»   » ಲೈಟರ್ ಹಿಡಿದು ಟೀ ಮಾಡಲು ಹೋದ ಸನ್ನಿ ಲಿಯೋನ್ ಕಂಡು ಆಡಿಕೊಂಡವರೇ ಹೆಚ್ಚು!

ಲೈಟರ್ ಹಿಡಿದು ಟೀ ಮಾಡಲು ಹೋದ ಸನ್ನಿ ಲಿಯೋನ್ ಕಂಡು ಆಡಿಕೊಂಡವರೇ ಹೆಚ್ಚು!

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣಗಳಲ್ಲಿ ಹೀರೋ-ಹೀರೋಯಿನ್ ಗಳನ್ನ ಸಾಮಾನ್ಯ ಜನತೆ ಲೇವಡಿ ಮಾಡುವುದು, ಕಾಲೆಳೆಯುವುದು ಕಾಮನ್ ಆಗ್ಬಿಟ್ಟಿದೆ. ನಟಿಯರ ಡ್ರೆಸ್ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುವವರೂ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ.

ಹೀಗಿದ್ದರೂ, ಕೆಲ ನಟ-ನಟಿಯರು ಮಾತ್ರ ಕೊಂಚ ಎಚ್ಚರ ವಹಿಸುವುದೇ ಇಲ್ಲ. ಏನೋ ಅಂದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಏನೋ ಪೋಸ್ಟ್ ಮಾಡಿದರೆ, ಅದು ಇನ್ನೇನೋ ಆಗುತ್ತದೆ. ಸದ್ಯ ಸನ್ನಿ ಲಿಯೋನ್ ಗೆ ಆಗಿರುವುದು ಇದೇ.!

ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ಮಾಡಲು ಹೋದ ಸನ್ನಿ ಲಿಯೋನ್ ಹಾಸ್ಯಾಸ್ಪದಕ್ಕೀಡಾಗಿದ್ದಾರೆ.

ಭಾರತದಲ್ಲಿಯೇ ಅತಿ ಹೆಚ್ಚು 'ಸರ್ಚ್' ಮಾಡಿದ ನಟಿಯರಲ್ಲಿ ಸನ್ನಿಲಿಯೋನ್ ನಂ.1!

Sunny Leone gets trolled for making tea

ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಸನ್ನಿ ಲಿಯೋನ್ ಒಂದು ಫೋಟೋ ಪೋಸ್ಟ್ ಮಾಡಿದ್ದರು. ಲೈಟರ್ ಮುಖಾಂತರ ಟೀ ಮಾಡುತ್ತಿರುವ ಸನ್ನಿಯ ಫೋಟೋ ಅದಾಗಿತ್ತು. ''ಲೈಟರ್ ಇಟ್ಟುಕೊಂಡು ಟೀ ಮಾಡಲು ಪ್ರಯತ್ನ ಪಡಬೇಡಿ. ಯಾಕಂದ್ರೆ, ಅದಾಗಲ್ಲ. ನಾನು ಟ್ರೈ ಮಾಡಿದೆ. ಆದ್ರೆ, ವಿಫಲಗೊಂಡೆ'' ಎಂದು ಫೋಟೋ ಸಮೇತ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು ಸನ್ನಿ ಲಿಯೋನ್.

ಕೇವಲ ಲೈಟರ್ ಇಟ್ಟುಕೊಂಡು ಟೀ ಮಾಡಲು ಹೋದ ಸನ್ನಿಯ ಜಾಣತನಕ್ಕೆ ಕೆಲವರು ನಗಾಡಿದ್ರೆ, ಇನ್ನೂ ಕೆಲವರು ಅಪಹಾಸ್ಯ ಮಾಡಿದ್ದಾರೆ. ಮತ್ತಷ್ಟು ಜನ ಸನ್ನಿ ಲಿಯೋನ್ ಫೋಟೋ ಕಂಡು ಬೆರಗಾಗಿದ್ದಾರೆ.

ಒಟ್ನಲ್ಲಿ, ಸನ್ನಿ ಲಿಯೋನ್ ಅವರ ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದ್ಹಾಗೆ, ಲೈಟರ್ ಇಟ್ಟುಕೊಂಡು ಟೀ ಮಾಡುವ ಐಡಿಯಾ ಸನ್ನಿಗೆ ಯಾರು ಕೊಟ್ಟರು ಅಂತ ಕೇಳ್ಬೇಡಿ. ಆ ಗುಟ್ಟನ್ನ ಸನ್ನಿ ಬಿಟ್ಟುಕೊಟ್ಟಿಲ್ಲ.

English summary
Bollywood Actress Sunny Leone gets trolled for making tea.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X