»   » ಶ್ರೀದೇವಿ ಅಮ್ಮನಿಗೆ ಬೋನಿ ಕಪೂರ್ ಕಂಡ್ರೆ ಆಗ್ತಿರ್ಲಿಲ್ಲ!

ಶ್ರೀದೇವಿ ಅಮ್ಮನಿಗೆ ಬೋನಿ ಕಪೂರ್ ಕಂಡ್ರೆ ಆಗ್ತಿರ್ಲಿಲ್ಲ!

Posted By:
Subscribe to Filmibeat Kannada

ಶ್ರೀದೇವಿ ಎಂಬ ಸುರಸುಂದರಿಯ ಪ್ರೇಮಪಾಶಕ್ಕೆ ಸಿಲುಕಿದಾಗ, ಅದಾಗಲೇ ಬೋನಿ ಕಪೂರ್ ಗೆ ಮದುವೆ ಆಗಿತ್ತು. ಮಗುವಿನ ತಂದೆಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಶ್ರೀದೇವಿಯ ಸೌಂದರ್ಯಕ್ಕೆ ಬೋನಿ ಕಪೂರ್ ಮರುಳಾಗಿದ್ದರು. ಮೊದಲ ನೋಟದಲ್ಲೇ ಶ್ರೀದೇವಿಗೆ ಮನ ಸೋತಿದ್ದರು ಬೋನಿ ಕಪೂರ್. ಆದ್ರೆ, ಮೊದಮೊದಲು ಶ್ರೀದೇವಿಗೆ ಬೋನಿ ಕಪೂರ್ ಮೇಲೆ ಯಾವುದೇ ಭಾವನೆ ಇರಲಿಲ್ಲ. ಆಸಕ್ತಿಯೂ ಇರಲಿಲ್ಲ.

ಅಷ್ಟಕ್ಕೂ, 'ಮಿಸ್ಟರ್ ಇಂಡಿಯಾ' ಚಿತ್ರಕ್ಕಾಗಿ ಶ್ರೀದೇವಿ ಕಾಲ್ ಶೀಟ್ ಪಡೆಯಲು ಬೋನಿ ಕಪೂರ್ ಮುಂದಾದಾಗ, ಶ್ರೀದೇವಿ ತಾಯಿಗೆ ಕೊಂಚ ಕೂಡ ಇಷ್ಟವಿರಲಿಲ್ಲ. ಶ್ರೀದೇವಿ ಅಮ್ಮನಿಗೆ ಬೋನಿ ಕಪೂರ್ ಕಂಡ್ರೆ ಆಗ್ತಿರ್ಲಿಲ್ಲ. ಬೋನಿ ಕಪೂರ್ ರನ್ನ ಅವಾಯ್ಡ್ ಮಾಡಲು ಶ್ರೀದೇವಿ ತಾಯಿ ನಿರ್ಧರಿಸಿದ್ದರಂತೆ. ಆದ್ರೆ, ಬಳಿಕ ನಡೆದಿದ್ದೇ ಬೇರೆ.

ಅಷ್ಟಕ್ಕೂ, ಶ್ರೀದೇವಿ ತಾಯಿಗೆ ಬೋನಿ ಕಪೂರ್ ಮೇಲೆ ಯಾಕೆ ಅಷ್ಟೊಂದು ಬೇಸರ.? ಬೋನಿ ಕಪೂರ್ ಮೇಲೆ ಶ್ರೀದೇವಿಗೆ ಲವ್ ಆಗಿದ್ದು ಹೇಗೆ.? ಎಂಬ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಓದಿರಿ...

ಶ್ರೀದೇವಿ ಕಾಲ್ ಶೀಟ್ ಪಡೆಯಲು ಬೋನಿ ಕಪೂರ್ ಮುಂದಾದಾಗ...

'ಮಿಸ್ಟರ್ ಇಂಡಿಯಾ' ಚಿತ್ರಕ್ಕಾಗಿ ಶ್ರೀದೇವಿ ಕಾಲ್ ಶೀಟ್ ಪಡೆಯಲು ಬೋನಿ ಕಪೂರ್ ಮುಂದಾದಾಗ, ಶ್ರೀದೇವಿ ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು. ಶ್ರೀದೇವಿಯನ್ನು ಭೇಟಿ ಮಾಡಿದ ಬೋನಿ ಕಪೂರ್, ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು.

ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

ಶ್ರೀದೇವಿ ತುಟಿಕ್ ಪಿಟಿಕ್ ಎನ್ನಲಿಲ್ಲ.!

ಶ್ರೀದೇವಿಗಾಗಿ ಬೋನಿ ಕಪೂರ್ ಬಾಲಿವುಡ್ ನಲ್ಲಿ ರೆಡ್ ಕಾರ್ಪೆಟ್ ಹಾಸಿ ಆಹ್ವಾನ ನೀಡಿದರೂ, ಅಂದು ಶ್ರೀದೇವಿ ತುಟಿಕ್ ಪಿಟಿಕ್ ಎನ್ನಲಿಲ್ಲ. ಮೊದಲ ಭೇಟಿಯಂದು ಬೋನಿ ಕಪೂರ್ ಮುಂದೆ ಮಂದಹಾಸ ಬೀರುತ್ತಾ, ತಮ್ಮ ತಾಯಿಯನ್ನು ಭೇಟಿ ಆಗುವಂತೆ ಹೇಳಿದ್ದರು ನಟಿ ಶ್ರೀದೇವಿ.

ಶ್ರೀದೇವಿಯನ್ನ ಬೋನಿ ಕೈಹಿಡಿದಾಗ, ಮೊದಲ ಪತ್ನಿ ಮೋನಾಗಾದ ಆಘಾತ ಅಷ್ಟಿಷ್ಟಲ್ಲ.!

ಬೋನಿ ಕಪೂರ್ ಕಂಡ್ರೆ ಅಷ್ಟಕಷ್ಟೆ

ಅದ್ಯಾಕೋ, ಏನೋ... ಮೊದಲ ನೋಟಕ್ಕೆ ಶ್ರೀದೇವಿ ತಾಯಿಗೆ ಬೋನಿ ಕಪೂರ್ ಇಷ್ಟ ಆಗಲಿಲ್ಲ. ಹೀಗಾಗಿ, ಬೋನಿ ಕಪೂರ್ ಚಿತ್ರದಲ್ಲಿ ಶ್ರೀದೇವಿ ನಟಿಸುವುದು ಬೇಡ ಎಂದು ದುಬಾರಿ ಸಂಭಾವನೆ ಕೇಳಿದ್ದರಂತೆ. ಆಗ ಚಿತ್ರವೊಂದಕ್ಕೆ ಶ್ರೀದೇವಿ ಪಡೆಯುತ್ತಿದ್ದ ಸಂಭಾವನೆ 4-5 ಲಕ್ಷ ರೂಪಾಯಿ. ಬೋನಿ ಕಪೂರ್ ನೀಡಿದ ಆಹ್ವಾನಕ್ಕೆ ಶ್ರೀದೇವಿ ತಾಯಿ ಕೇಳಿದ ಸಂಭಾವನೆ ಬರೋಬ್ಬರಿ 10 ಲಕ್ಷ ರೂಪಾಯಿ. ದುಬಾರಿ ಬೆಲೆ ಆದ್ದರಿಂದ, ಶ್ರೀದೇವಿಯನ್ನ ಬೋನಿ ಕಪೂರ್ ಕೈಬಿಡಬಹುದು ಎಂದು ಶ್ರೀದೇವಿ ತಾಯಿ ಲೆಕ್ಕಾಚಾರ ಹಾಕಿದ್ದರು. ಆದ್ರೆ, ಅಲ್ಲಾಗಿದ್ದೇ ಬೇರೆ.

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

ಹನ್ನೊಂದು ಲಕ್ಷ ಕೊಟ್ಟ ಬೋನಿ ಕಪೂರ್

ಶ್ರೀದೇವಿ ತಾಯಿ ಹತ್ತು ಲಕ್ಷ ಸಂಭಾವನೆ ಕೇಳಿದ್ದರು. ಆದ್ರೆ, ಬೋನಿ ಕಪೂರ್ ಸಂದಾಯ ಮಾಡಿದ ಸಂಭಾವನೆ ಎಷ್ಟು ಗೊತ್ತಾ.? ಹನ್ನೊಂದು ಲಕ್ಷ ರೂಪಾಯಿ.! ಶ್ರೀದೇವಿ ಸೌಂದರ್ಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದ ಬೋನಿ ಕಪೂರ್, ಶ್ರೀದೇವಿ ತಾಯಿಯ ಮನವೊಲಿಸಲು 'ಮಿಸ್ಟರ್ ಇಂಡಿಯಾ' ಚಿತ್ರಕ್ಕಾಗಿ ಹನ್ನೊಂದು ಲಕ್ಷ ರೂಪಾಯಿ ನೀಡಿದ್ದರು. ದುಬಾರಿ ಹಣ ಕೊಟ್ಟ ಕಾರಣ, ಒಪ್ಪಿಕೊಳ್ಳದೇ ಶ್ರೀದೇವಿ ತಾಯಿಗೆ ಬೇರೆ ದಾರಿಯೇ ಇರಲಿಲ್ಲ.

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಶ್ರೀದೇವಿಗಾಗಿ ಪ್ರತ್ಯೇಕ ಮೇಕಪ್ ರೂಮ್

ತಾರೆಯರಿಗೆಲ್ಲ ಅಂದು ಈಗಿನಂತೆ ಕ್ಯಾರವ್ಯಾನ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ತಮ್ಮ ಸೆಟ್ ನಲ್ಲಿ ಶ್ರೀದೇವಿಗೆ ಯಾವುದೇ ತೊಂದರೆ ಆಗಬಾರದು ಅಂತ 'ಅತಿಲೋಕ ಸುಂದರಿ'ಗಾಗಿ ಬೋನಿ ಕಪೂರ್ ಪ್ರತ್ಯೇಕ ಮೇಕಪ್ ರೂಮ್ ವ್ಯವಸ್ಥೆ ಮಾಡಿದ್ದರು. 'ಮಿಸ್ಟರ್ ಇಂಡಿಯಾ' ಸೆಟ್ ನಲ್ಲಿ ಶ್ರೀದೇವಿಯನ್ನ ಬೋನಿ ಕಪೂರ್ ಅಕ್ಷರಶಃ 'ರಾಣಿ'ಯಂತೆ ನೋಡಿಕೊಂಡಿದ್ದರು.

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ಬೋನಿ ಜೊತೆ ಶ್ರೀದೇವಿ ಸ್ನೇಹ ಬೆಳೆದಿದ್ದು ಯಾವಾಗ?

ಮೊದಮೊದಲು ಬೋನಿ ಕಪೂರ್ ರಿಂದ ಸ್ವಲ್ಪ ದೂರ ಇರುತ್ತಿದ್ದ ಶ್ರೀದೇವಿ, ಕಾಲಕ್ರಮೇಣ ಹತ್ತಿರವಾದರು. 'ಚಾಂದಿನಿ' ಚಿತ್ರೀಕರಣದ ವೇಳೆ ತಮ್ಮ ತಾಯಿ ಕೊನೆಯುಸಿರೆಳೆದಾಗ, ಶ್ರೀದೇವಿಗೆ ಮಾನಸಿಕ ಸ್ಥೈರ್ಯ ತುಂಬಿದ್ದು ಇದೇ ಬೋನಿ ಕಪೂರ್.

ಶ್ರೀದೇವಿಯ ಕಷ್ಟದ ದಿನಗಳು...

ಕಷ್ಟದ ದಿನಗಳಲ್ಲೂ ಶ್ರೀದೇವಿಗೆ ಧೈರ್ಯ ತುಂಬಿದ್ದು ಇದೇ ಬೋನಿ ಕಪೂರ್. ಹೀಗಾಗಿ, ಬೋನಿ ಕಪೂರ್ ಮೇಲೆ ಶ್ರೀದೇವಿಗೆ ಅಪಾರ ಗೌರವ ಇತ್ತು.

ವರ್ಷಗಳೇ ಬೇಕಾಯಿತು

''ಬೋನಿ ಕಪೂರ್ ಮೇಲೆ ನನಗೆ ಒಲವು ಮೂಡಿದ್ದು, ಅವರ ಅಂತರಾಳ ತಿಳಿದುಕೊಂಡ್ಮೇಲೆ. ಬೋನಿ ಕಪೂರ್ ನನ್ನ ಪತಿ ಅಂತ ಸ್ವೀಕರಿಸಲು ನನಗೆ ವರ್ಷಗಳೇ ಹಿಡಿಯಿತು'' ಅಂತ ಸಂದರ್ಶನವೊಂದರಲ್ಲಿ ಶ್ರೀದೇವಿ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದು.

ಸಹೋದರಿಗೆ ಶಾಕ್ ಆಗಿತ್ತು

''ನಾನು ಮದುವೆ ಆಗುವ ಹೊತ್ತಿಗೆ, ನನ್ನ ತಂದೆ-ತಾಯಿ ತೀರಿಕೊಂಡಿದ್ದರು. ಬೋನಿ ಕಪೂರ್ ಜೊತೆಗಿನ ನನ್ನ ಮದುವೆಯ ನಿರ್ಧಾರ ಕೇಳಿ ನನ್ನ ಸಹೋದರಿ ಶಾಕ್ ಆದಳು. ಆದ್ರೀಗ, ನನಗೆ ಬೋನಿಯೇ ಸರಿಯಾದ ಪತಿ ಎಂದು ಸಹೋದರಿ ಹೇಳುತ್ತಾಳೆ'' ಎಂದು ಸಂದರ್ಶನದಲ್ಲಿ ಶ್ರೀದೇವಿ ಹೇಳಿಕೊಂಡಿದ್ದರು.

ಶ್ರೀದೇವಿ ಇನ್ನಿಲ್ಲ

ಮೋಹಿತ್ ಮಾರ್ವಾ ಮದುವೆಗೆಂದು ದುಬೈಗೆ ತೆರಳಿದ್ದ ಶ್ರೀದೇವಿ, ಅಲ್ಲಿನ ಹೋಟೆಲ್ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದರು. ಶ್ರೀದೇವಿಯ ನಿಧನದಿಂದ ಕಪೂರ್ ಕುಟುಂಬ ಆಘಾತಗೊಂಡಿದೆ.

English summary
Bollywood Actress Sridevi's Mother wanted to get rid of Boney Kapoor. Read the article to know, what her mother did to avoid Boney.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada