»   » ಜಿಸ್ಮ್ 2 ನೋಡಿ ಕಣ್ಣೀರ ಕೋಡಿ ಹರಿಸಿದ ಸನ್ನಿ ಲಿಯೋನ್

ಜಿಸ್ಮ್ 2 ನೋಡಿ ಕಣ್ಣೀರ ಕೋಡಿ ಹರಿಸಿದ ಸನ್ನಿ ಲಿಯೋನ್

Posted By:
Subscribe to Filmibeat Kannada

ಪೋಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ನಟಿಸಿರುವ ಬಾಲಿವುಡ್ ಚಿತ್ರ 'ಜಿಸ್ಮ್ 2' ಇಂದು (03 ಆಗಸ್ಟ್ 2012) ಬಿಡುಗಡೆಯಾಗಿದೆ. ದೇಶಾದ್ಯಂತ ಈಗಾಗಲೇ ಹಬ್ಬಿರುವ ಸನ್ನಿ ಮೇನಿಯಾ, ಬಿಡುಗಡೆ ಬಳಿಕ ಇನ್ನೂ ಹೆಚ್ಚಾದಂತಿದೆ. ಪಡ್ಡೆಗಳ ಪಾಲಿಗಂತೂ ಇಂದು 'ಶಿವರಾತ್ರಿ ಜಾಗರಣೆ'ಯೇ ಸರಿ ಎಂಬಂತಾಗಿದೆ. ಸನ್ನಿ ನೋಡಲು ಕಾದಿದ್ದ ಪ್ರೇಕ್ಷಕರು ಚಿತ್ರಮಂದಿರದತ್ತ ದೌಡಾಯಿಸುತ್ತಿದ್ದಾರೆ.

ಅದಿರಲಿ, ಸ್ವತಃ ಸನ್ನಿ ಲಿಯೋನ್ ತಮ್ಮ ನಟನೆಯ ಜಿಸ್ಮ್ 2 ನೋಡಿ ಗಳಗಳನೇ ಅತ್ತುಬಿಟ್ಟರಂತೆ. ಚಿತ್ರ ನೋಡಿ ಕಣ್ಣೀರು ಕೋಡಿ ಹರಿಸಿರುವ ಸನ್ನಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಗಿ, "ನಾನು ನನ್ನ ಕುಟುಂಬದ ಜೊತೆ ನೋಡಬಹುದಾದ ಚಿತ್ರ ಇದೊಂದೇ. ಅದಕ್ಕೆ ಈ ಸಂತೋಷದ ಕಣ್ಣೀರು" ಎಂದಿದ್ದಾರಂತೆ ಸನ್ನಿ ಲಿಯೋನ್. ಪಾಪ, ಅವರನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂಬುದು ಬಾಲಿವುಡ್ ಅಂಗಳದ ಮಾತು.

ಈ ಬಗ್ಗೆ ಸಂದರ್ಶನವೊಂದರಲ್ಲಿ, "ನನ್ನ ನಟನೆಯ 'ಜಿಸ್ಮ್ 2' ಬಿಡುಗಡೆಯಾಗುತ್ತಿರುವ ಈ ಕಾಲ, ನನಗೆ ಮರೆಯಲಾಗದ ಅಪೂರ್ವ ಕ್ಷಣ. ನನ್ನ ಬಗ್ಗೆ ಜನರು ಏನೆನ್ನಬಹುದು ಎಂಬುದನ್ನು ಕಲ್ಪಿಸಿಕೊಂಡು ನಾನು ಅಳುತ್ತಿಲ್ಲ. ಬದಲಿಗೆ, ಇಷ್ಟು ಕಾಲಗಳ ವೃತ್ತಿಜೀವನದಲ್ಲಿ ನಾನು ನನ್ನ ಕುಟುಂಬದ ಜೊತೆ ನೋಡಬಹುದಾದ ಚಿತ್ರ ಇದೊಂದೇ ಎಂಬ ಕಾರಣಕ್ಕೆ ನನಗೆ ಸಂತೋಷ ಹೆಚ್ಚಿ ಬಂದ ಕಣ್ಣೀರು ಇದು" ಎಂದು ತಮ್ಮ ಅಳುವಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ನನ್ನ ಗಂಡ ಕೂಡ ಈ ಚಿತ್ರವನ್ನು ನನ್ನೊಂದಿಗೆ ನೋಡಿದ್ದಾರೆ. ಅಷ್ಟೇ ಅಲ್ಲ, ನಾನು ನನ್ನ ಅಪ್ಪ-ಅಮ್ಮನ ಬಳಿ ನನ್ನ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದಿದ್ದೇನೆ" ಎಂದು ಹೇಳುವ ಮೂಲಕ ತಮ್ಮ ಮನದಾಳದಲ್ಲಿ ಯಾವ ಬಯಕೆ ಇತ್ತು ಎಂಬುದನ್ನು ಸನ್ನಿ ಜಗತ್ತಿನೆದುರು ಹೇಳಿದಂತಾಗಿದೆ. ಮುಂದುವರಿದ ಸನ್ನಿ, "ಇಂದು ನನ್ನ ಚಿತ್ರ ಬಿಡುಗಡೆ ಆಗುತ್ತಿರುವುದಕ್ಕೆ ನಾನು ತುಂಬಾ ಥ್ರಿಲ್ ಆಗಿದ್ದೇನೆ. ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾನೀಗ ಕಾಯುತ್ತಿದ್ದೇನೆ" ಎಂದಿದ್ದಾರೆ.

ಒಟ್ಟಿನಲ್ಲಿ ಸನ್ನಿ ಲಿಯೋನ್ ಎಂಬ ವಯಸ್ಕರ ಚಿತ್ರಗಳ ತಾರೆಯ ಬಾಲಿವುಡ್ ಚಿತ್ರ ಜಿಸ್ಮ್ 2 ಇಂದು ಬಿಡುಗಡೆಯಾಗಿದೆ. ಸನ್ನಿ ನೋಡಲು ಪ್ರೇಕ್ಷಕರಿಗಿರುವಷ್ಟೇ ಕುತೂಹಲ ಪ್ರೇಕ್ಷಕರ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಸ್ವತಃ ಸನ್ನಿಗೂ ಇದೆ. ತಮ್ಮ ಮೊದಲ ಸಿನಿಮಾ ಎಂಬಷ್ಟರ ಮಟ್ಟಿಗೆ ಸನ್ನಿ ಈ ಚಿತ್ರದ ಬಗ್ಗೆ ಗೌರವ ಹೊಂದಿದ್ದಾರೆ. ಇದೀಗ ನೀಲಿ ತಾರೆಗಳಿಗೆಲ್ಲ ಮಾದರಿ ಎನಿಸಿರುವ ಸನ್ನಿ, ಈ ಚಿತ್ರ ಯಶಸ್ವಿಯಾಗಿ ಬಾಲಿವುಡ್ ಆಳಿದರೂ ಆಶ್ಚರ್ಯವಿಲ್ಲ. (ಏಜೆನ್ಸೀಸ್)

English summary
Sunny Leone says that she cried while watching the film as she thinks that Jism 2 is one film she can watch with her family.
 
Please Wait while comments are loading...