Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೊಡ್ಡ ಬಜೆಟ್ ಸಿನಿಮಾಕ್ಕೆ ಕೈ ಹಾಕಿದ ರಾಜಮೌಳಿ ತಂದೆ
ರಾಜಮೌಳಿ ಭಾರತದ ಯಶಸ್ವಿ ಸಿನಿಮಾ ನಿರ್ದೇಶಕ. 'ಬಾಹುಬಲಿ', 'RRR' ಸಿನಿಮಾಗಳ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದಾರೆ ರಾಜಮೌಳಿ. ಆದರೆ ರಾಜಮೌಳಿಯ ಯಶಸ್ಸಿನ ಹಿಂದೆ ಇರುವುದು ಅವರ ತಂದೆ, ಕಥೆಗಾರ ಕೆವಿ ವಿಜಯೇಂದ್ರ ಪ್ರಸಾದ್.
ಸ್ವತಃ ಸಿನಿಮಾ ನಿರ್ದೇಶಕರಾಗಿದ್ದ ವಿಜಯೇಂದ್ರ ಪ್ರಸಾದ್ ಆ ಬಳಿಕ ಕೇವಲ ಕತೆ ಮತ್ತು ಚಿತ್ರಕತೆ ಬರವಣಿಗೆಗಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ಅದರಲ್ಲಿಯೇ ದೊಡ್ಡ ಹೆಸರು ಗಳಿಸಿದರು, ನೂರಾರು ಹಿಟ್ ಸಿನಿಮಾಗಳ ಹಿಂದೆ ವಿಜಯೇಂದ್ರ ಪ್ರಸಾದ್ ಕತೆಯ ಕೊಡುಗೆ ಇದೆ.
ರಾಜಮೌಳಿ
ಬತ್ತಳಿಕೆಯಲ್ಲಿ
ಎರಡು
ಐಡಿಯಾ:
ಮಹೇಶ್
ಬಾಬು
ಆಯ್ಕೆ
ಯಾವುದು?
ಇದೀಗ ವಿಜಯೇಂದ್ರ ಪ್ರಸಾದ್ ದೊಡ್ಡ ಬಜೆಟ್ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ. ಮಣಿರತ್ನಂಗೆ ಸಹಾಯಕ ನಿರ್ದೇಶಕನಾಗಿದ್ದ ಬಳಿಕ ಸ್ವತಂತ್ರ್ಯ ನಿರ್ದೇಶಕನಾಗಿ ಕೆಲವು ಒಳ್ಳೆಯ ಹಿಂದಿ ಸಿನಿಮಾಗಳನ್ನು ನೀಡಿರುವ ಬಾಲಿವುಡ್‌ನ ಶಾಹದ್ ಅಲಿ ಜೊತೆ ಕೆವಿ ವಿಜಯೇಂದ್ರ ಪ್ರಸಾದ್ ಕೈ ಜೋಡಿಸಿದ್ದಾರೆ.
'ಬಂಟಿ ಔರ್ ಬಬ್ಲಿ', 'ಸೂರ್ಮಾ', 'ಓಕೆ ಜಾನು' 'ಜೂಮ್ ಬರಾಬರ್ ಜೂಮ್' ಇನ್ನೂ ಕೆಲವು ಸಿನಿಮಾಗಳನ್ನು ನೀಡಿರುವ ಶಾಹದ್ ಅಲಿ, ಮೊದಲಿನಿಂದಲೂ ವಿಜಯೇಂದ್ರ ಪ್ರಸಾದ್ ಕತೆಗಳ ಬಗ್ಗೆ ಒಲವಿಟ್ಟುಕೊಂಡಿದ್ದವರು. 'RRR' ಬಳಿಕ ವಿಜಯೇಂದ್ರ ಪ್ರಸಾದ್ ಅನ್ನು ಸಂಪರ್ಕಿಸಿರುವ ಶಾಹದ್ ತಮಗಾಗಿ ಐತಿಹಾಸಿಕ ಕತೆಯನ್ನು, ಚಿತ್ರಕತೆಯನ್ನು ಬರೆದುಕೊಡುವಂತೆ ಕೇಳಿದ್ದಾರೆ.

ಭಾರಿ ಬಜೆಟ್ ಸಿನಿಮಾ ಆಗಿರಲಿದೆ
ಚರ್ಚೆ ನಡೆಸಿರುವ ಶಾಹದ್ ಹಾಗೂ ವಿಜಯೇಂದ್ರ ಪ್ರಸಾದ್ ಕತೆಯೊಂದನ್ನು ಅಂತಿಮಗೊಳಿಸಿ, ಅದರ ಮೇಲೆ ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕತೆಯನ್ನು ಇವರಿಬ್ಬರೇ ರಚಿಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆವ ಪ್ರೇಮಕತೆ ಇದಾಗಿರಲಿದ್ದು, ಭಾರಿ ಬಜೆಟ್‌ನ ಸಿನಿಮಾ ಇದಾಗಿರಲಿದೆ. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ಈ ಭಾರಿ ಬಜೆಟ್‌ನ ಸಿನಿಮಾಕ್ಕೆ ಬಂಡವಾಳ ಹೂಡಲಿದೆ.

ಕತೆ ಬರೆಯುತ್ತಿರುವುದು ನಿಜ: ವಿಜಯೇಂದ್ರ ಪ್ರಸಾದ್
ಶಾಹದ್ ಅಲಿಗಾಗಿ ಕತೆ, ಚಿತ್ರಕತೆ ಬರೆಯುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯೇಂದ್ರ ಪ್ರಸಾದ್, ''ಶಾಹಿದ್ ಅಲಿಗಾಗಿ ಕತೆ ಬರೆಯುತ್ತಿರುವುದು ನಿಜವೇ. ಕತೆ ಇನ್ನು ನಾಲ್ಕು ತಿಂಗಳಲ್ಲಿ ಮುಗಿಯಲಿದೆ. ದೊಡ್ಡ ಬಜೆಟ್ ಬೇಡುವ, ಐತಿಹಾಸಿಕ ಕತೆಯನ್ನು ಬರೆಯುತ್ತಿದ್ದೇನೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶಾಹದ್ ಅಲಿ ಅವರೇ ನೀಡಲಿದ್ದಾರೆ'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ಮುಂದಿನ ಸಿನಿಮಾ ಬಗ್ಗೆ ಯೋಚಿಸಿಲ್ಲ: ಶಾಹದ್ ಅಲಿ
ಆದರೆ ಈ ಬಗ್ಗೆ ಮಾಹಿತಿ ಬಿಟ್ಟುಕೊಡಲು ನಿರಾಕರಿಸಿರುವ ಶಾಹದ್ ಅಲಿ, ''ಪ್ರಸ್ತತ ನಾನು 'ಮಿಸ್ಟರ್ ಮಮ್ಮಿ' ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯದಲ್ಲಿ ನಿರತನಾಗಿದ್ದೇನೆ. ಅದು ಮುಗಿಯುವವರೆಗೆ ಬೇರೆ ಯಾವುದೇ ಸಿನಿಮಾ ಬಗ್ಗೆ ಯೋಚನೆ ಮಾಡುವುದಿಲ್ಲ. ಐತಿಹಾಸಿಕ ಸಿನಿಮಾ ನನ್ನ ಸ್ಟೈಲ್ ಅಲ್ಲ. ಆದರೆ ನನಗೆ ವಿಜಯೇಂದ್ರ ಪ್ರಸಾದ್ ಬಗ್ಗೆ ಅವರ ಕೆಲಸದ ಬಗ್ಗೆ ಅಪಾರ ಗೌರವವಿದೆ'' ಎಂದಿದ್ದಾರೆ.

ಸಿನಿಮಾ ನಿರ್ದೇಶನ ಮಾಡಲಿದ್ದಾರೆ ವಿಜಯೇಂದ್ರ ಪ್ರಸಾದ್
ವಿಜಯೇಂದ್ರ ಪ್ರಸಾದ್ ದೇಶದ ಬಹಳ ಬ್ಯುಸಿ ಹಾಗೂ ಯಶಸ್ವಿ ಸಿನಿಮಾ ಕತೆಗಾರ. ರಾಜಮೌಳಿ ನಿರ್ದೇಶಿಸಿರುವ ಬಹುತೇಕ ಎಲ್ಲ ಸಿನಿಮಾಗಳಿಗೂ ಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್. ಬೇರೆ ನಿರ್ದೇಶಕರಿಗೂ ಕತೆಗಳನ್ನು ಬರೆದುಕೊಟ್ಟಿದ್ದಾರೆ ವಿಜಯೇಂದ್ರ ಪ್ರಸಾದ್. ಕತೆ ಬರೆಯುವ ಜೊತೆಗೆ ಅವರೇ ಸಿನಿಮಾ ನಿರ್ದೇಶನ ಮಾಡುವ ಬಗ್ಗೆಯೂ ಆಲೋಚಿಸಿದ್ದು, ಸೀತಾ ಮಾತೆಯ ಕುರಿತಾಗಿ 'ಸೀತಾ' ಹೆಸರಿನ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ಕರೀನಾ ಕಪೂರ್ ಅನ್ನು ಸಂಪರ್ಕಿಸಲಾಯಿತಾದರೂ ಆಕೆ ಸಂಭಾವನೆ ಹೆಚ್ಚು ಕೇಳಿದ ಕಾರಣ ಅವರನ್ನು ಕೈಬಿಟ್ಟು ಈಗ ಕಂಗನಾ ರನೌತ್ ಅವರನ್ನು ಪಾತ್ರಕ್ಕೆ ಅಂತಿಮಗೊಳಿಸಲಾಗಿದೆ.