For Quick Alerts
  ALLOW NOTIFICATIONS  
  For Daily Alerts

  ತಪ್ಪಾಯಿತು ಕ್ಷಮಿಸಿ, ನನ್ನ ಕುಟುಂಬವನ್ನು ಬಿಟ್ಟುಬಿಡಿ: ಕೈ ಮುಗಿದ ಕಮಿಡಿಯನ್

  |

  ಖ್ಯಾತ ಸ್ಟಾಂಡಪ್‌ ಕಮಿಡಿಯನ್ ರೋಹನ್ ಜೋಷಿ ಟ್ವಿಟ್ಟರ್‌ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.

  ಅವತ್ತು ಶಿವಣ್ಣನ ಹೆಸರು ಹೇಳಿ ಎಲೆಕ್ಷನ್ ನಲ್ಲಿ ಗೆದ್ದಿದ್ದೆ | Filmibeat Kannada

  ಜನಪ್ರಿಯ ಹಾಗೂ ಅಷ್ಟೆ ವಿವಾದಗಳನ್ನು ಸೃಷ್ಟಿಸಿದ್ದ 'ಎಐಬಿ' ಕಾಮಿಡಿ ಯೂಟ್ಯೂಬ್ ಚಾನೆಲ್‌ ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸಹ ಪಾಲುದಾರರಾಗಿದ್ದ ರೋಹನ್ ಜೋಷಿ ಕಾಮಿಡಿ ಮೂಲಕವೇ ಸಾಕಷ್ಟು ಜನಪ್ರಿಯತೆ ಜೊತೆಗೆ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು.

  ಪುರುಷ ಕಾಮಿಡಿಯನ್ ಗರ್ಭಿಣಿಯಾಗಿದ್ದಾರೆ ಎಂದ ನೆಟ್ಟಿಗರು: ಕಾರಣವೇನು ಗೊತ್ತೇ?ಪುರುಷ ಕಾಮಿಡಿಯನ್ ಗರ್ಭಿಣಿಯಾಗಿದ್ದಾರೆ ಎಂದ ನೆಟ್ಟಿಗರು: ಕಾರಣವೇನು ಗೊತ್ತೇ?

  ಪ್ರಸ್ತುತ ಅವರ ಫೋನ್ ನಂಬರ್ ಮತ್ತು ಮನೆ ವಿಳಾಸ ಬಹಿರಂಗಗೊಂಡಿದ್ದು, ಕೆಲವು ದಿನಗಳಿಂದ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಅವರು ಟ್ವಿಟ್ಟರ್, ಇನ್‌ಸ್ಟಾಗ್ರಾಂ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಷ್ಟೆ ಅಲ್ಲ ಬೇಷರತ್ ಆಗಿ ಕ್ಷಮಾಪಣೆಯನ್ನೂ ಕೋರಿದ್ದಾರೆ.

  ಸೂಕ್ಷ್ಮ ವಿಷಯಗಳ ಮೇಲೆ ಹಾಸ್ಯ

  ಸೂಕ್ಷ್ಮ ವಿಷಯಗಳ ಮೇಲೆ ಹಾಸ್ಯ

  ಧರ್ಮ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಮೇಲೆ ಹಾಸ್ಯ ಮಾಡುತ್ತಿದ್ದ ರೋಹನ್ ಜೋಷಿ ಮತ್ತು ಆತನ ಎಐಬಿ ಗೆಳೆಯರ ವಿರುದ್ಧ ಈಗಾಗಲೇ ಕೆಲವು ದೂರುಗಳು ಕೇಳಿಬಂದಿದ್ದವು. ಇದೀಗ ಅವರ ಫೋನ್ ನಂಬರ್ ಬಹಿರಂಗವಾದ ಬಳಿಕ ನಡುರಾತ್ರಿಗಳಲ್ಲೆಲ್ಲಾ ಜನರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರಂತೆ.

  ಬೇಷರತ್ ಆಗಿ ಕ್ಷಮೆ ಯಾಚಿಸಿದ ಕಾಮಿಡಿಯನ್

  ಬೇಷರತ್ ಆಗಿ ಕ್ಷಮೆ ಯಾಚಿಸಿದ ಕಾಮಿಡಿಯನ್

  ಸಾಮಾಜಿಕ ಜಾಲತಾಣ ಖಾತೆ ನಿಷ್ಕ್ರಿಯಗೊಳಿಸುವ ಮುನ್ನಾ ಪತ್ರ ಪ್ರಕಟಿಸಿರುವ ರೋಹನ್, 'ಯಾರದ್ದಾದರೂ ಭಾವನೆಗಳನ್ನು ನನ್ನ ಮಾತಿನಿಂದ ಘಾಸಿಗೊಳಿಸಿದ್ದಾರೆ ನನ್ನನ್ನು ಕ್ಷಮಿಸಿಬಿಡಿ, ನನ್ನ ಮಾತಿನಿಂದ ಯಾರದ್ದಾದರೂ ಧಾರ್ಮಿಕ ಭಾವನೆ ಘಾಸಿಯಾಗಿದ್ದರೆ ನಾನೂ ಬೇಷರತ್ ಕ್ಷಮೆ ಕೋರುತ್ತಿದ್ದೇನೆ' ಎಂದಿದ್ದಾರೆ.

  ಸಹ ನಟರ ಮೇಲೆ ದೂರು ನೀಡಿದ ಹಾಸ್ಯನಟ ವಡಿವೇಲುಸಹ ನಟರ ಮೇಲೆ ದೂರು ನೀಡಿದ ಹಾಸ್ಯನಟ ವಡಿವೇಲು

  ನನ್ನ ಕುಟುಂಬವನ್ನು ನೆಮ್ಮದಿಯಾಗಿರಲು ಬಿಡಿ: ಮನವಿ

  ನನ್ನ ಕುಟುಂಬವನ್ನು ನೆಮ್ಮದಿಯಾಗಿರಲು ಬಿಡಿ: ಮನವಿ

  'ನನ್ನ ಫೋನ್ ನಂಬರ್, ಮನೆ ವಿಳಾಸ ಬಹಿರಂಗವಾದ ಬಳಿಕ ನಡುರಾತ್ರಿ ಬೆದರಿಕೆ ಕರೆಗಳು ಬರುತ್ತಿವೆ. ನಾನು ಕ್ಷಮಾಪಣೆ ಕೋರುತ್ತೇನೆ, ನನ್ನ ಕುಟುಂಬವನ್ನು ನೆಮ್ಮದಿಯಾಗಿರಲು ಬಿಟ್ಟು ಬಿಡಿ' ಎಂದು ರೋಹನ್ ಕೈಮುಗಿದಿದ್ದಾರೆ.

  2012 ರಲ್ಲಿ ಸ್ಥಾಪನೆಯಾಗಿದ್ದ ಎಐಬಿ

  2012 ರಲ್ಲಿ ಸ್ಥಾಪನೆಯಾಗಿದ್ದ ಎಐಬಿ

  ರೋಹನ್ ಜೋಷಿ, ಗುರುಸಿಮ್ರನ್ ಕಂಬಾ, ತನ್ಮಯ್ ಭಟ್, ಆಶೀಷ್ ಶಾಕ್ಯಾ ಅವರುಗಳು ಸೇರಿ 2012 ರಲ್ಲಿ ಎಐಬಿ ಸ್ಥಾಪಿಸಿದ್ದರು. ಮೊದಲಿಗೆ ಕಾಮಿಡಿ ಶೋ, ಯೂಟ್ಯೂಬ್ ಹಾಸ್ಯ ಶೋಗಳನ್ನು ಮಾಡುತ್ತಿದ್ದ ಈ ತಂಡ ಕೊನೆಗೆ ಸಿನಿಮಾ ಸಹ ನಿರ್ಮಿಸಿತು. ಆದರೆ ಗುರುಸಿಮ್ರನ್ ಕಂಬಾ ಮತ್ತು ಉತ್ಸವ್ ಚಕ್ರವರ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಂದ ನಂತರ ಎಐಬಿ ಒಡೆದು ಹೋಗಿ, ಒಬ್ಬೊಬ್ಬರು ಒಂದೊಂದು ದಾರಿ ಆಗಿದ್ದಾರೆ.

  ಹಿರಿಯ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಖ್ಯಾತ ಹಾಸ್ಯನಟಹಿರಿಯ ನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ ಖ್ಯಾತ ಹಾಸ್ಯನಟ

  English summary
  Stand up comedian Rohan Joshi apologies on social media and begged to leave his family alone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X