»   » ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ!

ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ!

Posted By:
Subscribe to Filmibeat Kannada
ಸನ್ನಿಲಿಯೋನ್ ಡೇನಿಯಲ್ ವೆಬರ್ ಬೆತ್ತಲೆ ಫೋಟೋ ವೈರಲ್ | FIlmibeat Kannada

ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬರ್ ಇಬ್ಬರು ಜೊತೆಯಾಗಿ ಫೋಟೋ ಶೂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. 'ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್'(ಪೇಟಾ)ದ ಅಭಿಯಾನಕ್ಕಾಗಿ ನಟಿ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಬೆತ್ತಲಾಗಿ ಫೋಟೋ ಶೂಟ್ ಗೆ ಪೋಸ್ ನೀಡಿದ್ದಾರೆ.

ಪ್ರಾಣಿಗಳ ಮೇಲೆ ನಡೆಯುತ್ತಿರುವ ಕ್ರೂರತೆ ವಿರುದ್ದ ಜಾಗೃತಿ ಮೂಡಿಸುವ ಅಭಿಯಾನಕ್ಕಾಗಿ ಈ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಲಾಗಿದೆ. ಸನ್ನಿ ಲಿಯೋನ್ (ಪೇಟಾ)'ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್'ನ ಈ ವರ್ಷದ ರಾಯಭಾರಿಯಾಗಿದ್ದಾರೆ. ನಿಮ್ಮ ಚರ್ಮ ನಿಮಗೆ ಇರಲಿ, ಪ್ರಾಣಿಗಳ ಚರ್ಮ ಅವರಿಗೇ ಇರಲಿ ಎನ್ನುವ ಘೋಷಣೆ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಸನ್ನಿಲಿಯೋನ್.

Sunny Leone and Daniel Weber nude photoshoot

ಪಾಣಿಗಳನ್ನು ಕೊಂದು ಅವುಗಳ ಚರ್ಮದಿಂದ ಉಡುಪುಗಳನ್ನ ಉತ್ಪಾದನೆ ಮಾಡುವುದನ್ನು ತಡೆಯಲು ಈ ರೀತಿಯ ಅಭಿಯಾನವನ್ನು ಪೇಟಾ ಪ್ರಾರಂಭ ಮಾಡಿದೆ. 'Ink Not Mink' ಅನ್ನೋ ಟ್ಯಾಗ್ ಲೈನ್ ಬಳಸಿ ಪ್ರಚಾರ ಪ್ರಾರಂಭವಾಗಿದೆ. ಈ ಹಿಂದೆ ಸಾಕಷ್ಟು ಬಾಲಿವುಡ್ ಕಲಾವಿದರು ಪೇಟಾ ಸಂಸ್ಥೆಗೆ ರಾಯಭಾರಿಗಳಾಗಿ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದರು . ಇವರೆಲ್ಲರೂ ಮೀರಿಸಿ ಸನ್ನಿ ಲಿಯೋನ್ ಹಾಗೂ ಅವರ ಪತಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿ ವಿಭಿನ್ನವಾಗಿ ಪ್ರಾಣಿ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಸದ್ಯ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಬೆತ್ತಾಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Bollywood actress Sunny Leone and her husband Daniel Weber promote animal free fashion for PETA(People for the Ethical Treatment of Animals)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada