»   » ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

Posted By:
Subscribe to Filmibeat Kannada
ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು | Filmibeat Kannada

ಎಲ್ಲರಿಗೂ ಗೊತ್ತಿರುವ ಹಾಗೆ, ನಟಿ ಶ್ರೀದೇವಿ ನಿರ್ಮಾಪಕ ಬೋನಿ ಕಪೂರ್ ಎರಡನೇ ಪತ್ನಿ. ಶ್ರೀದೇವಿ ಸೌಂದರ್ಯಕ್ಕೆ ಮನಸೋತಿದ್ದರೂ, ಮೋನಾ ಕಪೂರ್ ಕೈಹಿಡಿದರು ಬೋನಿ ಕಪೂರ್. ಮೋನಾ ಕಪೂರ್ ಜೊತೆಗೆ ಹದಿಮೂರು ವರ್ಷಗಳ ಕಾಲ ಸಂಸಾರ ನಡೆಸಿದ ಬೋನಿ ಕಪೂರ್, ಬಳಿಕ ಶ್ರೀದೇವಿ ಅವರನ್ನ ವರಿಸಿದರು.

ಮೊದಲ ಪತ್ನಿಗೆ ಮೋಸ ಮಾಡಿದ ಕಾರಣಕ್ಕೆ ಬೋನಿ ಕಪೂರ್ ಮೇಲೆ ಇಡೀ ಕಪೂರ್ ಕುಟುಂಬಕ್ಕೆ ಬೇಸರ ಇತ್ತು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿರುವಂತೆ, ಮೋನಾ ಕಪೂರ್ ಗೆ ಮೋಸವಾಗಿದೆ ಎಂದು ಬೋನಿ ತಾಯಿ ಪಂಚತಾರಾ ಹೋಟೆಲ್ ಒಂದರಲ್ಲಿ ಶ್ರೀದೇವಿಗೆ ಛೀಮಾರಿ ಹಾಕಿ, ಹಲ್ಲೆ ಕೂಡ ನಡೆಸಿದ್ದರು. ಅಷ್ಟರಮಟ್ಟಿಗೆ, ಶ್ರೀದೇವಿ ಮೇಲೆ ಕಪೂರ್ ಕುಟುಂಬಕ್ಕೆ ಕೋಪ, ಸಿಟ್ಟು ಇತ್ತು.

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ಶ್ರೀದೇವಿಯನ್ನ ಬೋನಿ ಕಪೂರ್ ಮದುವೆ ಆದ್ಮೇಲೆ, ಮೊದಲ ಪತ್ನಿ ಮೋನಾ ಕಪೂರ್ ಬೋನಿಯನ್ನ ಮಾತನಾಡಿಸಿದ್ದೇ ಕಮ್ಮಿ. ತಂದೆ ಬೋನಿಯೊಂದಿಗೆ ಮೊದಲ ಪತ್ನಿಯ ಮಕ್ಕಳಾದ ಅರ್ಜುನ್ ಕಪೂರ್ ಹಾಗೂ ಅನ್ಷುಲಾ ಆಗಾಗ ಹರಟುತ್ತಿದ್ದರು. ಅಷ್ಟು ಬಿಟ್ಟರೆ ಆತ್ಮೀಯ ಸಂಬಂಧ ಇರಲಿಲ್ಲ.

ಶ್ರೀದೇವಿ ಮಕ್ಕಳಾದ ಜಾಹ್ನವಿ ಹಾಗೂ ಖುಷಿ ಕೂಡ ಅರ್ಜುನ್ ಮತ್ತು ಅನ್ಷುಲಾ ಜೊತೆ ಎಂದೂ ಕಾಲ ಕಳೆದವರಲ್ಲ. ಆದ್ರೀಗ, ಶ್ರೀದೇವಿ ಸಾವಿನ ಬಳಿಕ ಬೋನಿ ಕಪೂರ್ ಮಕ್ಕಳೆಲ್ಲ ಒಂದಾಗಿದ್ದಾರೆ. ಮುಂದೆ ಓದಿರಿ...

ತಂದೆಯ ಸಹಾಯ ಕೇಳದ ಅರ್ಜುನ್, ಅನ್ಷುಲಾ

ತಮ್ಮ ತಾಯಿ ಮೋನಾ ಕಪೂರ್ ತೀರಿಕೊಂಡ ಬಳಿಕ ಸ್ವತಂತ್ರವಾಗಿ ಅರ್ಜುನ್ ಕಪೂರ್ ಹಾಗೂ ಅನ್ಷುಲಾ ಬದುಕುತ್ತಿದ್ದಾರೆ. ಎಂದೂ ತಂದೆ ಬೋನಿ ಕಪೂರ್ ಸಹಾಯ ಕೇಳಿಲ್ಲ.

ತಂದೆ ಜೊತೆಯಾದ ಅರ್ಜುನ್

ಶ್ರೀದೇವಿ ಸಾವಿನ ಬಳಿಕ ಎಲ್ಲ ಮನಸ್ತಾಪ, ಭಿನ್ನಾಭಿಪ್ರಾಯ ಮರೆತು ಬೋನಿ ಕಪೂರ್ ಗೆ ಅರ್ಜುನ್ ಕಪೂರ್ ಹತ್ತಿರವಾಗಿದ್ದಾರೆ. ತಮ್ಮ 'ನಮಸ್ತೆ ಇಂಗ್ಲೆಂಡ್' ಶೂಟಿಂಗ್ ನಡೆಯುತ್ತಿದ್ದರೂ, ಅದನ್ನ ಅರ್ಧಕ್ಕೆ ಬಿಟ್ಟು ನಿನ್ನೆ ಬೆಳಗ್ಗೆ ಅರ್ಜುನ್ ಕಪೂರ್ ದುಬೈಗೆ ಹಾರಿದ್ದರು. ದುಬೈನಲ್ಲಿ ತಂದೆ ಜೊತೆಯಾದ ಅರ್ಜುನ್ ಕಪೂರ್, ಶ್ರೀದೇವಿ ಪಾರ್ಥೀವ ಶರೀರದೊಂದಿಗೆ ಮುಂಬೈಗೆ ಆಗಮಿಸಿದರು.

ಹೆಣ್ಮಕ್ಕಳೆಲ್ಲ ಒಂದಾದರು

ಜಾಹ್ನವಿ ಹಾಗೂ ಖುಷಿ ಜೊತೆಗೆ ಎಂದೂ ಮಾತೇ ಆಡಿರದ ಬೋನಿ ಕಪೂರ್ ಮೊದಲ ಪತ್ನಿಯ ಪುತ್ರಿ ಅನ್ಷುಲಾ, ಶ್ರೀದೇವಿ ಸಾವಿನ ಬಳಿಕ ಜಾಹ್ನವಿ ಹಾಗೂ ಖುಷಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ. ಮೂವರೂ ಬೋನಿ ಸಹೋದರ ಅನಿಲ್ ಕಪೂರ್ ನಿವಾಸದಲ್ಲೇ ಒಟ್ಟಿಗೆ ಇದ್ದಾರೆ.

ಮೋನಾ ಕಪೂರ್ ನಿಧನರಾದಾಗ...

2012 ರಲ್ಲಿ ಮೋನಾ ಕಪೂರ್ ನಿಧನರಾದಾಗ, ಅಂತಿಮ ದರ್ಶನ ಪಡೆಯಲು ಶ್ರೀದೇವಿ ಆಗಲಿ, ಪುತ್ರಿಯರಾದ ಜಾಹ್ನವಿ, ಖುಷಿ ಬಂದಿರಲಿಲ್ಲ.

ಒಂದಾದ ಕುಟುಂಬ

ಶ್ರೀದೇವಿ ಆಗಮನದಿಂದ ಒಡೆದಿದ್ದ ಕಪೂರ್ ಕುಟುಂಬ ಇಂದು ಶ್ರೀದೇವಿ ಸಾವಿನ ಬಳಿಕ ಒಂದಾಗಿದೆ. ಶ್ರೀದೇವಿ ಅಂತಿಮ ಸಂಸ್ಕಾರದಲ್ಲಿ ಅರ್ಜುನ್ ಕಪೂರ್ ಹಾಗೂ ಅನ್ಷುಲಾ ಕೂಡ ಭಾಗವಹಿಸಲಿದ್ದಾರೆ. ಇಬ್ಬರು ಹೆಂಡತಿಯರನ್ನೂ ಕಳೆದುಕೊಂಡಿರುವ ಬೋನಿ ಕಪೂರ್ ಗೆ ಈಗ ನಾಲ್ವರು ಮಕ್ಕಳೇ ದಿಕ್ಕು.

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

English summary
Ever since Sridevi's tragic death, Boney Kapoor's 3 daughters (Jhanvi, Khushi, Anshula) have been staying together. Putting differences aside, Arjun Kapoor flew to Dubai and stood by his father.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada