»   » ಶ್ರೀದೇವಿ ಮಗಳು ಬರೆದಿರುವ ಪತ್ರವನ್ನ ಓದಿದರೆ ಮನ ಕಲಕುತ್ತೆ.!

ಶ್ರೀದೇವಿ ಮಗಳು ಬರೆದಿರುವ ಪತ್ರವನ್ನ ಓದಿದರೆ ಮನ ಕಲಕುತ್ತೆ.!

Posted By:
Subscribe to Filmibeat Kannada
ಶ್ರೀದೇವಿ ಮಗಳು ಬರೆದಿರುವ ಪತ್ರವನ್ನ ಓದಿದರೆ ಮನ ಕಲಕುತ್ತೆ.! | Oneindia Kannada

ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ನಟಿ ಶ್ರೀದೇವಿ ಈಗ ನೆನಪು ಮಾತ್ರ. ಕಳೆದ ವಾರ ಇಷ್ಟೋತ್ತಿಗಾಗಲೇ ಶ್ರೀದೇವಿಯ ಸಾವಿನ ಸುದ್ದಿ ದೇಶದಲ್ಲೆಡೇ ಸಂಚಲನ ಸೃಷ್ಟಿಸಿತು. ಈಗ ಅದೇಲ್ಲಾ ಮುಗಿದುಹೋದ ಕಥೆ. ಮಾರ್ಚ್ 7 ರಂದು ಶ್ರೀದೇವಿ ಮಗಳ ಹುಟ್ಟುಹಬ್ಬ. 21 ವರ್ಷದ ಬರ್ತಡೇ ಸಂಭ್ರಮದಲ್ಲಿರುವ ಜಾಹ್ನವಿ, ಅಮ್ಮನಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರೀತಿಯ ಅಮ್ಮನನ್ನು ಕಳೆದುಕೊಂಡ ಜಾಹ್ನವಿ ಕಪೂರ್ ಇದೇ ಮೊದಲ ಭಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶ್ರೀದೇವಿಯ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ''ತಂದೆ-ತಾಯಿ ಹೆಮ್ಮೆ ಪಡುವಂತಹ ಕೆಲಸ ಮಾಡಿ'' ಎಂದು ಸಂದೇಶ ಸಾರಿದ್ದಾರೆ.

ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

ಈ ಪತ್ರವನ್ನ ಓದಿದವರಿಗೂ ಒಂದು ಕ್ಷಣ ಮನಸ್ಸು ಕಲಕುತ್ತದೆ. ಶ್ರೀದೇವಿ ಮತ್ತು ಅವರ ಮಗಳ ಸಂಬಂಧ ಹೇಗಿತ್ತು.? ಮಕ್ಕಳಿಗೆ ಶ್ರೀದೇವಿ ಒಬ್ಬ ಅಮ್ಮನಾಗಿ ಯಾವ ರೀತಿ ಪ್ರೀತಿ ನೀಡುತ್ತಿದ್ದರು ಎಂಬುದನ್ನ ಜಾಹ್ನವಿ ಬಹಿರಂಗಪಡಿಸಿದ್ದಾರೆ. ಅಗಲಿದ ಅಮ್ಮನ ಬಗ್ಗೆ ಮಗಳು ಕೃತಜ್ಞತೆ ಸಲ್ಲಿಸಿರುವ ಪತ್ರವನ್ನ ಓದಿ. ಮುಂದೆ ನೀಡಲಾಗಿದೆ.

ಅಮ್ಮನೇ ನನಗೆ ಸ್ಪೂರ್ತಿ

''ಅಮ್ಮ ನೀನು ದೂರವಾದ ಪ್ರತಿಕ್ಷಣವೂ ನನ್ನೊಂದಿಗೆ ಇದ್ದಂತೆ ಅನ್ನಿಸುತ್ತದೆ. ಎಂದಿಗೂ ಆಕೆಯ ಪ್ರೀತಿ ನನ್ನ ಸುತ್ತಲೂ ಇದ್ದಂತೆ ಭಾವಿಸುತ್ತೇನೆ ಎಂದು ಜಾನ್ವಿ ಹೇಳಿದ್ದಾರೆ. 'ಇದ್ದಕ್ಕಿದ್ದಂತೆ ಅಂಧಕಾರವಾದ ತನ್ನ ಜೀವನದಲ್ಲಿ ತಾಯಿಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮುಂದೆ ಸಾಗುತ್ತೇನೆ'

ಎಲ್ಲವೂ ನೀನು ಕೊಟ್ಟಿದ್ದೇ

'ಈಗಲೂ ಪ್ರೀತಿಯನ್ನು ಪಡೆಯುತ್ತಿದ್ದೇನೆ. ನೋವು, ಸಂಕಟದಿಂದ ನೀನೇ ನನ್ನನ್ನು ರಕ್ಷಿಸುತ್ತೀಯ ಎಂದುಕೊಳ್ಳುತ್ತಿದ್ದೇನೆ. ಪ್ರತಿ ಬಾರಿ ನಾನು ಕಣ್ಣುಮುಚ್ಚಿಕೊಂಡರೆ ನನಗೆ ಒಳ್ಳೆಯ ಸಂಗತಿಗಳೇ ಕಾಣಿಸುತ್ತವೆ. ಅವೆಲ್ಲವನ್ನು ನೀನು ಕೊಟ್ಟಿದ್ದೇ.''

ಶ್ರೀದೇವಿಯಂತೆ 'ಬಾತ್ ಟಬ್'ನಲ್ಲಿ ಸಾವುಗೀಡಾಗಿದ್ದ 6 ತಾರೆಯರು

ನೀನು ತುಂಬಾ ಒಳ್ಳೆಯವರು

''ನೀನು ತುಂಬಾ ಒಳ್ಳೆಯವರು. ಸ್ವಚ್ಛವಾದ ಮನಸ್ಸು, ಪ್ರೀತಿ ಇರುವ ತಾಯಿ. ಹಾಗಾಗಿಯೇ ದೇವರು ನಿನ್ನನ್ನು ಕರೆದೊಯ್ದ. ನಾನು ತುಂಬಾ ಸಂತೋಷವಾಗಿ ಇರುತ್ತೀನಿ ಎಂದು ಫ್ರೆಂಡ್ಸ್ ಹೇಳುತ್ತಿರುತ್ತಾರೆ. ಅದಕ್ಕೆ ಕಾರಣ ನೀನೇ''

ನೀನು ಹೆಮ್ಮೆ ಪಡುವಂತೆ ಜೀವಿಸುತ್ತೇನೆ

''ನನಗೆ ಯಾವಾಗಲೂ ಯಾವುದೇ ಕಷ್ಟ, ನೋವು, ನಿಶ್ಯಕ್ತಿ ಅನ್ನಿಸಲೇ ಇಲ್ಲ. ಅದಕ್ಕೆ ಕಾರಣ ನೀನೇ ಅಮ್ಮಾ. ನನ್ನನ್ನು ತುಂಬಾ ಪ್ರೀತಿಸಿದೆ. ನೀನು ನನ್ನ ಆತ್ಮದ ಭಾಗ. ನಿನ್ನ ಸಂಪೂರ್ಣ ಜೀವನವನ್ನು ನಮಗಾಗಿ ಧಾರೆ ಎರೆದೆ. ಹಾಗಾಗಿಯೇ ಇನ್ನು ಮುಂದೆ ನೀನು ಹೆಮ್ಮೆ ಪಡುವಂತೆ ಇರುತ್ತೀವಿ''

ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

ನಿನ್ನಿಂದಲೇ ನನ್ನ ಕೆಲಸ ಆರಂಭ

''ಪ್ರತಿ ದಿನ ನಿನ್ನನ್ನು ಸ್ಮರಿಸಿಯೇ ಕೆಲಸ ಆರಂಭಿಸುತ್ತೇನೆ. ಎಂದಿನಂತೆಯೇ ನಿನ್ನನ್ನು ನಿದ್ದೆಯಿಂದ ಎಬ್ಬಿಸಲ್ಲ. ಯಾಕೆಂದರೆ ನೀನು ಇಲ್ಲೇ ನಮ್ಮೊಂದಿಗೆ ಇದ್ದೀಯ ಎಂದು ಭಾವಿಸಿದ್ದೇನೆ. ನೀನು ನನ್ನಲ್ಲಿ, ಖುಷಿಯಲ್ಲಿ, ಅಪ್ಪನಲ್ಲಿದ್ದೀಯ'' ಎಂದು ತಮ್ಮ ಅಂತರಾಳದಲ್ಲಿದ್ದ ಭಾವನೆಗಳನ್ನ ಪತ್ರದ ಮೂಲಕ ಹೊರಹಾಕಿದ್ದಾರೆ.

ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!

ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್

English summary
Jhanvi Kapoor, the daughter of famed Bollywood actor Sridevi Kapoor has posted an emotional tribute to Instagram just a week after the death of her mother.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada