For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಚಿತ್ರದ ದಾಖಲೆ ಮುರಿದ ಶಾರುಖ್ ಎಕ್ಸ್ ಪ್ರೆಸ್

  By ಜೇಮ್ಸ್ ಮಾರ್ಟಿನ್
  |

  ಕಳೆದ ಒಂದೂವರೆ ವರ್ಷದಿಂದ ಬಾಕ್ಸಾಫೀಸ್ ನಲ್ಲಿ ಬರೀ ಸಲ್ಮಾನ್ ಖಾನ್ ಚಿತ್ರಗಳದ್ದೇ ಸುದ್ದಿ. ಸಲ್ಮಾನ್ ಖಾನ್ ಅವರ ಏಕ್ ಥಾ ಟೈಗರ್ ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಈಗ ಚೆನ್ನೈ ಎಕ್ಸ್ ಪ್ರೆಸ್ ಮುರಿದು ಹಾಕಿದೆ. ಸಲ್ಮಾನ್ ಖಾನ್ ಅವರ ಚಿತ್ರ 10 ದಿನಗಳ ನಂತರ 200 ಕೋಟಿ ರು ಎಣಿಸಿತ್ತು. ಶಾರುಖ್ ಚಿತ್ರ 6 ದಿನಗಳಲ್ಲೇ ಈ ಸಾಧನೆ ಮಾಡಿದ್ದು ಓದಿರುತ್ತೀರಿ.

  ಈಗ ಏಕ್ ಥಾ ಟೈಗರ್ ಚಿತ್ರದ ಸರ್ವಕಾಲಿಕ ದಾಖಲೆಯನ್ನು ಮುರಿದಿರುವ ರೋಹಿತ್ ಶೆಟ್ಟಿ ಚಿತ್ರ ದೇಶಿ ಮಾರುಕಟ್ಟೆಯಲ್ಲಿ ಕೇವಲ 14 ದಿನಗಳಲ್ಲಿ 200 ಕೋಟಿ ರು ಗಡಿ ದಾಟಿ ಮುನ್ನುಗ್ಗುತ್ತಿದೆ. ಇದೇ ವೇಗದಲ್ಲಿ ಎಕ್ಸ್ ಪ್ರೆಸ್ ಸಾಗಿದರೆ ಅಮೀರ್ ಖಾನ್ ಅವರ 3 ಈಡಿಯಟ್ಸ್ ದಾಖಲೆ ಕೂಡಾ ಮುರಿಯುವ ಸಾಧ್ಯತೆಯಿದೆ.

  ಕಳೆದ ವರ್ಷ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಿದ್ದ ಏಕ್ ಥಾ ಟೈಗರ್ ಚಿತ್ರ 3500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ಬಿಡುಗಡೆಯ ದಿನ 32.92 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಈಗ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಈ ದಾಖಲೆಯನ್ನು ಮುರಿದಿದೆ.

  ಇದರ ಪರಿಣಾಮ ವಿಶ್ವದಾದ್ಯಂತ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಕೇವಲ 6 ದಿನಗಳಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ 200 ಕೋಟಿ ರು ಗಡಿ ದಾಟಿದೆ. ಬಾಲಿವುಡ್ ಮಂದಿ ಲೆಕ್ಕಾಚಾರವನ್ನು ತಲೆ ಕೆಳಗು ಮಾಡಿ ಶಾರುಖ್ ಮತ್ತೊಮ್ಮೆ ಬಾಕ್ಸಾಫೀಸ್ ಕಿಂಗ್ ಎಂಬುದನ್ನು ಅವರ ಅಭಿಮಾನಿಗಳು ನಿರೂಪಿಸಿದ್ದಾರೆ. [ಚಿತ್ರದ ವಿಮರ್ಶೆ ಓದಿ] ಚೆನ್ನೈ ಎಕ್ಸ್ ಪ್ರೆಸ್ ಬಾಕ್ಸಾಫೀಸ್ ವಿವರಗಳು ಚಿತ್ರ ಸರಣಿಯಲ್ಲಿ ನೋಡಿ...

  ವಿಮರ್ಶೆಗೆ ಸೆಡ್ಡು ಹೊಡೆದ ಚಿತ್ರ

  ವಿಮರ್ಶೆಗೆ ಸೆಡ್ಡು ಹೊಡೆದ ಚಿತ್ರ

  ಶಾರುಖ್ ಖಾನ್- ದೀಪಿಕಾ ಪಡುಕೋಣೆ ಯಶಸ್ವಿ ಜೋಡಿಯೊಂದಿಗೆ ರೋಹಿತ್ ಶೆಟ್ಟಿ ನೀಡಿರುವ ಮಸಾಲೆ ಭರಿತ ಮನರಂಜನೆ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ಜಾಸ್ತಿ ಹತ್ತಬೇಡಿ ಎಂದು ವಿಮರ್ಶಕರು ಎಚ್ಚರಿಕೆ ನೀಡಿದ್ದರು., ಆದರೆ, ಮನರಂಜನೆ ಮುಖ್ಯವಾಗಿರಬೇಕಾದರೆ ಪ್ರೇಕ್ಷಕರು ರಜಾ ದಿನಗಳಲ್ಲಿ ಮುಗಿ ಬಿದ್ದು ಚಿತ್ರಮಂದಿರಕ್ಕೆ ನುಗ್ಗಿ ಮತ್ತೆ ಮತ್ತೆ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಿದ್ದಾರೆ.

  ಮೊದಲವಾರ ಸರ್ವಕಾಲಿಕ ದಾಖಲೆ

  ಮೊದಲವಾರ ಸರ್ವಕಾಲಿಕ ದಾಖಲೆ

  ಮೊದಲ ವಾರದಲ್ಲೇ ದೇಶಿ ಮಾರುಕಟ್ಟೆಯಲ್ಲಿ 100.42 ಕೋಟಿ ರು ನಿವ್ವಳ ಲಾಭ ಗಳಿಸಿತ್ತು. ವಾರದ ದಿನಗಳಲ್ಲೂ ಭರ್ಜರಿ ಗಳಿಕೆ ಮುಂದುವರೆಸಿ ಸೋಮವಾರ, ಮಂಗಳ ವಾರ ಹಾಗೂ ಬುಧವಾರ ಸೇರಿದಂತೆ 34.37 ಕೋಟಿ ರು ಗಳಿಸಿತ್ತು. ಒಟ್ಟಾರೆ 156.70 ಕೋಟಿ ರು ಗಳಿಸಿದ್ದು ಅಭೂತಪೂರ್ವ ದಾಖಲೆಯಾಗಿದೆ.

  ಫೈಟ್ ನೀಡದ ಅಕ್ಷಯ್ ಚಿತ್ರ

  ಫೈಟ್ ನೀಡದ ಅಕ್ಷಯ್ ಚಿತ್ರ

  ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ ದೊಬಾರಾ ಆ.15 ರಂದು ಬಿಡುಗಡೆಗೊಂಡ ಮೇಲೆ ಚೆನ್ನೈ ಎಕ್ಸ್ ಪ್ರೆಸ್ ಗಳಿಕೆ ಶೇ 60 ರಷ್ಟು ಇಳಿಕೆಯ ನಿರೀಕ್ಷೆ ಇತ್ತು. ಚಿತ್ರಮಂದಿರಗಳ ಹಂಚಿಕೆ ಇದಕ್ಕೆ ಕಾರಣವಾಗಿತ್ತ್ತು.

  ಆದರೆ, ಎರಡನೇ ವಾರ ಕೂಡಾ 50 ಕೋಟಿ ರು ಗೂ ಅಧಿಕ ಗಳಿಕೆ ಮಾಡಿದ ಶಾರುಖ್ ಚಿತ್ರ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಅಕ್ಷಯ್ ಚಿತ್ರ ಕೂಡಾ ವಿಮರ್ಶಕರಿಂದ ಟೀಕೆಗೆ ಒಳಗಾಗಿದೆ. ಚಿತ್ರದ ವಿಮರ್ಶೆ ಓದಿ

  ಎರಡನೇ ವಾರದ ಗಳಿಕೆ

  ಎರಡನೇ ವಾರದ ಗಳಿಕೆ

  ಎರಡನೇ ವಾರ ಒಟ್ಟು 44.1 ಕೋಟಿ ರು ನಿವ್ವಳ( 25.23 ಕೋಟಿ ವಾರಾಂತ್ಯದಲ್ಲಿ ಹಾಗೂ ವಾರದ ದಿನಗಳಲ್ಲಿ 18.87 ಕೋಟಿ ರು) ದೇಶಿ ಮಾರುಕಟ್ಟೆಯಲ್ಲಿ ಗಳಿಸಿದೆ.

  ಒಟ್ಟಾರೆ 14 ದಿನಗಳ ನಂತರ ದೇಶಿ ಮಾರುಕಟ್ಟೆಯಲ್ಲಿ 200.80 ಕೋಟಿ ರು ಗಳಿಸಿದೆ. ಶುಕ್ರವಾರ 6.50 ಕೋಟಿ, ಶನಿವಾರ 8.51 ಕೋಟಿ ರು, ಭಾನುವಾರ 10.22 ಕೋಟಿ ರು ಗಳಿಕೆ ಕಂಡಿದೆ.

  ಸರ್ವಕಾಲಿಕ ದಾಖಲೆ

  ಸರ್ವಕಾಲಿಕ ದಾಖಲೆ

  ಅತಿ ವೇಗವಾಗಿ 200 ಕೋಟಿ ರು ಗಳಿಕೆ ಕಂಡಿದ್ದ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಚಿತ್ರ ಎಕ್ ಥಾ ಟೈಗರ್ ದಾಖಲೆಯನ್ನು ಚೆನ್ನೈ ಎಕ್ಸ್ ಪ್ರೆಸ್ ಮುರಿದಿದೆ. ಈಗ 15ದಿನಕ್ಕೆ ಕಾಲಿಟ್ಟ ಮೇಲೆ ಅಮೀರ್ ಖಾನ್ ಅವರ 3 ಈಡಿಯಟ್ಸ್ ಚಿತ್ರದ ದಾಖಲೆ ಮೊತ್ತ 202 ಕೋಟಿ ರು ಗಳಿಸಿ ಶಾರುಖ್ ಖಾನ್ ಚಿತ್ರ ಹೊಸ ದಾಖಲೆ ನಿರ್ಮಿಸಿದೆ.

  English summary
  The Rohit Shetty-directed flick has surpassed Rs 200 crore mark in the domestic market in just 14 days. It has also become the second all time highest grosser movie in Indian cinema, beating the record of Salman Khan's Ek Tha Tiger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X