆ ಇರಬಾರದು.!

ಶೂಟಿಂಗ್ ಸೆಟ್ ನಲ್ಲಿ ಸಲುಗೆ ಇರಬಾರದು... ಶಿಸ್ತು ಬದ್ಧವಾಗಿ ನಡೆದುಕೊಳ್ಳಬೇಕು ಎಂಬ ಕಾರಣಕ್ಕೆ ನಟಿ ಶ್ರೀದೇವಿ ಹೀಗೆ ಮಾತು ಬಿಟ್ಟಿದ್ದರಂತೆ. ಪತಿಯೇ ನಿರ್ಮಾಪಕರಾಗಿದ್ದರೂ, ಒಂದು ದಿನವೋ ಅವರು ಚಿತ್ರೀಕರಣದ ಜಾಗಕ್ಕೆ ಲೇಟ್ ಆಗಿ ಹೋಗಿಲ್ಲವಂತೆ. ತಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂಬ ಕಾಳಜಿ ಶ್ರೀದೇವಿಗೆ.!

English summary
Recently at the trailer launch of her upcoming film Mom, Sridevi revealed that she ignored her husband Boney Kapoor for almost three months.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada