»   » ಭಾರತದಲ್ಲಿಯೇ ಅತಿ ಹೆಚ್ಚು 'ಸರ್ಚ್' ಮಾಡಿದ ನಟಿಯರಲ್ಲಿ ಸನ್ನಿಲಿಯೋನ್ ನಂ.1!

ಭಾರತದಲ್ಲಿಯೇ ಅತಿ ಹೆಚ್ಚು 'ಸರ್ಚ್' ಮಾಡಿದ ನಟಿಯರಲ್ಲಿ ಸನ್ನಿಲಿಯೋನ್ ನಂ.1!

Posted By:
Subscribe to Filmibeat Kannada

ಸನ್ನಿ ಲಿಯೋನ್ ಅದೇನ್ ಮೋಡಿ ಮಾಡಿದ್ದಾರೋ ಏನೋ. ಆಕೆಯ ಗುಂಗಿನಿಂದ ಹುಡುಗರು ಹೊರ ಬರುವ ಹಾಗೆ ಕಾಣುತ್ತಿಲ್ಲ. ಬಾಲಿವುಡ್ ಅಂಗಳಕ್ಕೆ ಸನ್ನಿ ಬಂದು 5 ವರ್ಷ ಆದರೂ ಆಕೆಯ ಡಿಮ್ಯಾಂಡ್ ಕಡಿಮೆ ಆಗುತ್ತಿಲ್ಲ.

ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ!

ಸನ್ನಿ ಲಿಯೋನ್ ಹವಾ ಯಾವ ಮಟ್ಟಿಗೆ ಇದೆ ಎಂಬುದು ಮತ್ತೆ ಸಾಬೀತು ಆಗಿದೆ. ದೇಶದ ಪ್ರತಿಷ್ಠಿತ ಆನ್ ಲೈನ್ ಸರ್ಚ್ ಇಂಜಿನ್ ಸಂಸ್ಥೆ ಆದ ಯಾಹೂ ಇಂಡಿಯಾ 2017ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಫೀಮೇಲ್ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಟಿ ಸನ್ನಿ ಲಿಯೋನ್ ಇದ್ದಾರೆ.

Sunny Leone become the Most searched female celebrities 2017 in Yahoo.

ಕಳೆದ ವರ್ಷವೂ ಭಾರತದ ಮೋಸ್ಟ್ ಸರ್ಚ್ಡ್ ಫೀಮೇಲ್ ಸೆಲೆಬ್ರಿಟಿಯಾಗಿದ್ದ ಸನ್ನಿ ಈ ವರ್ಷವೂ ಅದನ್ನು ಮುಂದುವರೆಸಿದ್ದಾರೆ. ಸನ್ನಿ ಲಿಯೋನ್ ನಂತರದ ಸ್ಥಾನವನ್ನು ಅಂದರೆ 2ನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ, 3ನೇ ಸ್ಥಾನದಲ್ಲಿ ಐಶ್ವರ್ಯ ರೈ, 4ನೇ ಸ್ಥಾನದಲ್ಲಿ ಕತ್ರೀನಾ ಕೈಫ್, 5ನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ ಪಡೆದಿದ್ದಾರೆ.

ಅಂದಹಾಗೆ, ಈ ವರ್ಷದ ಜುಲೈ ನಲ್ಲಿ ಸನ್ನಿ ಲಿಯೋನ್ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡಿದ್ದರು. ಅದರೊಂದಿಗೆ ಇತ್ತೀಚಿಗಷ್ಟೆ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬರ್ ಇಬ್ಬರೂ ಜೊತೆಯಾಗಿ ಫೋಟೋ ಶೂಟ್ ಒಂದರಲ್ಲಿ ಕಾಣಿಸಿಕೊಂಡಿದ್ದರು. 'ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್'(ಪೇಟಾ)ದ ಅಭಿಯಾನಕ್ಕಾಗಿ ನಟಿ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಬೆತ್ತಲಾಗಿ ಫೋಟೋ ಶೂಟ್ ಗೆ ಪೋಸ್ ನೀಡಿದ್ದರು.

English summary
Sunny Leone tops Yahoo India list of Most searched female celebrities 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada