Just In
Don't Miss!
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ

ನಟಿ ಶ್ರೀದೇವಿ ಬಾರದ ಲೋಕಕ್ಕೆ ತೆರಳಿದ್ದಾರೆ. ದುಬೈ ಹೋಟೆಲ್ ನಲ್ಲಿನ ಬಾತ್ ಟಬ್ ಒಳಗೆ ಆಕಸ್ಮಿಕವಾಗಿ ಬಿದ್ದು, ನೀರಲ್ಲಿ ಮುಳುಗಿ ನಟಿ ಶ್ರೀದೇವಿ ಕಳೆದ ಶನಿವಾರ ಕೊನೆಯುಸಿರೆಳೆದರು.
ಶ್ರೀದೇವಿ ರಕ್ತದಲ್ಲಿ ಆಲ್ಕೋಹಾಲ್ ಅಂಶ ಇರುವುದು ಪತ್ತೆ ಆಗಿದೆ. ಮದ್ಯ ಸೇವನೆ ಮಾಡಿದ್ದ ಶ್ರೀದೇವಿ, ಆಯಾತಪ್ಪಿ ಬಾತ್ ಟಬ್ ಒಳಗೆ ಬಿದ್ದಿರಬಹುದು ಅಂತೆಲ್ಲ ವರದಿ ಆಯ್ತು.
ವಾಸ್ತವ ಏನಪ್ಪಾ ಅಂದ್ರೆ, ದುಬೈಗೆ ಶ್ರೀದೇವಿ ಹೊರಟಾಗ ಆಕೆಯ ಆರೋಗ್ಯ ಸರಿ ಇರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಶ್ರೀದೇವಿ, ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದು ಶ್ರೀದೇವಿ ಆತ್ಮೀಯ ಗೆಳತಿ ಹೇಳಿದ್ದಾರೆ. ಮುಂದೆ ಓದಿರಿ...

ಶ್ರೀದೇವಿ ಗೆಳತಿ ಪಿಂಕಿ ರೆಡ್ಡಿ
ಶ್ರೀದೇವಿ ಎಂಟು ವರ್ಷದ ಬಾಲಕಿಯಾಗಿದ್ದಾಗಿನಿಂದಲೂ ಪಿಂಕಿ ರೆಡ್ಡಿ ಪರಿಚಯ. ಇಬ್ಬರೂ ಕ್ಲೋಸ್ ಫ್ರೆಂಡ್ಸ್. ಶ್ರೀದೇವಿ ಜೀವನವನ್ನ ಹತ್ತಿರದಿಂದ ಬಲ್ಲವರ ಪೈಕಿ ಪಿಂಕಿ ರೆಡ್ಡಿ ಕೂಡ ಒಬ್ಬರು. ಶ್ರೀದೇವಿ ನಿಧನ ಸುದ್ದಿ ಕೇಳಿ, ''ನಾನು ನನ್ನ ಸಹೋದರಿಯನ್ನು ಕಳೆದುಕೊಂಡಿದ್ದೇನೆ'' ಎಂದು ಭಾವುಕರಾದರು ಪಿಂಕಿ ರೆಡ್ಡಿ.

ಪಿಂಕಿ ರೆಡ್ಡಿ ತಂದೆ ಕೂಡ ನಿರ್ಮಾಪಕ
ಪಿಂಕಿ ರೆಡ್ಡಿ ತಂದೆ ಕೂಡ 'ಚಾಂದಿನಿ' ಚಿತ್ರದ ಸಹ ನಿರ್ಮಾಪಕರ ಪೈಕಿ ಒಬ್ಬರು. ಹೀಗಾಗಿ, ಶ್ರೀದೇವಿಯ ಸಿನಿ ಜರ್ನಿ ಹಾಗೂ ವೈಯುಕ್ತಿಕ ಬದುಕು ಪಿಂಕಿ ರೆಡ್ಡಿಗೆ ಚೆನ್ನಾಗಿ ಗೊತ್ತು.

ಜ್ವರದಿಂದ ಬಳಲುತ್ತಿದ್ದ ಶ್ರೀದೇವಿ
ದುಬೈ ಹೊರಡುವಾಗ ನಟಿ ಶ್ರೀದೇವಿ ಆರೋಗ್ಯ ಸರಿ ಇರಲಿಲ್ಲ. ಜ್ವರದಿಂದ ಶ್ರೀದೇವಿ ಬಳಲುತ್ತಿದ್ದರು. ''ದುಬೈಗೆ ಹೊರಡುವ ದಿನ ನಾನು ಶ್ರೀದೇವಿ ಜೊತೆ ಮಾತನಾಡಿದ್ದೆ. ಜ್ವರ ಇದೆ, ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ತುಂಬಾ ಸುಸ್ತು ಆಗುತ್ತಿದೆ. ಆದ್ರೆ, ಮದುವೆಗೆ ಹೋಗಲೇಬೇಕು ಎಂದು ಶ್ರೀದೇವಿ ಹೇಳಿದ್ದರು'' ಎನ್ನುತ್ತಾರೆ ಪಿಂಕಿ ರೆಡ್ಡಿ.

ಬೇಸರ ಆಗಿದೆ
''ಶ್ರೀದೇವಿ ಸಾವಿನ ಸುತ್ತ ಅನುಮಾನ ಹಾಗೂ ಏನೇನೋ ಊಹಾಪೋಹ ಕೇಳಿಬರುತ್ತಿದೆ. ಅದನ್ನೆಲ್ಲ ನೋಡಿ ಮನಸ್ಸಿಗೆ ಬೇಸರ ಆಗಿದೆ. ಸಿಟ್ಟು ಕೂಡ ಬರುತ್ತಿದೆ'' ಅಂತಾರೆ ಪಿಂಕಿ ರೆಡ್ಡಿ.

ದಿಗ್ಬ್ರಮೆಗೊಂಡ ಬೋನಿ ಕಪೂರ್
''ಬೋನಿ ಕಪೂರ್ ಜೊತೆಗೆ ನಿನ್ನೆಯಷ್ಟೇ ಮಾತನಾಡಿದೆ. ಅವರು ದಿಗ್ಭ್ರಮೆಗೊಂಡಿದ್ದಾರೆ'' - ಪಿಂಕಿ ರೆಡ್ಡಿ
ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?
ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?