»   » ಸನ್ನಿ ಲಿಯೋನ್ 'ಜಿಸ್ಮ್ 2' ಪ್ರೇಕ್ಷಕರಿಗೇಕೆ ಇಷ್ಟವಾಗಿಲ್ಲ!

ಸನ್ನಿ ಲಿಯೋನ್ 'ಜಿಸ್ಮ್ 2' ಪ್ರೇಕ್ಷಕರಿಗೇಕೆ ಇಷ್ಟವಾಗಿಲ್ಲ!

Posted By:
Subscribe to Filmibeat Kannada

ಪೋಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ನಟಿಸಿರುವ ಬಾಲಿವುಡ್ ಚಿತ್ರ 'ಜಿಸ್ಮ್ 2', 03 ಆಗಸ್ಟ್ 2012 ದೇಶಾದ್ಯಂತ ಬಿಡುಗಡೆಯಾಗಿದೆ. ಸೆಟ್ಟೇರಿದ ದಿನದಿಂದಲೂ ಸನ್ನಿ ಮೇನಿಯಾ ದೇಶಾದ್ಯಂತ ಹಬ್ಬಿತ್ತು, ಚಿತ್ರಕ್ಕೆ ಭಾರಿ ಹೈಪ್ ಕ್ರಿಯೇಟ್ ಆಗಿತ್ತು. ಆದರೆ ಬಿಡುಗಡೆ ಬಳಿಕ ಚಿತ್ರ ಅಂದುಕೊಂಡಷ್ಟು ಪ್ರತಿಕ್ರಿಯೆ ಪ್ರೇಕ್ಷಕರ ಕಡೆಯಿಂದ ಜಿಸ್ಮ್ 2 ಚಿತ್ರಕ್ಕೆ ಲಭಿಸಲಿಲ್ಲ. ಕಾರಣವೇನು?

ಇದಕ್ಕೆ ಉತ್ತರ ಸ್ಪಷ್ಟವಾಗಿ ಹೇಳಲಾಗದಿದ್ದರೂ ಬಾಲಿವುಡ್ ಪಂಡಿತರು ಹಾಗೂ ಗಾಂಧಿನಗರದ ಕೆಲವರ ಪ್ರಕಾರ ಅದಕ್ಕೆ ಕಾರಣ ಸನ್ನಿ ಲಿಯೋನ್. ಅಂದರೆ, ಪ್ರೇಕ್ಷಕರು ಸನ್ನಿ ಲಿಯೋನ್ ಅವರನ್ನು ಈ ರೀತಿಯಲ್ಲಿ ನೋಡಲು ಇಷ್ಟಪಟ್ಟಿರಲಿಲ್ಲ. ಸನ್ನಿ ಲಿಯೋನ್ ಚಿತ್ರವೆಂದರೆ ಅದು ಪಡ್ಡೆಗಳ ಪಾಲಿನ ಮೃಷ್ಟಾನ್ನ ಎಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ! ಸನ್ನಿ ಲಿಯೋನ್ ಬಾಲಿವುಡ್ ನಟಿಯರಂತೆ ಕಾಣಿಸಿಕೊಂಡಿದ್ದಾರೆ.

ಪೂಜಾ ಭಟ್ ನಿರ್ದೇಶನದ 'ಜಿಸ್ಮ್-2' ಕ್ಲಾಸ್ ಚಿತ್ರದಂತಿದೆ. ಚಿತ್ರದ ಸಬ್ಜೆಕ್ಟ್ ಗೆ ಎಷ್ಟು ಬೇಕೋ ಅಷ್ಟು ಮಾತ್ರ 'ಎಕ್ಸ್ ಪೋಸಿಂಗ್' ಅನ್ನು ಸನ್ನಿಯಿಂದ ಪಡೆದಿದ್ದಾರೆ ಪೂಜಾ ಭಟ್. ನೀಲಿ ಚಿತ್ರತಾರೆಯನ್ನು ಬಳಸಿಕೊಂಡು 'ನೀಲಿ ಚಿತ್ರ' ಮಾಡುವ ಬದಲು ಬಾಲಿವುಡ್ ಚಿತ್ರ ಮಾಡಿದ್ದಾರೆ. ತಮ್ಮ ಚಿತ್ರದಲ್ಲಿ ವಯಸ್ಕರ ಚಿತ್ರತಾರೆಯನ್ನು ಬಳಸಿಕೊಂಡಿದ್ದರೂ ಚಿತ್ರವನ್ನು ತಮ್ಮಿಷ್ಟದಂತೆ ಕ್ಲಾಸ್ ಆಗಿಸಿದ್ದಾರೆ.

ಇದೇ ಪಡ್ಡೆಗಳ ಪಾಲಿಗೆ ಸಮಸ್ಯೆ ಎನಿಸಿದೆ. ಈ ರೀತಿಯ ಸಾಕಷ್ಟು ಚಿತ್ರಗಳನ್ನು ಈಗಾಗಲೇ ನೋಡಿರುವ ಪಡ್ಡೆಗಳಿಗೆ ಇದು ಹತ್ತರ ಜೊತೆ ಹನ್ನೊಂದು ಎಂಬಂತಾಗಿದೆ. ಹೀಗಾಗಿ ಪಡ್ಡೆಗಳ ಬಾಯಿಂದ ಬರಲಿರುವ ಪ್ರೇಕ್ಷಕರ ಕಿವಿಗೆ ಚಿತ್ರದ ಬಗ್ಗೆ ನೆಗೆಟಿವ್ ಪ್ರತಿಕ್ರಿಯೆ ಹರಡಿ ಚಿತ್ರವನ್ನು ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದ ಕೆಲವರು ಚಿತ್ರಮಂದಿರದತ್ತ ಸುಳಿಯಲೇ ಇಲ್ಲ.

ಸ್ವತಃ ಸನ್ನಿ ಲಿಯೋನ್ ತಮ್ಮ ನಟನೆಯ ಜಿಸ್ಮ್ 2 ನೋಡಿ ಗಳಗಳನೇ ಅತ್ತುಬಿಟ್ಟದ್ದರಂತೆ. ಕಣ್ಣೀರು ಕೋಡಿ ಹರಿಸಿರುವ ಸನ್ನಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಗಿ, "ನಾನು ನನ್ನ ಕುಟುಂಬದ ಜೊತೆ ನೋಡಬಹುದಾದ ಚಿತ್ರ ಇದೊಂದೇ. ಅದಕ್ಕೆ ಈ ಸಂತೋಷದ ಕಣ್ಣೀರು" ಎಂದಿದ್ದರು ಸನ್ನಿ ಲಿಯೋನ್. ಆಗಲೇ ಸಾಕಷ್ಟು ಜನರಿಗೆ ಚಿತ್ರ ಸನ್ನಿ ಲಿಯೋನ್ ಚಿತ್ರವಲ್ಲ. ಕ್ಲಾಸ್ ಆಗಿದೆ ಎಂಬ ಅನುಮಾನ ಮೂಡಿತ್ತು, ಅದೀಗ ನಿಜವಾಗಿದೆ.

ಸನ್ನಿ ತಮ್ಮ ವೃತ್ತಿಜೀವನದಲ್ಲಿ ಬದಲಾವಣೆ ಬಯಸಿ ವಯಸ್ಕರ ಚಿತ್ರಗಳಿಗಿಂತ ವಿಭಿನ್ನವಾದ ಬಾಲಿವುಡ್ ಚಿತ್ರದಲ್ಲಿ ನಟಿಸಿ ಖುಷಿಪಟ್ಟಿದ್ದರೂ ಸನ್ನಿ ಲಿಯೋನ್ ಅಭಿಮಾನಿಗಳು ಸನ್ನಿಯಲ್ಲಿ ಈ ಬದಲಾವಣೆಯನ್ನು ನಿರೀಕ್ಷಿಸಿರಲಿಲ್ಲ. ಸನ್ನಿಯಲ್ಲಾದ ಚೇಂಜ್ ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಎನ್ನಬಹುದು. ಹೀಗಾಗಿ ಸನ್ನಿ ಚಿತ್ರಕ್ಕೆ ಅಂದುಕೊಂಡಷ್ಟು ಪ್ರತಿಕ್ರಿಯೆ ಮೊದಲೆರಡು ದಿನ ದೊರೆತಿಲ್ಲ. ಮುಂದಿನದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)

English summary
Sunny Leone's most expected Bollywood movie is not getting expected responses for the audience. Various opinions are coming from Bollywood for this. Brief we can say that this is not the one, most of the audience particularly expected from Sunny Leone. 
 
Please Wait while comments are loading...