For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾದಲ್ಲಿ ಸುದೀಪ್ 'ಈಗ' ಚಿತ್ರಕ್ಕೆ ಭಾರೀ ಗಳಿಕೆ

  |

  ತೆಲುಗು ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಈಗ ಚಿತ್ರ, ಅಮೆರಿಕಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಜಾದೂ ಮಾಡಿದೆ. ಪ್ರಪಂಚದಾದ್ಯಂತ 1200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈಗ ಚಿತ್ರ, ಅಮೆರಿಕಾದಲ್ಲಿ ಕೂಡ ಸಾಕಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ. ಗಳಿಕೆಯಲ್ಲಿ ಈ ಚಿತ್ರ, ಬಾಲಿವುಡ್ 'ಬೋಲ್ ಬಚ್ಚನ್' ಚಿತ್ರವನ್ನೂ ಮೀರಿ ರು. 2 ಕೋಟಿಗೂ ಅಧಿಕ ಹಣ ಸಂಗ್ರಹಿಸಿದೆ. ಇದು, ಅಮೆರಿಕಾದಲ್ಲಿ ಬಿಡುಗಡೆ ನಂತರದ ನಾಲ್ಕು ದಿನಗಳ ವರದಿ.

  ಸುದೀಪ್ ನಟನೆಯ ಈಗ ಚಿತ್ರ ಭಾರತದಲ್ಲೂ ಈ ಚಿತ್ರ ಗಳಿಕೆಯಲ್ಲಿ ದಾಖಲೆಯನ್ನೇ ಮೆರೆಯುತ್ತಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಆಂಧ್ರದಲ್ಲಿ ಈ ಚಿತ್ರದ ಕಲೆಕ್ಷನ್ ಭರ್ಜರಿಯಾಗಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕೂಡ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಭಾರೀ ಗಳಿಕೆ ದಾಖಲಿಸುತ್ತಿದೆ. ಭಾರತದ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಮೆರೆಯುವ ಸಂಭವವೇ ಹೆಚ್ಚಾಗಿದೆ ಎಂಬುದು ಎಲ್ಲೆಡೆ ವ್ಯಕ್ತವಾಗುತ್ತಿರುವ ಅಭಿಪ್ರಾಯ.

  ಅಮೆರಿಕಾದಲ್ಲಿ ಕೇವಲ ಮೂರೇ ದಿನಗಳಲ್ಲಿ ರು. 2 ಕೋಟಿಗೂ ಅಧಿಕ ಹಣ ಗಳಿಸಿ ದಾಖಲೆ ಮೆರೆದಿರುವ ಈಗ ಚಿತ್ರ, ಬಾಲಿವುಡ್ಡಿನ ಬೋಲ್ ಬಚ್ಚನ್ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದ್ದು ಎಲ್ಲರಿಗೂ ಅತ್ಯಾಶ್ಚರ್ಯ ತಂದಿದೆ. ಸುದೀಪ್ ಖಳನಾಯಕತ್ವ, ನಾನಿ-ಸುದೀಪ್ ಜೋಡಿಯ ಚಿತ್ರ 'ಈಗ', ಮೊದಲಿದ್ದ ಬಹುನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಗಿದೆ, ಬಾಕ್ಸ್ ಆಫೀಸ್ ಗಳಿಕೆಯಲ್ಲೂ ದಾಖಲೆ ಮೆರೆಯುತ್ತಿದೆ.

  ಅಮೆರಿಕಾದಲ್ಲಿ ಮೊದಲ ದಿನ ರು 23.51 ಲಕ್ಷ, ಎರಡನೆ ದಿನ ರು. 86.72 ಲಕ್ಷ ಹಾಗೂ ಶನಿವಾರ ರು. 79.99 ಲಕ್ಷಗಳನ್ನು ದಾಖಲಿಸಿದೆ. ಒಟ್ಟೂ ರು. 190.22 ಸಂಗ್ರಹಿಸಿದಂತಾಗಿದೆ. ಆದರೆ ಇದು ರು. 2 ಕೋಟಗೆ ಅಧಿಕ ಖಂಡಿತ ಎನ್ನಲಾಗಿರುವುದು ಏಕೆಂದರೆ ಬಹಳಷ್ಟು ಚಿತ್ರಮಂದಿರಗಳ ವರದಿಗಳು ಇದರಲ್ಲಿ ಮಿಸ್ ಆಗಿವೆ. ಒಟ್ಟಿನಲ್ಲಿ ಸುದೀಪ್-ರಾಜಮೌಳಿ ಜೋಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿದೆ.

  ಆದರೆ ಇನ್ನೊಂದು ಚಿತ್ರ ಬೋಲ್ ಬಚ್ಚನ್, ಅಮೇರಿಕಾದಲ್ಲಿ ಮೊದಲ ದಿನ ರು. 66.89 ಲಕ್ಷ, ಎರಡನೇ ದಿನ ರು. 77.96 ಸಂಗ್ರಹಿಸಿ ಒಟ್ಟೂ ರು. 1.44 ಕೋಟಿ ಗಳಿಸಿದೆ. ಮೂರನೇ ದಿನದ ವರದಿ ಬಂದಿಲ್ಲವಾದರೂ ಅದು 2 ಕೋಟಿ ಮೀರಿರಲು ಸಾಧ್ಯವಿಲ್ಲ ಎನ್ನಲಾಗಿದೆ. ಯಾವುದೇ ವರದಿಯಿಂದಲೂ ಬೋಲ್ ಬಚ್ಚನ್ ಚಿತ್ರದ ಗಳಿಕೆ ಈಗ ಚಿತ್ರಕ್ಕಿಂತ ಹೆಚ್ಚಾಗಿರುವುದು ಪಕ್ಕಾ ಮಾಹಿತಿ ಎಂಬುದು ವಿಶೇಷ. (ಏಜೆನ್ಸೀಸ್)

  English summary
  SS Rajamouli Telugu movie Eega has done wonders at USA Box Office. The film has beaten Ajay-Abhishek Bollywood film Bol Bachchan in first and second day
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X