»   » ಐವತ್ತಕ್ಕೆ ಅಡಿಯಿಡುತ್ತಿರುವ ಬಾಲಿವುಡ್ 'ಖಾನ್' ತ್ರಯರು

ಐವತ್ತಕ್ಕೆ ಅಡಿಯಿಡುತ್ತಿರುವ ಬಾಲಿವುಡ್ 'ಖಾನ್' ತ್ರಯರು

Posted By:
Subscribe to Filmibeat Kannada

2015....ಹೊಸ ವರ್ಷ, ಹೊಸ ಹುರುಪಿನಿಂದ ಶುರುವಾಗ್ತಿದ್ದ ಹಾಗೆ, ಈ ವರ್ಷದ ಬಗ್ಗೆ ನಿರೀಕ್ಷೆಗಳು ಬೆಟ್ಟದಷ್ಟಿವೆ. ಬಾಲಿವುಡ್ ನಲ್ಲಂತೂ ಈ ವರ್ಷ ಸೂಪರ್ ಕಲೆಕ್ಷನ್ ಮಾಡಿ ಹೊಸ ದಾಖಲೆಯನ್ನ ಮಾಡೋಕೆ ಅನೇಕ ಚಿತ್ರಗಳು ಕ್ಯೂ ನಲ್ಲಿವೆ.

ಗೆಲುವು-ಸೋಲು ಲೆಕ್ಕಾಚಾರವನ್ನ ಕೊಂಚ ಪಕ್ಕಕ್ಕಿಟ್ಟು, 2015ರ ಅಚ್ಚರಿಯೊಂದನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದೀವಿ. ಅದೇನಪ್ಪಾ ಅಂದ್ರೆ, ಈ ವರ್ಷ ಬಾಲಿವುಡ್ ನ ಮೂರು ಸೂಪರ್ ಸ್ಟಾರ್ ಗಳು ತಮ್ಮ ರಿಯಲ್ ಲೈಫಲ್ಲಿ ಹಾಫ್ ಸೆಂಚುರಿ ಬಾರಿಸಲಿದ್ದಾರೆ.

SRK, Salman and Aamir to turn 50 this year1

ಹೌದು, ಕಿಂಗ್ ಖಾನ್ ಶಾರೂಖ್, ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಮತ್ತು ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್. ಈ ಮೂವರು ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿಕೊಳ್ಳುವುದು ಇದೇ ವರ್ಷ!

ಬಾಲಿವುಡ್ ನ ಈ ವರ್ಷದ ಅಚ್ಚರಿ ಅಂದ್ರೆ ಇದೇ ನೋಡಿ. ಇನ್ನೂ ಮೂವತ್ತರ ಆಸುಪಾಸಲ್ಲಿರುವಂತೆ ತೆರೆಮೇಲೆ ಕಂಗೊಳಿಸುವ ಈ ಖಾನ್ ತ್ರಯರು, ತಮ್ಮ 50 ನೇ ಬರ್ತಡೇ ಯನ್ನ ಆಚರಿಸಿಕೊಳ್ಳುತ್ತಿದ್ದಾರೆ ಅಂದ್ರೆನೇ ಎಲ್ಲರ ಕಣ್ಣರಳುತ್ತೆ.

SRK, Salman and Aamir to turn 50 this year2

ಇನ್ನೂ ಬಾಲಿವುಡ್ ನಲ್ಲಿ ಚಲ್ತಿ ಕಾ ನಾಮ್ ಗಾಡಿಯಾಗಿರುವ ಈ ಖಾನ್ ತ್ರಯರು ಒಟ್ಟಿಗೆ 50ನೇ ವಸಂತಕ್ಕೆ ಕಾಲಿಡುವ ಸುವರ್ಣ ಕ್ಷಣಕ್ಕೆ 2015 ಸಾಕ್ಷಿಯಾಗಲಿದೆ ಅಂದ್ರೆ ಸುಮ್ನೆನಾ ಹೇಳಿ. [ಅಮೀರ್, ಸಲ್ಮಾನ್, ಶಾರುಖ್ ಈದ್ ಆಚರಣೆ ಸಂಭ್ರಮ]

1965 ರಲ್ಲಿ ಜನಿಸಿದ ಈ ಮೂವರು ಖಾನ್ ಗಳು ಸದ್ಯ ಇಡೀ ಬಾಲಿವುಡ್ ನ ಆಳುತ್ತಿರುವ ಚಕ್ರವರ್ತಿಗಳು. ಮಾರ್ಚ್ 14 ರಂದು ಜನಿಸಿದ ಅಮೀರ್, ಖಾನ್ ತ್ರಯರ ಪೈಕಿ ಹಿರಿಯನಾದರೆ, ಡಿಸೆಂಬರ್ 27ಕ್ಕೆ ಹುಟ್ಟಿರುವ ಸಲ್ಮಾನ್ ಇಬ್ಬರಿಗಿಂತ ಕಿರಿಯ.

SRK, Salman and Aamir to turn 50 this year3

ದಿನಾಂಕದಲ್ಲಿ ಮಾತ್ರವಲ್ಲದೇ ಬಣ್ಣದ ಬದುಕಿಗೆ ಕಾಲಿಟ್ಟಿದರಲ್ಲೂ ಅಮೀರ್ ಸೀನಿಯರ್. 1988 ರಲ್ಲಿ 'ಖಯಾಮತ್ ಸೇ ಖಯಾಮತ್ ತಕ್' ಸಿನಿಮಾದ ಮೂಲಕ ಆಮೀರ್ ಖಾನ್ 'ನಾಯಕ'ನಾದರೆ, 1989 ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರದ ಮೂಲಕ ಸಲ್ಮಾನ್ 'ಹೀರೋ' ಆದರು. ಇನ್ನೂ ಶಾರೂಖ್ ಎಂಟ್ರಿಕೊಟ್ಟಿದ್ದು 1992ರಲ್ಲಿ 'ದೀವಾನಾ' ಚಿತ್ರದ ಮೂಲಕ. [ಶಾರೂಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ!]

ಜೂನಿಯರ್, ಸೀನಿಯರ್ ಅನ್ನೋದು ಇಲ್ಲದೆ ವೃತ್ತಿಪರ ಪೈಪೋಟಿ ಇದ್ದರೂ, ಸೋಲು-ಗೆಲುವನ್ನ ಸಮನಾಗಿ ಸ್ವೀಕರಿಸಿರುವ ಖಾನ್ ತ್ರಯರು, ತಮ್ಮ ಜೀವನದ ಸಂಭ್ರಮದ ಕ್ಷಣವನ್ನ ಈ ವರ್ಷ ಆಚರಿಸಲಿದ್ದಾರೆ. ಅದಕ್ಕೆ ಇಡೀ ಬಾಲಿವುಡ್ ಏನು ಸರ್ಪ್ರೈಸ್ ಪ್ಲಾನ್ ಮಾಡಲಿದೆಯೋ? (ಏಜೆನ್ಸೀಸ್)

English summary
The three Khans of Bollywood : Shahrukh Khan, Salman Khan and Aamir Khan will turn 50 this year. Aamir on March 14th, Srk on November 2nd and Salman on December 27th will celebrate their 50th Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada