For Quick Alerts
  ALLOW NOTIFICATIONS  
  For Daily Alerts

  ರಾಜೀವ್ ಕಪೂರ್ ಜೊತೆಗೆ ಕೆಲಸ ಮಾಡಿದ ದಿನಗಳ ನೆನೆದ ನಟಿ ಸುಮನಾ ರಂಗನಾಥ್

  |

  ಕಪೂರ್ ವಂಶದ ಮತ್ತೊಂದು ಹಿರಿಯ ಸ್ಥಂಭ ಉರುಳಿದೆ. ರಾಜೀವ್ ಕಪೂರ್ ಇಂದು ನಿಧನರಾಗಿದ್ದಾರೆ. ಬಾಲಿವುಡ್‌ ನ ಶೋ ಮ್ಯಾನ್ ರಾಜ್ ಕಪೂರ್ ಮೂವರು ಗಂಡುಮಕ್ಕಳಲ್ಲಿ ರಾಜೀವ್ ಸಹ ಒಬ್ಬರು.

  ರಣದೀರ್ ಕಪೂರ್, ರಿಶಿ ಕಪೂರ್, ಅವರುಗಳ ಸಹೋದರ ರಾಜೀವ್ ಕಪೂರ್ ಸ್ವತಃ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ನಿರ್ಮಾಣ ಸಹ ಮಾಡಿದ್ದಾರೆ. ಅವರು ನಿರ್ಮಾಣ ಮಾಡಿದ ಮೊದಲ ಸಿನಿಮಾ 'ಆ ಅಬ್ ಲೌಟ್ ಚಲೇ' ಸಿನಿಮಾದಲ್ಲಿ ಕನ್ನಡತಿ ಸುಮನಾ ರಂಗನಾಥ್ ಸಹ ನಟಿಸಿದ್ದರು.

  1999 ರಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ, ರಾಜೇಶ್ ಖನ್ನಾ, ಐಶ್ವರ್ಯಾ ರೈ ಸಹ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದ ಸುಮನಾ ರಂಗನಾಥ್, ರಾಜೀವ್ ಕಪೂರ್ ಬಗ್ಗೆ ಕೆಲವು ನೆನಪುಗಳನ್ನು ಮೆಲಕು ಹಾಕಿದ್ದಾರೆ.

  ಅಮೆರಿಕದಲ್ಲಿ ಚಿತ್ರೀಕರಿಸಿದ್ದು ಫ್ಯಾಮಿಲಿ ಟ್ರಿಪ್‌ನಂತೆ ಇತ್ತು: ಸುಮನಾ

  ಅಮೆರಿಕದಲ್ಲಿ ಚಿತ್ರೀಕರಿಸಿದ್ದು ಫ್ಯಾಮಿಲಿ ಟ್ರಿಪ್‌ನಂತೆ ಇತ್ತು: ಸುಮನಾ

  'ಸಿನಿಮಾದ ಪೂರ್ಣ ಚಿತ್ರೀಕರಣದ ವೇಳೆ ನಿರ್ಮಾಪಕರಾಗಿದ್ದ ರಾಜೀವ್ ಕಪೂರ್ ಚಿತ್ರತಂಡದ ಜೊತೆಗೇ ಇರುತ್ತಿದ್ದರು. ಅಮೆರಿಕದಲ್ಲಿ ಚಿತ್ರೀಕರಣ ಮಾಡುವಾಗಲೂ ಅವರು ಚಿತ್ರತಂಡದೊಂದಿಗೆ ಇದ್ದರು. ಅವರಿದ್ದರೆ ಸೆಟ್‌ನಲ್ಲಿ ಒಳ್ಳೆಯ ಉತ್ಸಾಹಿ ವಾತಾವರಣ ಇರುತ್ತಿತ್ತು. ಅಮೆರಿಕದಲ್ಲಿ ಚಿತ್ರೀಕರಣ ಮಾಡಿದ್ದು, ಕುಟುಂಬವೆಲ್ಲಾ ಟ್ರಿಪ್‌ಗೆ ಹೋದಂತೆ ಇತ್ತು' ಎಂದಿದ್ದಾರೆ ಸುಮನಾ ರಂಗನಾಥ್.

  ಸೆಟ್‌ನಲ್ಲಿ ಎಲ್ಲರನ್ನೂ ನಗಿಸುತ್ತಿದ್ದರು ರಾಜೀವ್: ಸುಮನಾ

  ಸೆಟ್‌ನಲ್ಲಿ ಎಲ್ಲರನ್ನೂ ನಗಿಸುತ್ತಿದ್ದರು ರಾಜೀವ್: ಸುಮನಾ

  'ಅವರೊಬ್ಬ ಉತ್ಸಾಹಿ ವ್ಯಕ್ತಿಯಾಗಿದ್ದರು. ಸದಾ ತಮಾಷೆ ಮಾಡುತ್ತಾ ಇರುತ್ತಿದ್ದರು. ಇಡೀಯ ಸೆಟ್‌ನಲ್ಲಿದ್ದವರೆಲ್ಲಾ ಒಟ್ಟಿಗೆ ಊಟ ಮಾಡುತ್ತಿದ್ದೆವು. ಆಗಲೂ ಅವರು ಏನಾದರೂ ಜೋಕ್ ಹೇಳಿ ಎಲ್ಲರನ್ನೂ ನಗಿಸುತ್ತಿದ್ದರು' ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ ಸುಮನಾ ರಂಗನಾಥ್.

  ಬಹುವರ್ಷಗಳ ನಂತರ ಮತ್ತೆ ಅವರನ್ನು ಭೇಟಿಯಾಗಿದ್ದೆ: ಸುಮನಾ

  ಬಹುವರ್ಷಗಳ ನಂತರ ಮತ್ತೆ ಅವರನ್ನು ಭೇಟಿಯಾಗಿದ್ದೆ: ಸುಮನಾ

  'ಬಹು ವರ್ಷಗಳ ನಂತರ ಒಮ್ಮೆ ಅವರನ್ನು ಯಾವುದೋ ಕಾರ್ಯಕ್ರಮದಲ್ಲೋ ಅಥವಾ ಜಿಮ್ ನಲ್ಲೋ ಭೇಟಿ ಆಗಿದ್ದೆ. ಆಗ ಮತ್ತೆ ನಾವು 'ಆ ಅಬ್ ಲೌಟ್ ಚಲೇ' ಸಿನಿಮಾದ ಘಟನೆಗಳನ್ನು ನೆನಪು ಮಾಡಿಕೊಂಡು ನಕ್ಕೆವು. ಕಪೂರ್ ವಂಶವನ್ನು ಬೆಳಗಿದವರು ಅವರು' ಎಂದಿದ್ದಾರೆ ಸುಮನಾ ರಂಗನಾಥ್.

  ಟಾಪ್ ಟಾಪ್ ಟಾಪ್ ಟಕ್ಕರ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ | Top Tucker /Filmibeat kannada
  ರಿಶಿ ಕಪೂರ್ ನಿರ್ದೇಶಿಸಿದ್ದ ಸಿನಿಮಾ

  ರಿಶಿ ಕಪೂರ್ ನಿರ್ದೇಶಿಸಿದ್ದ ಸಿನಿಮಾ

  'ಆ ಅಬ್ ಲೌಟ್ ಚಲೇ' ಸಿನಿಮಾವನ್ನು ರಿಶಿ ಕಪೂರ್ ನಿರ್ದೇಶಿಸಿದ್ದರು. ಸಿನಿಮಾವನ್ನು ರಣದೀರ್ ಕಪೂರ್, ರಾಜೀವ್ ಕಪೂರ್, ರಿಶಿ ಕಪೂರ್ ಒಟ್ಟಾಗಿ ನಿರ್ಮಾಣ ಮಾಡಿದ್ದರು. ಸಿನಿಮಾದಲ್ಲಿ ಸುಮನಾ 'ಲೋವಿಲೀನ್' ಹೆಸರಿನ ಪಾತ್ರ ಮಾಡಿದ್ದರು.

  English summary
  Actress Suman Ranganath talks about late actor, producer Rajiv Kapoor. She said he is a fun loving person.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X