For Quick Alerts
  ALLOW NOTIFICATIONS  
  For Daily Alerts

  ರೈತ ಪ್ರತಿಭಟನೆ ಬಗ್ಗೆ ಟ್ವೀಟ್‌: ಸನ್ನಿ ಡಿಯೋಲ್‌ಗೆ ವೈ ಶ್ರೇಣಿ ಭದ್ರತೆ

  |

  ಕೇಂದ್ರ ಸರ್ಕಾರದ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆ ದಿನೇ-ದಿನೇ ಹೆಚ್ಚಾಗುತ್ತಿದೆ, ರೈತರ ಪರವಾಗಿ ಕೆಲವು ಬಾಲಿವುಡ್ ನಟರು ಸಹ ಬೆಂಬಲ ಸೂಚಿಸಿದ್ದಾರೆ. ಕೆಲವರು ಸರ್ಕಾರದ ಪರ ಬೆಂಬಲ ಸೂಚಿಸಿದ್ದಾರೆ.

  ಈ ನಡುವೆ ನಟ, ಬಿಜೆಪಿ ಸಂಸದರೂ ಆಗಿರುವ ಸನ್ನಿ ಡಿಯೋಲ್ ತಮ್ಮ ಬಿಜೆಪಿ ಸರ್ಕಾರದ ಪರ ವಹಿಸಿ ಮಾತನಾಡಿದ್ದಾರೆ.

  ಕೇಂದ್ರದ ವಿರುದ್ಧ ಪ್ರತಿಭಟನೆಯಲ್ಲಿ ಪಂಜಾಬ್ ರೈತರು ಮುಂಚೂಣಿಯಲ್ಲಿದ್ದು, ಪಂಜಾಬ್ ನವರೇ ಆದ ಸನ್ನಿ ಡಿಯೋಲ್ ಪಂಜಾಬ್ ರೈತರ ಪರ ನಿಲ್ಲದೇ ಕೇಂದ್ರ ಸರ್ಕಾರದ ಪರ ನಿಂತಿರುವುದು ರೈತರನ್ನು ಕೆರಳಿಸಿದ್ದು, ಕೆಲವು ರೈತ ಮುಖಂಡರು ಸನ್ನಿ ಡಿಯೋಲ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ.

  ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿದ್ದ ಸಂಸದ ಸನ್ನಿ ಡಿಯೋಲ್, 'ಇದು ರೈತರು ಮತ್ತು ಭಾರತ ಸರ್ಕಾರದ ನಡುವೆ ನಡೆಯುತ್ತಿರುವ ವಿಷಯ, ದಯವಿಟ್ಟು ಇನ್ನಾರೂ ಇದರಲ್ಲಿ ಮಧ್ಯಪ್ರವೇಶ ಮಾಡಬೇಡಿ. ರೈತ ಪ್ರತಿಭಟನೆಯಿಂದ ಲಾಭ ಗಳಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ನಾನು ನನ್ನ ಪಕ್ಷದ ಪರವಾಗಿದ್ದೇನೆ. ನಮ್ಮ ಸರ್ಕಾರವು ಸದಾ ರೈತರ ಪ್ರಗತಿಯ ಬಗ್ಗೆ ಆಲೋಚಿಸಿದೆ, ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ನಮ್ಮ ರೈತರ ಜೀವನ ಚೆನ್ನಾಗಿರಬೇಕು ಎಂಬುದೇ ನನ್ನ ಆಶಯ' ಎಂದಿದ್ದಾರೆ ಸನ್ನಿ ಡಿಯೋಲ್.

  ಸನ್ನಿ ಡಿಯೋಲ್ ಅವರು ಈ ಹೇಳಿಕೆ ನೀಡಿದ ಬಳಿಕ, ಸರ್ಕಾರವು ಅವರಿಗೆ ವೈ ಶ್ರೇಣಿ ಭದ್ರತೆ ನೀಡಿದೆ. ಇಬ್ಬರು ಕಮ್ಯಾಂಡೊಗಳು, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 11 ಮಂದಿ ಸನ್ನಿ ಡಿಯೋಲ್ ಗೆ ಭದ್ರತೆ ಒದಗಿಸಲಿದ್ದಾರೆ.

  Recommended Video

  'BHAGEERA' Motion Poster | Srii Murali | Prashanth Neel | Dr Suri | Hombale Films |Filmibeat Kannada

  ಸಾಕಷ್ಟು ಪಂಜಾಬಿ ನಟರು, ಗಾಯಕರು ರೈತರ ಹೋರಾಟಕ್ಕೆ ಬಹಿರಂಗ ಬೆಂಬಲ ನೀಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಸಹ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ನಟಿ ಕಂಗನಾ ರಣೌತ್, ರೈತರ ಹೋರಾಟವನ್ನು ನಕಲಿ ಎಂದು ಕರೆದು, ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ.

  English summary
  Actor and BJP MP Sunny Deol gets Y category security after he tweeted about farmers protest.
  Thursday, December 17, 2020, 16:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X