»   » ಶ್ರೀದೇವಿ ಪುತ್ರಿಯ ಚೊಚ್ಚಲ ಚಿತ್ರದಲ್ಲೇ ದೊಡ್ಡ ಸರ್ಪ್ರೈಸ್.!

ಶ್ರೀದೇವಿ ಪುತ್ರಿಯ ಚೊಚ್ಚಲ ಚಿತ್ರದಲ್ಲೇ ದೊಡ್ಡ ಸರ್ಪ್ರೈಸ್.!

Posted By:
Subscribe to Filmibeat Kannada

ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯಿಸುತ್ತಿರುವ ಮೊದಲ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಜಾಹ್ನವಿ ಕಪೂರ್ ಗೆ ಈ ಚಿತ್ರದಲ್ಲಿ ಶಾಹೀದ್ ಕಪೂರ್ ಸಹೋದರ ಇಶಾನ್ ಖತ್ತಾರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಇದೀಗ, 'ದಡಕ್' ಚಿತ್ರದ ಬಗ್ಗೆ ಮತ್ತೊಂದು ತಾಜಾ ಸುದ್ದಿ ಹರಿದಾಡುತ್ತಿದೆ. ಮಗಳ ಚಿತ್ರದಲ್ಲಿ ಶ್ರೀದೇವಿ ಕೂಡ ಕಾಣಿಸಿಕೊಳ್ಳಲಿದ್ದು, ವಿಶೇಷ ಪಾತ್ರವೊಂದನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಶ್ರೀದೇವಿ ಪುತ್ರಿಯ ಚೊಚ್ಚಲ ಚಿತ್ರದ ಪೋಸ್ಟರ್.! ಇದು ರೀಮೇಕ್ ಸಿನಿಮಾ.!

Sridevi to play Janhvi’s mother in her debut film

ಈ ಚಿತ್ರವನ್ನ ಶಶಾಂಕ್ ನಿರ್ದೇಶನ ಮಾಡುತ್ತಿದ್ದು, ಜುಲೈ 18ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ದಿನಾಂಕ ಕೂಡ ಘೋಷಣೆ ಮಾಡಲಾಗಿದೆ.

Sridevi to play Janhvi’s mother in her debut film

ಉಳಿದಂತೆ 'ದಡಕ್' ಸಿನಿಮಾ ಮರಾಠಿಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ಚಿತ್ರದ ರೀಮೆಕ್. ಈ ಚಿತ್ರದಲ್ಲಿ ರಿಂಕು ರಾಜಗುರು ಮತ್ತು ಆಕಾಶ್ ತುಸಾರ್ ಅಭಿನಯಿಸಿದ್ದರು. ಇದೇ ಚಿತ್ರ ಕನ್ನಡದಲ್ಲಿ 'ಮನಸು ಮಲ್ಲಿಗೆ' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ರಿಲೀಸ್ ಆಗಿತ್ತು.

English summary
There is a strong buzz around Karan Johar’s production house that Sridevi is likely to make a cameo appearance in her darling daughter Janhvi’s debut film Dhadak. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾದಲ್ಲಿ ಶ್ರೀದೇವಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada